* 22 ಬಾರಿಯ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ವಿಜೇತ ದಿಗ್ಗಜ ಟೆನಿಸ್‌ ಆಟಗಾರ, ಜಗತ್ತು ಕಂಡ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರಾದ ರಫೆಲ್ ನಡಾಲ್ (Rafael Nadal), ಟೆನಿಸ್‌ಗೆ ಭಾವುಕ ವಿದಾಯ ಹೇಳಿದ್ದಾರೆ.* 'ಕಿಂಗ್ ಆಫ್ ಕ್ಲೇ' ಎಂದೇ ಜನಪ್ರಿಯರಾಗಿದ್ದ ಸ್ಪೇನ್ ನ ಟೆನಿಸ್ ದಿಗ್ಗಜ ರಫೆಲ್ ನಡಾಲ್ ಡೇವಿಸ್ ಕಪ್ ಕ್ವಾರ್ಟರ್ ಫೈನಲ್ ವಿದಾಯ ಪಂದ್ಯದಲ್ಲಿ ಸೋತು, ವೃತ್ತಿಬದುಕಿಗೆ ಸೋಲಿನ ವಿದಾಯ ಹೇಳಿದ್ದಾರೆ. * ನ.19 ರಂದು ನಡೆದ ನೆದರ್‌ಲ್ಯಾಂಡ್ (Netherland) ವಿರುದ್ಧದ ಡೇವಿಸ್ ಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆದರ್ಲೆಂಡ್ಸ್‌ ಆಟಗಾರ ಬೊಟಿಕ್ ವ್ಯಾನ್ ಡಿ ಜಾಂಡ್ಶುಲ್ಪ್ ವಿರುದ್ಧ 4-6, 4-6 ನೇರ ಸೆಟ್‌ಗಳಲ್ಲಿ ನಡಾಲ್‌ ಸೋಲನ್ನು ಅನುಭವಿಸಿದರು. ಈ ಮೂಲಕ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿಯನ್ನು ಘೋಷಿಸಿದರು.* 2024ರ ಅಕ್ಟೋಬರ್ ತಿಂಗಳಲ್ಲಿ ಡೇವಿಸ್ ಕಪ್ ತಮ್ಮ ಕೊನೆಯ ಪಂದ್ಯವಾಗಲಿದೆ ಎಂದು ಟೆನಿಸ್‌ ದಿಗ್ಗಜ ನಡಾಲ್‌ ಈ ಹಿಂದೆಯೇ ಹೇಳಿದ್ದರು. ಕ್ವಾರ್ಟರ್‌ ಫೈನಲ್‌ನಲ್ಲೇ ಮುಗ್ಗರಿಸಿದ ಅವರ ಭಾವುಕ ವಿದಾಯ ಹೇಳಿದ್ದಾರೆ.* 23 ವರ್ಷಗಳ ನಡಾಲ್ ತಮ್ಮ ವರ್ಣರಂಜಿತ ಟೆನಿಸ್ ಜೀವನದಲ್ಲಿ 22 ಗ್ರಾಂಡ್‌ ಸ್ಲಾಮ್ ಸಹಿತ ಹಲವು ಪ್ರಮುಖ ಪ್ರಶಸ್ತಿಗಳನ್ನು ನಡಾಲ್ ಗೆದ್ದಿದ್ದಾರೆ. ಇದರಲ್ಲಿ 14 ರೋಲಂಡ್ ಗ್ಯಾರೋಸ್‌ನ ಆವೆ ಅಂಕಣದಲ್ಲಿ ಗೆದ್ದ ಫ್ರೆಂಚ್ ಓಪನ್ ಪ್ರಶಸ್ತಿಗಳು ಸೇರಿವೆ.* 2004ರಲ್ಲಿ ವೃತ್ತಿಜೀವನಕ್ಕೆ ಕಾಲಿಟ್ಟ ರಫೆಲ್ 30 ಡೇವಿಸ್ ಕಪ್ ಸಿಂಗಲ್ಸ್ ಪಂದ್ಯಗಳಲ್ಲಿ 29 ಪಂದ್ಯಗಳನ್ನು ಗೆದ್ದಿದ್ದಾರೆ. ನೆದರ್‌ಲ್ಯಾಂಡ್ ವಿರುದ್ಧದ ಆಡಿದ ಕೊನೆಯ ಪಂದ್ಯದಲ್ಲಿ ಸೋಲನುಭವಿಸಿದರು.