* ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ನಿಂದಾಗಿ 5G ರೋಲ್ ಔಟ್ ವೇಗವನ್ನು ಪಡೆದುಕೊಂಡಿದ್ದರಿಂದ ಸರಾಸರಿ ಮೊಬೈಲ್ ವೇಗದಲ್ಲಿ ಏಪ್ರಿಲ್‌ನಲ್ಲಿ ಭಾರತವು ನಾಲ್ಕು ಸ್ಥಾನಗಳನ್ನು ಜಿಗಿದು 60ನೇ ಸ್ಥಾನದಲ್ಲಿದೆ.* ಇಂಟರ್ನೆಟ್ ಬಳಕೆ ಏರಿಕೆಗೆ ಗ್ರಾಮೀಣ ಭಾರತವು ಗಮನಾರ್ಹ ಕೊಡುಗೆ ನೀಡುತ್ತಿದೆ.* ಭಾರತವು ಈಗ ತಿಂಗಳಿಗೆ ಒಮ್ಮೆಯಾದರೂ ಇಂಟರ್ನೆಟ್ ಬಳಸುವ 759 ಮಿಲಿಯನ್ (75.0 ಕೋಟಿ) 'ಸಕ್ರಿಯ' ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ. 2025 ರ ವೇಳೆಗೆ ಈ ಸಂಖ್ಯೆ 900 ಮಿಲಿಯನ್ (90 ಕೋಟಿ) ತಲುಪಲಿದೆ ಎಂದು ವರದಿಯೊಂದು ಈ ಹಿಂದೆ ಬಿಡುಗಡೆಯಾಗಿತ್ತು. * ಸದ್ಯ 2022 ರಲ್ಲಿದ್ದಂತೆ ಸಕ್ರಿಯ ಇಂಟರ್ನೆಟ್ ಬಳಕೆದಾರರ ಪೈಕಿ 399 ಮಿಲಿಯನ್ ಜನ ಗ್ರಾಮೀಣ ಭಾಗದವರು ಮತ್ತು 360 ಮಿಲಿಯನ್ ಜನ ನಗರವಾಸಿಗಳು. ಅಂದರೆ ಇಂಟರ್ನೆಟ್ ಬಳಕೆ ಏರಿಕೆಗೆ ಗ್ರಾಮೀಣ ಭಾರತವು ಗಮನಾರ್ಹ ಕೊಡುಗೆ ನೀಡುತ್ತಿದೆ ಎಂಬುದು ಇದರಿಂದ ತಿಳಿದು ಬರುತ್ತದೆ ಎಂದು ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (IAMAI) ಮತ್ತು ಡೇಟಾ ಮತ್ತು ಅನಾಲಿಟಿಕ್ಸ್ ಕಂಪನಿ ಕಾಂಟರ್ ವರದಿ ಹೇಳಿದೆ.