* ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರನ್ನು 2 ನೇ ಅವಧಿಗೆ ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಲಾಗಿದ್ದು, ಡಿಕೆ  ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ  ಕಾಂಗ್ರೆಸ್ ಹೈಕಮಾಂಡ್ ಮೇ 18 (ಗುರುವಾರ) ರಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.* 2024 ಲೋಕಸಭೆ ಚುನಾವಣೆ ವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ ರವರು ಮುಂದುವರೆಯಲಿದ್ದಾರೆ ಎಂದು ತಿಳಿಸಲಾಗಿದ್ದು, ಮೇ 20 ರಂದು ನಡೆಯುವ ಸಮಾರಂಭದಲ್ಲಿ ಕೆಲವು ಶಾಸಕರು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವೇಣುಗೋಪಾಲ ರವರು ತಿಳಿಸಿದ್ದಾರೆ.