Job Description: * ಪ್ರಸ್ತುತ ಟಾಟಾ ಗ್ರೂಪ್‌ ನ ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಸ್ಥಾನವನ್ನು ನಿರಾಕರಿಸಿದ ಟರ್ಕಿಯ 'ಇಲ್ಕರ್ ಐಸಿ'. * ಟಾಟಾ ಗ್ರೂಪ್‌ನ ಏರ್‌ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಹುದ್ದೆಗೆ ಟರ್ಕಿಯ 'ಇಲ್ಕರ್‌ ಐಸಿ' ನೇಮಿಸುವದಾಗಿ ಘೋಷಣೆಯಾದ ಬಳಿಕ ಭಾರತದಲ್ಲಿ ಈ ನೇಮಕಕ್ಕೆ ವಿರೋಧವಾಯಿತು ಈ ಕಾರಣದಿಂದಾಗಿ 'ಇಲ್ಕರ್‌ ಐಸಿ' ಅವರು CEO ಸ್ಥಾನವನ್ನು ವಹಿಸಿಕೊಳ್ಳಲು ನಿರಾಕರಿಸಿದ್ದಾರೆ. * ಇತ್ತೀಚಿಗಷ್ಟೇ ಟಾಟಾ ಸನ್ಸ್ ಟರ್ಕಿಯ ಏರ್‌ಲೈನ್ಸ್ ನ ಮಾಜಿ ಅಧ್ಯಕ್ಷ 'ಇಲ್ಕರ್‌ ಐಸಿ' ಅವರನ್ನು ಏರ್ ಇಂಡಿಯಾದ CEO ಹಾಗೂ MD ಆಗಿ ನೇಮಕ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿತ್ತು. ಇದಾದ ಬಳಿಕ RSS ನ ಮಾರ್ಗದರ್ಶಕ ಟರ್ಕಿಯಲ್ಲಿ ಈ ಹಿಂದಿನ ರಾಜಕೀಯ ಸಂಪರ್ಕಗಳನ್ನು ಪರಿಗಣಿಸಿ 'ಇಲ್ಕರ್‌ ಐಸಿ' ಅವರ ನೇಮಕಾತಿಯನ್ನು ತಡೆಹಿಡಿಯುವಂತೆ ಸರ್ಕಾರಕ್ಕೆ ಬೇಡಿಕೆಯನ್ನು ಇಟ್ಟಿದ್ದರು. * ಮೆಹ್ಮೆತ್ ಇಲ್ಕರ್ ಐಸಿ ಅವರೊಬ್ಬ ಟರ್ಕಿಷ್ ಉದ್ಯಮಿ. ಇವರು ಈ ಹಿಂದೆ 1994 ರಲ್ಲಿ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರ ಸಲಹೆಗಾರರಾಗಿದ್ದರು ಹಾಗೂ 2015 ರಿಂದ 2022 ರವರೆಗೆ ಟರ್ಕಿಶ್ ಏರ್‌ಲೈನ್ಸ್‌ನ ಅಧ್ಯಕ್ಷರಾಗುವ ಮುಂಚಿತವಾಗಿ ಟರ್ಕಿಶ್ ಕಂಪನಿಗಳ CEO ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇತ್ತೀಚಿಗೆ 2022 ರ ಜನವರಿಯಲ್ಲಿ ಏರ್ ಇಂಡಿಯಾದ ನೂತನ CEO ಮತ್ತು MD ಆಗಿ ನೇಮಕಗೊಂಡಿದ್ದರು, ನಂತರ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ.