Job Description: * ಪ್ರಸ್ತುತ ಈಜಿಪ್ಟ್‌ನ ಕೈರೊದಲ್ಲಿನ ISSF ವಿಶ್ವಕಪ್‌ ಟೂರ್ನಿಯಲ್ಲಿ ಭಾರತೀಯ ಯುವ ಶೂಟರ್‌ ಸೌರಭ್ ಚೌಧರಿ ಅವರು ಚಿನ್ನದ ಪದಕವನ್ನು ಜಯಿಸಿದ್ದಾರೆ. ಈ ISSF ಟೂರ್ನಿಯ 10 ಮೀ. ಏರ್‌ ಪಿಸ್ತೂಲ್ ನ ವಿಭಾಗದಲ್ಲಿ ಚಿನ್ನವನ್ನು ಪಡೆದು ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ. * ಭಾರತೀಯ ಯುವ ಶೂಟರ್‌ ಸೌರಭ್ ಚೌಧರಿ ಅವರು ಫೈನಲ್ ಹಂತದಲ್ಲಿ ಜರ್ಮನಿಯ ಮೈಕೆಲ್‌ ಶ್ವಾಲ್ಡ್‌ ಅವರನ್ನು ಸೋಲಿಸುವ ಮೂಲಕ 16 ಸ್ಕೋರ್ ದಾಖಲಿಸಿ ಚಿನ್ನದ ಪದಕವನ್ನು ಗೆದಿದ್ದಾರೆ. ಸೌರಭ್ ಚೌಧರಿ ಅವರು ಈ ಹಿಂದೆ ಏಷ್ಯನ್ ಗೇಮ್ಸ್ ಚಿನ್ನದ ಪದಕವನ್ನು ಗೆದಿದ್ದರು. * ಕಂಚಿನ ಪದಕವನ್ನು ರಷ್ಯಾದ ಅರ್ಟೆಮ್‌ ಚೆರ್ನೊಸೊವ್ ಅವರು ಜಯಿಸಿಕೊಂಡರು. ಪ್ರಸ್ತುತ ರಷ್ಯಾದ ಶೂಟರ್‌ಗಳಿಗೆ ಉಕ್ರೇನ್‌ನೊಂದಿಗಿರುವ ಯುದ್ಧದ ಸಂಘರ್ಷದಿಂದ ಅವರ ದೇಶದ ಧ್ವಜದಡಿ ಆಡಲು ಅವಕಾಶ ನೀಡಲಿಲ್ಲ. * ಭಾರತೀಯ ಯುವ ಶೂಟರ್‌ ಸೌರಭ್ ಚೌಧರಿ ಅವರು ಒಲಿಂಪಿಯನ್‌ ಮತ್ತು ಯೂತ್‌ ಒಲಿಂಪಿಕ್ಸ್ ಚಿನ್ನದ ಪದಕವನ್ನು ಗೆದಿದ್ದಾರೆ, ಹಾಗೂ 10 ಮೀ. ಏರ್‌ ಪಿಸ್ತೂಲ್‌ನ ಅರ್ಹತಾ ಸುತ್ತಿನಲ್ಲಿ 584 ಪಾಯಿಂಟ್ಸ್‌ ಗಳನ್ನೂ ಕಲೆಹಾಕುವ ಮೂಲಕ '3'ನೇ ವ್ಯಕ್ತಿಯಾಗಿ ಫೈನಲ್ಸ್‌ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. * 10 ಮೀ. ಏರ್‌ ಪಿಸ್ತೂಲ್‌ ಮಹಿಳಾ ವಿಭಾಗದಲ್ಲಿ ಇಶಾ ಸಿಂಗ್‌, ಶ್ರೀ ನಿವೇತಾ ಹಾಗೂ ರುಚಿತಾ ವಿನೆರ್ಕರ್ ಅವರು ಭಾರತದ ಪರವಾಗಿ ಆಟವಾಡಿದ್ದಾರೆ. * ಪ್ರಸ್ತುತ ಈಜಿಪ್ಟ್‌ನ ಕೈರೊದಲ್ಲಿನ ISSF ವಿಶ್ವಕಪ್‌ ಟೂರ್ನಿಯ ಫೆಬ್ರುವರಿ. 26 ರಂದು ಆರಂಭವಾಗಿ ಮಾರ್ಚ್‌. 8 ರವರೆಗೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಸುಮಾರು 60 ದೇಶಗಳ 500 ಕ್ಕೂ ಅಧಿಕ ಶೂಟರ್‌ಗಳು ಪಾಲ್ಗೊಂಡಿದ್ದಾರೆ. * ಒಲಂಪಿಕ್ ಶೂಟಿಂಗ್ ಸ್ಪರ್ಧೆಗಳಿಗೆ ಅರ್ಹತೆಗಾಗಿ ಏಕರೂಪದ ವ್ಯವಸ್ಥೆಯನ್ನು ಕಲ್ಪಿಸಲು, ಈ ಹಿಂದೆ 1986 ರಲ್ಲಿ ISSF ವಿಶ್ವಕಪ್'ನ್ನು ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ ಆರಂಭಿಸಿದೆ. ಹಾಗೂ ಇದನ್ನು ಒಲಿಂಪಿಕ್ ಶೂಟಿಂಗ್ ಈವೆಂಟ್‌ಗಳಲ್ಲಿ ನಡೆಸಲಾಗುತ್ತದೆ, 1988 ರಿಂದ ಈ ಈವೆಂಟ್‌ನ ಮೂಲಕ ಪ್ರತಿ ವರ್ಷಕ್ಕೆ '4' ಸ್ಪರ್ಧೆಗಳನ್ನೂ ಅತ್ಯುತ್ತಮ ಶೂಟರ್‌ಗಳಿಗಾಗಿ ವಿಶ್ವಕಪ್ ಫೈನಲ್ ನಡೆಸಲಾಗುತ್ತಿದೆ. * ರೈಫಲ್ ಹಾಗೂ ಪಿಸ್ತೂಲ್‌ನಲ್ಲಿನ ವಿಶ್ವಕಪ್ ಫೈನಲ್ ಪಂದ್ಯವನ್ನು ಮ್ಯೂನಿಚ್‌ನಲ್ಲಿ ISSF ಶೂಟಿಂಗ್ ಋತುವಿನ ಅಂತ್ಯದ ಸ್ಪರ್ಧೆಯಾಗಿ ಅತ್ಯಧಿಕವಾಗಿ ಆಡಿಸಲಾಗುತ್ತದೆ. ಶಾಟ್‌ಗನ್‌ನಲ್ಲಿ ವಿಶ್ವಕಪ್ ಫೈನಲ್‌ನ ಸ್ಥಳ ಹಾಗೂ ದಿನಾಂಕವು ಹೆಚ್ಚು ಹೊಂದಾಣಿಕೆಯಾಗುತ್ತವೆ. * ಫೈನಲ್‌ಗೆ ಅರ್ಹತೆ ಪಡೆದಿರುವ ಶೂಟರ್‌ಗಳು ವಿವರ: - ಹಾಲಿ ಒಲಿಂಪಿಕ್, ವಿಶ್ವ, ISSF ವಿಶ್ವಕಪ್ ಫೈನಲ್ ಚಾಂಪಿಯನ್‌ಗಳು. - ಇತ್ತೀಚಿಗೆ ನಡೆದಿರುವ ಯಾವುದೇ ಸ್ಪರ್ಧೆಗಳ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರು. - ವರ್ಷದಲ್ಲಿನ ವಿಶ್ವಕಪ್ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಎಂಟು ಶೂಟರ್‌ಗಳು. - ಆತಿಥೇಯ ರಾಷ್ಟ್ರದಿಂದ ಒಂದು ವೇಳೆ ಯಾರೊಬ್ಬರೂ ಅರ್ಹತೆ ಪಡೆಯದಿದ್ದಲ್ಲಿ ಎರಡು ವಿಶ್ವಕಪ್ ಫೈನಲ್ ಈವೆಂಟ್‌ಗಳಲ್ಲಿ ಸ್ಪರ್ಧಿಸಲು ಆತಿಥೇಯ ದೇಶದ ಇಬ್ಬರು ಶೂಟರ್‌ಗಳನ್ನು ನಾಮನಿರ್ದೇಶನ ಮಾಡಬಹುದಾಗಿದೆ.