* ಕೇಂದ್ರ ಸರಕಾರವು 15 ವರ್ಷಗಳಲ್ಲಿ ಮೊದಲ ಬಾರಿಗೆ ಗೋಧಿ ಮೇಲೆ ದಾಸ್ತಾನು ಮಿತಿ ಹೇರಿದ್ದು ಜೂನ್ 12 ರಂದು ಜಾರಿಯಾಗಿದ್ದು, ಇದು 2024ರ ಮಾರ್ಚ್‌ವರೆಗೆ ಜಾರಿಯಲ್ಲಿ ಇರಲಿದೆ. * ಈ ಹಿಂದೆ 2008ರಲ್ಲಿ ಗೋಧಿಗೆ ದಾಸ್ತಾನು ಮಿತಿ ಹೇರಲಾಗಿತ್ತು, ವರ್ತಕರು 3 ಸಾವಿರ ಟನ್, ರಿಟೇಲ್ ವರ್ತಕರಿಗೆ, ದೊಡ್ಡ ಪ್ರಮಾಣದಲ್ಲಿ ವಹಿವಾಟು ನಡೆಸುವ ಪ್ರತಿ ಮಳಿಗೆಗಳಿಗೆ 10 ಟನ್, ಸಂಸ್ಕರಣೆ ಮಾಡುವವರಿಗೆ ವಾರ್ಷಿಕ ಸಾಮರ್ಥ್ಯದ ಶೇ.28ರಷ್ಟು ಮಿತಿ ನಿಗದಿಪಡಿಸಲಾಗಿದೆ.* ದೇಶದಲ್ಲಿ ಸಾಕಷ್ಟು ದಾಸ್ತಾನು ಲಭ್ಯವಿರುವುದರಿಂದ ಗೋಧಿ ಆಮದು ನೀತಿಯನ್ನು ತಿರುಚುವ ಯಾವುದೇ ಯೋಜನೆಗಳಿಲ್ಲ, ಗೋಧಿ ರಫ್ತಿನ ಮೇಲಿನ ನಿಷೇಧ ಮುಂದುವರಿಯುತ್ತದೆ ಎಂದು ಆಹಾರ ಕಾರ್ಯದರ್ಶಿಯಾದ ಸಂಜೀವ್‌ ಚೋಪ್ರಾ ತಿಳಿಸಿದ್ದಾರೆ.