Job Description: * ಜಗತ್ತಿನಾದ್ಯಂತ ಪ್ರತಿ ವರ್ಷವು ಮಾರ್ಚ್. 01 ರಂದು ಜನರು ಜಾಗತಿಕ ಸಿವಿಲ್‌ ಡಿಫೆನ್ಸ್‌ ದಿನಾಚರಣೆ ಅಥವಾ ವಿಶ್ವ ನಾಗರಿಕ ಪಡೆ ದಿನವನ್ನು(World Civil Defence Day) ಆಚರಣೆ ಮಾಡಲಾಗುತ್ತದೆ. ಈ ಹಿಂದೆ 1990 ರಲ್ಲಿ ಇಂಟರ್‌ನ್ಯಾಷನಲ್ ಸಿವಿಲ್ ಡಿಫೆನ್ಸ್ ಆರ್ಗನೈಸೇಶನ್ ಜಾಗತಿಕ ರಜಾದಿನ ಎಂದು ಘೋಷಣೆ ಮಾಡಿದೆ. * ಈ ವಿಶ್ವ ನಾಗರಿಕ ಪಡೆ ದಿನವು ನಾಗರಿಕ ರಕ್ಷಣೆಯ ಮಹತ್ವ ಹಾಗೂ ಅದಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸಿಬ್ಬಂದಿಯನ್ನು ಗೌರವಿಸುವ ಸಲುವಾಗಿ ಆಚರಿಸಲಾಗುತ್ತದೆ. ICDO ಎಂಬುದು ಅಂತರ್ ಸರ್ಕಾರಿ ಸಂಸ್ಥೆಯಾಗಿದೆ, ಈ ಸಂಸ್ಥೆಯು ನಾಗರಿಕರು ಅಭಿವೃದ್ಧಿಯನ್ನು ಹೊಂದಲು ಹಾಗೂ ಸುರಕ್ಷಿತವಾಗಿರಲು ಅವಕಾಶವನ್ನು ನೀಡುತ್ತದೆ. * ಈ ICDO ನಾಗರಿಕ ರಕ್ಷಣೆಗೆ ಮೀಸಲಾಗಿದೆ. ಪ್ರಸ್ತುತ ಅಂತಾರಾಷ್ಟ್ರೀಯ ನಾಗರಿಕ ರಕ್ಷಣಾ ಸಂಸ್ಥೆಯು 58 ಸದಸ್ಯ ರಾಷ್ಟ್ರಗಳು ಹಾಗೂ 17 ವೀಕ್ಷಕ ದೇಶಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ ಸದಸ್ಯ ರಾಷ್ಟ್ರಗಳ ನಾಗರಿಕ ರಕ್ಷಣಾ ಪಡೆ ಸಿಬ್ಬಂದಿಯ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲು ಅನೇಕ ರೀತಿಯ ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. * ವಿಶ್ವ ನಾಗರಿಕ ಪಡೆ ದಿನವನ್ನು ಅಂತಾರಾಷ್ಟ್ರೀಯ ನಾಗರಿಕ ರಕ್ಷಣಾ ಸಂಸ್ಥೆ ಆರಂಭಿಸಿದೆ. ಪ್ರಸ್ತುತ ಇಂಟರ್ನ್ಯಾಷನಲ್ ಸಿವಿಲ್ ಡಿಫೆನ್ಸ್ ಆರ್ಗನೈಸೇಶನ್(ICDO). ಈ ಹಿಂದೆ 1931 ರಲ್ಲಿ ಸರ್ಜನ್-ಜನರಲ್ ಜಾರ್ಜ್ ಸೇಂಟ್-ಪಾಲ್ ಅವರು ಜಿನೀವಾ ವಲಯಗಳ ಸಂಘವನ್ನು ಸ್ಥಾಪನೆ ಮಾಡಿದ್ದಾರೆ. ನಂತರದ ದಿನಗಳಲ್ಲಿ ಇದು ICDO ಯಾಗಿದೆ. * ಸಿವಿಲ್ ಡಿಫೆನ್ಸ್'ನ್ನು ನಾಗರಿಕ ರಕ್ಷಣೆ ಎನ್ನಲಾಗುತ್ತದೆ. ಇದು ನಾಗರಿಕರಿಗೆ ನೈಸರ್ಗಿಕ ವಿಕೋಪಗಳಿಂದ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂದು ಕಲಿಸಿಕೊಡುತ್ತದೆ. ಇದರ ಜೊತೆಗೆ ವಿಕೋಪಗಳನ್ನು ಯಾವ ರೀತಿಯಲ್ಲಿ ತಡೆಗಟ್ಟಬಹುದು, ಹಾಗೂ ಆ ವಿಕೋಪಗಳು ಸಂಭವಿಸಿದ ನಂತರ ಯಾವ ರೀತಿ ತಯಾರಿ ನಡೆಸಬೇಕು, ಅಲ್ಲಿಂದ ಜನರನ್ನು ಹೇಗೆ ಸ್ಥಳಾಂತರ ಮಾಡುವುದು ಎಂಬುದನ್ನು ಕಲಿಸಿಕೊಡುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಅಂತಾರಾಷ್ಟ್ರೀಯ ಸಿವಿಲ್‌ ಡಿಫೆನ್ಸ್‌ ಸಂಸ್ಥೆ (ICDO) ರೂಪವಾಗಿ ಅಸ್ತಿತ್ವದಲ್ಲಿದೆ. * ಪ್ರಸ್ತುತ ಸಂವಿಧಾನವನ್ನು ಈ ಹಿಂದೆ 1972 ರಲ್ಲಿ ICDO ದ ಸಂಸ್ಥೆಯ ಸದಸ್ಯ-ರಾಜ್ಯಗಳು ಅನುಮೋದಿಸಿದ್ದವು ಹಾಗೂ ಅದೇ ವರ್ಷದ ಮಾರ್ಚ್. 1 ರಂದು ಜಾರಿಗೆ ತಂದಿವೆ. ಈ ಕಾರಣಗಳಿಂದಾಗಿ ಮಾರ್ಚ್‌. 1 ರಂದು ವಿಶ್ವ ಸಿವಿಲ್‌ ಡಿಫೆನ್ಸ್‌ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತಿದೆ. * ಪ್ರಸ್ತುತ ಈ ವಿಶ್ವ ಸಿವಿಲ್‌ ಡಿಫೆನ್ಸ್‌ ದಿನವು ರಾಷ್ಟ್ರೀಯ ವಿಪತ್ತು-ತಡೆಗಟ್ಟುವಿಕೆ ಸೇವೆಗಳಿಗೆ ಗೌರವನ್ನು ಸಲ್ಲಿಸುವ ಉದ್ದೇಶವಾಗಿದೆ. ಹಾಗೂ ಈ ದಿನವೂ ವಿಪತ್ತುಗಳು ಸಂಭವಿಸಿದ ಸಮಯಗಳಲ್ಲಿ ಯಾವ ರೀತಿಯಲ್ಲಿ ಆತ್ಮರಕ್ಷಣೆ ಹಾಗೂ ತಡೆಗಟ್ಟುವಿಕೆಯ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. * ಪ್ರಸ್ತುತ 'ನಾಗರಿಕ ರಕ್ಷಣೆ ಹಾಗೂ ಪ್ರತಿ ಮನೆಯಲ್ಲೂ ಫಸ್ಟ್‌ ಏಡ್‌ ಮಾಡುವವರನ್ನು ಹೊಂದುವುದು' 2022 ರ ವಿಶ್ವ ಸಿವಿಲ್‌ ಡಿಫೆನ್ಸ್‌ ದಿನಾಚರಣೆಯ ಧ್ಯೇಯ ವ್ಯಾಕವಾಗಿದೆ.