Job Description: * ಪ್ರಸ್ತುತ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು FM ರೇಡಿಯೊ ಚಾನೆಲ್‌ಗಳಿಗೆ ಅಸಭ್ಯ ಹಾಗೂ ಆಕ್ಷೇಪಾರ್ಹ ವಿಷಯವನ್ನು ಪ್ರಸಾರ ಮಾಡದಂತೆ ನಿರ್ದೇಶನವನ್ನು ನೀಡಿದೆ. ಒಂದು ವೇಳೆ ಈ ನಿರ್ದೇಶನವನ್ನು ಪಾಲಿಸಲು ವಿಫಲವಾದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವದು. * ಇದೀಗ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತಿಳಿಸಿರುವ ಪ್ರಕಾರ ಒಂದು ವೇಳೆ ಅಸಭ್ಯ ವಿಷಯವನ್ನು ಪ್ರಸಾರ ಮಾಡಿದರೇ ಅದು ಅನುಮತಿ ಒಪ್ಪಂದದ (GOPA) ಸಂಪೂರ್ಣ ಉಲ್ಲಂಘನೆಯಾಗಿದೆ ಎಂದರ್ಥ ಎಂದು ತಿಳಿಸಿದೆ. * ಇತ್ತೀಚಿಗೆ ಕೆಲ FM ರೇಡಿಯೊ ಚಾನೆಲ್‌ಗಳಲ್ಲಿ ಅಸಭ್ಯ ವಿಷಯವನ್ನು ಪ್ರಸಾರ ಮಾಡಿರುವ ಹಿನ್ನಲೆಯಿಂದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ನಿರ್ದೇಶನವನ್ನು ನೀಡಿದೆ. ಪ್ರಸ್ತುತ FM ರೇಡಿಯೊ ಚಾನೆಲ್‌ಗಳಲ್ಲಿ ಜಾಕಿಗಳು ಬಳಕೆ ಮಾಡುವ ಭಾಷೆ ಅಸಭ್ಯ, ಬೇರೆ ರೀತಿಯ ಅರ್ಥ ನೀಡಿದರೆ ಅದು ಅಸಭ್ಯ ವರ್ತನೆ ಎಂದು ಪರಿಗಣಿಸಲಾಗುತ್ತದೆ ಹಾಗೂ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವಾಲಯವು ತಿಳಿಸಿದೆ. * FM ರೇಡಿಯೊ ಚಾನೆಲ್‌ಗಳಲ್ಲಿನ ಜಾಕಿಗಳು ಪ್ರಸಾರ ಮಾಡುವ ಯಾವುದೇ ವಿಷಯ, ಸಂದೇಶಗಳು, ಜಾಹೀರಾತು, ಆಕ್ಷೇಪಾರ್ಹ, ಅಶ್ಲೀಲ, ಅನಧಿಕೃತ ಅಥವಾ ಭಾರತದ ಕಾನೂನುಗಳಿಗೆ ಬದ್ದವಾಗಿವೆ ಎಂಬುವದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಒಂದು ವೇಳೆ ಈ ವಿಷಯಗಳನ್ನು ಮೀರಿ ಪ್ರಸಾರ ಮಾಡಿದರೇ ಅದು GOPA ಯ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದರ್ಥ ಎಂದು ತಿಳಿಸಿದೆ. * ಪ್ರಸ್ತುತ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು GOPA ಯಿಂದ ಅಧಿಕಾರವನ್ನು ಚಲಾಯಿಸುತ್ತದೆ, ಹೀಗಾಗಿ ಎಲ್ಲಾ FM ರೇಡಿಯೊ ಚಾನೆಲ್‌ಗಳು ನಿಯಮಗಳು ಹಾಗೂ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಬದ್ಧವಾಗಿರಬೇಕು ಹಾಗೂ ಉಲ್ಲಂಘನೆಯಲ್ಲಿ ಯಾವುದೇ ವಿಷಯವನ್ನು ಪ್ರಸಾರ ಮಾಡದಂತೆ ಸಲಹೆಯನ್ನು ನೀಡಲಾಗಿದೆ. ಈ ಕಾರಣದಿಂದಾಗಿ ಎಲ್ಲ ಚಾನಲ್‌ಗಳು ಅಸಭ್ಯ ವಿಷಯಗಳ ಪ್ರಸಾರದಲ್ಲಿ ವಿವೇಚನೆಯನ್ನು ನಿರ್ವಹಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ. * FM ಪ್ರಸಾರವು ಆವರ್ತನ ಮಾಡ್ಯುಲೇಷನ್ ಬಳಸಿಕೊಳ್ಳುವ ರೇಡಿಯೋ ಪ್ರಸಾರದ ಒಂದು ವಿಧಾನವಾಗಿದೆ. ಇದನ್ನು ಈ ಹಿಂದೆ 1933 ರಲ್ಲಿ ಅಮೇರಿಕನ್ ಇಂಜಿನಿಯರ್ ಎಡ್ವಿನ್ ಆರ್ಮ್ಸ್ಟ್ರಾಂಗ್ನಿಂದ ಆವಿಷ್ಕರಿಸಿದ್ದಾರೆ. ಪ್ರಸ್ತುತ ವೈಡ್-ಬ್ಯಾಂಡ್ FM'ನ್ನು ಪ್ರಸಾರ ರೇಡಿಯೊದಲ್ಲಿ ಹೆಚ್ಚಿನ ನಿಷ್ಠೆಯ ಧ್ವನಿಯನ್ನು ಕಲ್ಪಿಸಲು ಪ್ರಪಂಚದಾದ್ಯಂತ ಬಳಕೆಮಾಡಲಾಗುತ್ತದೆ. ಪ್ರಸ್ತುತ AM ನಲ್ಲಿ ಸಾಮಾನ್ಯವಾಗಿ ಕೇಳಿಬರುವ ಸ್ಥಿರ ಹಾಗೂ ಪಾಪಿಂಗ್ ಶಬ್ದಗಳನ್ನು ಕಡಿಮೆ ಮಾಡುವ, ಹಸ್ತಕ್ಷೇಪದ ಸಾಮಾನ್ಯ ಸ್ವರೂಪಗಳಿಗೆ ಕಡಿಮೆ ಒಳಗಾಗುತ್ತದೆ, ಈ ಹಿನ್ನಲೆಯಿಂದಾಗಿ FM'ನ್ನು ಸಂಗೀತ ಆಡಿಯೊದ ಹೆಚ್ಚಿನ ಪ್ರಸಾರಗಳಿಗೆ ಬಳಕೆ ಮಾಡಲಾಗುತ್ತದೆ. * ಪ್ರಸ್ತುತ FM ರೇಡಿಯೋ ಕೇಂದ್ರಗಳು ರೇಡಿಯೋ ತರಂಗಾಂತರಗಳ ಅತಿ ಹೆಚ್ಚಿನ ಆವರ್ತನ ಶ್ರೇಣಿಯನ್ನು ಬಳಕೆ ಮಾಡಿಕೊಳ್ಳುತ್ತವೆ.