Job Description: * ಪ್ರಸ್ತುತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಔಷಧೀಯ ಸಸ್ಯಗಳು, ಗಿಡಮೂಲಿಕೆಗಳ ಉದ್ಯಾನ 'ಆರೋಗ್ಯ ವನ'ವನ್ನು ಉದ್ಘಾಟಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ರಾಷ್ಟ್ರಪತಿ ಕೋವಿಂದ್ ಅವರು ರಾಷ್ಟ್ರಪತಿಗಳ ಎಸ್ಟೇಟ್ ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ "ಆರೋಗ್ಯ ವನಂ"ನ್ನು ಉದ್ಘಾಟಿಸಿದ್ದಾರೆ. * ನೂತನವಾಗಿ ನಿರ್ಮಿಸಲಾಗಿರುವ "ಆರೋಗ್ಯ ವನಂ"ನ್ನು ಸರಿ ಸುಮಾರು 6.6 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಈ ವನವನ್ನು ಯೋಗ ಮುದ್ರೆಯಲ್ಲಿ ಕುಳಿತಿರುವ ಮನುಷ್ಯನ ಆಕಾರದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಈ ಉದ್ಯಾನದಲ್ಲಿ ಆಯುರ್ವೇದ ಚಿಕಿತ್ಸೆಯ ಉದ್ದೇಶಗಳಿಗಾಗಿ ಬಳಕೆ ಮಾಡಲು ಸರಿ ಸುಮಾರು 215 ಗಿಡಮೂಲಿಕೆಯ ಸಸ್ಯಗಳನ್ನು ಬೆಳೆಸಲಾಗಿದೆ ಎಂದು ರಾಷ್ಟ್ರಪತಿ ಭವನವು ಅಧಿಕೃತ ವರದಿ ಮಾಡಿದೆ. * ಈ ಉದ್ಯಾನದಲ್ಲಿ ನೀರಿನ ಕಾರಂಜಿಗಳು, ಯೋಗ ವೇದಿಕೆ, ನೀರಿನ ಕಾಲುವೆ, ಕಮಲದ ಕೊಳಗಳನ್ನೂ ನಿರ್ಮಿಸಲಾಗಿದೆ. ಆಯುರ್ವೇದ ಸಸ್ಯಗಳ ಮಹತ್ವ ಹಾಗೂ ಆ ಸಸ್ಯಗಳ ಪ್ರಯೋಜನಗಳನ್ನು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಆರೋಗ್ಯ ವನಂ ಪರಿಕಲ್ಪನೆಯನ್ನು ರೂಪಿಸಲಾಗಿದೆ. ಇದೀಗ ಆರೋಗ್ಯ ವನಂ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ.