* ಭಾರತದ G20 ಪ್ರೆಸಿಡೆನ್ಸಿಯಡಿಯಲ್ಲಿ ಮೂರನೇ ಫ್ರೇಮ್‌ವರ್ಕ್ ವರ್ಕಿಂಗ್ ಗ್ರೂಪ್ ಸಭೆಯು ಜೂನ್ 13 ರಂದು  ಕೇರಳದ ಕೊಚ್ಚಿಯಲ್ಲಿ ಚಾಲನೆ ಪಡೆದಿದ್ದು, 2 ದಿನಗಳ ಈವೆಂಟ್‌ನಲ್ಲಿ G20 ಸದಸ್ಯ ರಾಷ್ಟ್ರಗಳು, ಆಹ್ವಾನಿತ ದೇಶಗಳು, ವಿವಿಧ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಸಂಸ್ಥೆಗಳಿಂದ 75ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.* ಕೇಂದ್ರ ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ ಡಾ.ವಿ ಅನಂತನಾಗೇಶ್ವರನ್, ಯುಕೆ ಖಜಾನೆ ಉಪನಿರ್ದೇಶಕ ಟಾಮ್ ಹೆಮಿಂಗ್ವೇ ಜಂಟಿಯಾಗಿ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ.* ಸದಸ್ಯ ರಾಷ್ಟ್ರಗಳ ನೀತಿ ಅನುಭವಗಳ ಹಂಚಿಕೆಯ ತಿಳುವಳಿಕೆಯನ್ನು ಅಭಿವೃದ್ಧಿಪಡಿಸುವುದು, ಜಾಗತಿಕ ಸಹಕಾರವು ದೇಶಗಳ ದೇಶೀಯ ಪ್ರಯತ್ನಗಳನ್ನು ಬೆಂಬಲಿಸಲು ಸಹಾಯ ಮಾಡುವ ಕ್ಷೇತ್ರಗಳನ್ನು ಅನ್ವೇಷಿಸಲು ಸಭೆಯ ಗುರಿಯಾಗಿದೆ.