Job Description: * ಪ್ರತಿ ವರ್ಷ ಏಪ್ರಿಲ್ 17ರಂದು ವಿಶ್ವ ಹಿಮೋಫಿಲಿಯಾ ದಿನವನ್ನು ಆಚರಿಸಲಾಗುತ್ತದೆ. ರಕ್ತ ಸಂಬಂಧಿ ಸಮಸ್ಯೆಯಾದ ಹಿಮೋಫೀಲಿಯಾ ಕುರಿತು ಅರಿವು ಮೂಡಿಸುಲು ಈ ದಿನವನ್ನು ಆಚರಿಸಲಾಗುತ್ತೆದೆ.* 2023ರ ಥೀಮ್‌ - ʼ'ಎಲ್ಲರಿಗೂ ಅವಕಾಶ: ಜಾಗತಿಕ ಮಾನದಂಡ ಆಧಾರದ ಮೇಲೆ ಆರೈಕೆಯಿಂದ ರಕ್ತಸಾವ್ರವನ್ನು ತಡೆಗಟ್ಟುವುದುʼ'* ವಿಶ್ವ ಹಿಮೋಫಿಲಿಯಾ ಸಂಘಟನೆಯ (WFH) ಸಂಸ್ಥಾಪಕರಾದ ಫ್ರ್ಯಾಂಕ್‌ ಸ್ಕಾನ್ಬೆಲ್‌ ಅವರ ಸ್ಮರಣೆಯೊಂದಿಗೆ ವಿಶ್ವ ಹಿಮೋಫಿಲಿಯಾ ದಿನವನ್ನು ಏಪ್ರಿಲ್‌ 17ರಂದು ಹಮ್ಮಿಕೊಳ್ಳಲಾಗುತ್ತದೆ. * 1989ರಿಂದ ಈ ದಿನದ ಆಚರಣೆ ಆರಂಭವಾಗಿದ್ದು, ಜನರಲ್ಲಿ ಹಿಮೋಫಿಲಿಯಾ ಅಥವಾ ವಿವಿಧ ರೀತಿಯ ರಕ್ತಸ್ರಾವ ರೋಗಗಳ ಕುರಿತು ಜಾಗೃತಿ ಮೂಡಿಸಿ ಅವರಿಗೆ ಉತ್ತಮ ಚಿಕಿತ್ಸೆ ದೊರಕುವಂತೆ ಮಾಡಿ, ಅವರ ಬದುಕನ್ನು ಉತ್ತಮಗೊಳಿಸುವ ಆಶಯ ಈ ದಿನದ್ದು.* ಹೈಮೊ ಎಂಬ ಗ್ರೀಕ್‌ ಪದದಿಂದ ಹುಟ್ಟಿಕೊಂಡ ಈ ಶಬ್ದಕ್ಕೆ ರಕ್ತ ಎಂಬ ಅರ್ಥವಿದೆ. ಫೀಲಿಯಾ ಎಂದರೆ ಪ್ರೀತಿ. ರಕ್ತವನ್ನು ಪ್ರೀತಿಸುವ ಕಾಯಿಲೆ ಎಂದು ಇದನ್ನು ಅರ್ಥಮಾಡಿಕೊಳ್ಳಬಹುದು. ರಕ್ತ ಹೆಪ್ಪುಗಟ್ಟಲು ಸುಮಾರು 13 ರಕ್ತಹೆಪ್ಪುಗಟ್ಟುವ ಅಂಶಗಳು ಅಥವಾ ಘಟಕಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತಿರುತ್ತವೆ. * ಈ ಘಟಕಗಳಲ್ಲಿ ಯಾವುದಾದರೊಂದು ಅಂಶ ಸರಿಯಾಗಿ ಕೆಲಸ ನಿರ್ವಹಿಸದೆ ಇದ್ದಲ್ಲಿ ಅಥವಾ ಅಂಶಗಳ ಕೊರತೆ ಉಂಟಾದಲ್ಲಿ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ರಕ್ತ ಹೆಪ್ಪುಗಟ್ಟದೆ ಹಿಮೋಫಿಲಿಯಾ ರೋಗ ಉಂಟಾಗುತ್ತದೆ.