Job Description: ➤ ಉತ್ತರ ಪ್ರದೇಶದ ವಾರಣಾಸಿ ಸಮೀಪವಿರುವ ಪ್ರಾಚೀನ ಬೌದ್ಧ ಧಾರ್ಮಿಕ ಮತ್ತು ಐತಿಹಾಸಿಕ ಕೇಂದ್ರ ಸಾರನಾಥ (Sarnath) ಅಧಿಕೃತವಾಗಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ (UNESCO World Heritage List) ಸೇರ್ಪಡೆಯಾಗಿದೆ. ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ನಡೆದ ಯುನೆಸ್ಕೋ ವಿಶ್ವ ಪರಂಪರೆಯ ಸಮಿತಿಯ 48ನೇ ಅಧಿವೇಶನದಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಹೊಸ ಸೇರ್ಪಡೆಯೊಂದಿಗೆ, ಭಾರತದಲ್ಲ ಈಗ ಒಟ್ಟು 45 ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಿವೆ.➤ ಸಾರನಾಥದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ: ಗೌತಮ ಬುದ್ಧನು ಬೋಧಗಯಾದಲ್ಲಿ ಜ್ಞಾನೋದಯ (Enlightenment) ಪಡೆದ ನಂತರ, ಸಾರನಾಥದ ಋಷಿಪತನ (ಮೃಗದಾವ/ಜಿಂಕೆ ವನ) ಕ್ಕೆ ಆಗಮಿಸಿ, ತಮ್ಮ ಐವರು ಶಿಷ್ಯರಿಗೆ (ಪಂಚವರ್ಗೀಯ ಭಿಕ್ಷುಗಳು) ಪ್ರಥಮ ಬೋಧನೆ ನೀಡಿದರು. ಧಮ್ಮಚಕ್ಕಪ್ಪವತ್ತನ ಸುತ್ತ (Dhammacakkappavattana Sutta): ಬುದ್ಧರ ಪ್ರಥಮ ಧರ್ಮೋಪದೇಶವನ್ನು 'ಧರ್ಮಚಕ್ರ ಪ್ರವರ್ತನ' ಎನ್ನಲಾಗುತ್ತದೆ. ಇಲ್ಲಿ ಬುದ್ಧರು ಚತುರಾರ್ಯ ಸತ್ಯಗಳು (Four Noble Truths) ಮತ್ತು ಅಷ್ಟಾಂಗ ಮಾರ್ಗಗಳನ್ನು (Eightfold Path) ಜಗತ್ತಿಗೆ ಬೋಧಿಸಿದರು. ಸಾಮ್ರಾಟ್ ಅಶೋಕನ ಕೊಡುಗೆ: ಮೌರ್ಯ ಚಕ್ರವರ್ತಿ ಅಶೋಕನು ಕ್ರಿ.ಪೂ. 3ನೇ ಶತಮಾನದಲ್ಲಿ ಸಾರನಾಥಕ್ಕೆ ಭೇಟಿ ನೀಡಿ ಇಲ್ಲಿ ಹಲವು ಸ್ತೂಪಗಳು ಹಾಗೂ ಪ್ರಸಿದ್ಧ ಅಶೋಕ ಸ್ತಂಭವನ್ನು (Ashoka Pillar) ನಿರ್ಮಿಸಿದನು. ರಾಷ್ಟ್ರೀಯ ಲಾಂಛನ: ಸಾರನಾಥದಲ್ಲಿ ದೊರೆತ ಅಶೋಕನ ಚತುರ್ಮುಖ ಸಿಂಹ ಪೀಠವೇ (Lion Capital) ಭಾರತದ ಅಧಿಕೃತ ರಾಷ್ಟ್ರೀಯ ಲಾಂಛನವಾಗಿದೆ. ಹಾಗೆಯೇ ಇದರಲ್ಲಿದ್ದ 'ಅಶೋಕ ಚಕ್ರ'ವು ಭಾರತದ ರಾಷ್ಟ್ರೀಯ ಧ್ವಜದ ಮಧ್ಯಭಾಗದಲ್ಲಿದೆ. ➤ ಸಾರನಾಥದಲ್ಲಿರುವ ಪ್ರಮುಖ ಸ್ಮಾರಕಗಳು: ಧಮೇಕ್ ಸ್ತೂಪ (Dhamek Stupa): ಬುದ್ಧನು ತನ್ನ ಮೊದಲ ಉಪದೇಶ ನೀಡಿದ ನಿಖರ ಸ್ಥಳವನ್ನು ಗುರುತಿಸಲು ಈ ಬೃಹತ್ ಸ್ತೂಪವನ್ನು ನಿರ್ಮಿಸಲಾಗಿದೆ. ಚೌಖಂಡಿ ಸ್ತೂಪ (Chaukhandi Stupa): ಜ್ಞಾನೋದಯದ ನಂತರ ಬುದ್ಧನು ತನ್ನ ಮೊದಲ ಐವರು ಶಿಷ್ಯರನ್ನು ಭೇಟಿಯಾದ ಸ್ಥಳದ ನೆನಪಿಗಾಗಿ ಇದನ್ನು ನಿರ್ಮಿಸಲಾಗಿದೆ. ಅಶೋಕ ಸ್ತಂಭದ ಅವಶೇಷಗಳು: ಮೌರ್ಯ ಕಲೆಯ ಅತ್ಯುತ್ತಮ ಮಾದರಿಯಾಗಿದ್ದು, ಪ್ರಸ್ತುತ ಸಾರನಾಥ ವಸ್ತುಸಂಗ್ರಹಾಲಯದಲ್ಲಿ (Archaeological Museum) ಸಂರಕ್ಷಿಸಲಾಗಿದೆ. ಮೂಲಗಂಧ ಕುಟಿ ವಿಹಾರ: ಬುದ್ಧನು ಸಾರನಾಥದಲ್ಲಿದ್ದಾಗ ತಂಗುತ್ತಿದ್ದ ಪವಿತ್ರ ಸ್ಥಳ.