Job Description: * ವೆಸ್ಟ್‌ ಇಂಡೀಸ್‌ನ ಮಾಜಿ ಕ್ರಿಕೆಟಿಗ, ಹಾಗೂ ಸ್ಪಿನ್ನರ್‌ ಸೋನಿ ರಾಮಧಿನ್‌ ಅವರು ತಮ್ಮ 92 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. * ಸೋನಿ ರಾಮಧಿನ್‌ ಅವರು ಟ್ರಿನಿಡಾಡ್‌ ಆಯಂಡ್‌ ಟೊಬಾಗೊ ದ್ವೀಪದವರಾಗಿದ್ದಾರೆ, ಇವರು ವೆಸ್ಟ್‌ ಇಂಡೀಸನ್ನು ಪ್ರತಿನಿಧಿಸಿದ ಮೊದಲ ಈಸ್ಟ್‌ ಇಂಡಿಯನ್‌ ಆಟಗಾರರಾಗಿದ್ದಾರೆ. ಇವರು ತಮ್ಮ ಉತ್ತಮ ಬೌಲಿಂಗ್‌ ಶೈಲಿಯಲ್ಲಿ ಬಲಗೈ ಆಫ್‌ಬ್ರೇಕ್‌ ಹಾಗೂ ಲೆಗ್‌ಬ್ರೇಕ್‌ ಎಸೆತಗಳನ್ನು ಎಸೆಯುತ್ತಿದ್ದರು ಇದೇ ಇವರ ವೈಶಿಷ್ಟ್ಯವಾಗಿದೆ. * ವೆಸ್ಟ್‌ ಇಂಡೀಸ ನ ಮಾಜಿ ಕ್ರಿಕೆಟಿಗ ಸೋನಿ ರಾಮಧಿನ್‌ ಅವರು 43 ಟೆಸ್ಟ್‌ಗಳಲ್ಲಿ 158 ವಿಕೆಟ್‌ ಗಳನ್ನೂ ಪಡೆದುಕೊಂಡು ಮಾಡಿದ್ದಾರೆ. ಸರಿ ಸುಮಾರು 72 ವರ್ಷಗಳ ಹಿಂದೆ ಐತಿಹಾಸಿಕ ಲಾರ್ಡ್ಸ್‌ನಲ್ಲಿ ವೆಸ್ಟ್‌ ಇಂಡೀಸ್‌ ರಾಮಧಿನ್‌ ಅವರು ಪಡೆದಿರುವ ವಿಕೆಟ್'ಗಳಿಂದ ಇಂಗ್ಲೆಂಡ ತಂಡಕ್ಕೆ ಟೆಸ್ಟ್‌ ಸೋಲಿನ ರುಚಿಯನ್ನು ತೋರಿಸಿದ್ದಾರೆ. * ಸನ್ನಿ ರಾಮದಿನ್ ಅವರು ವೆಸ್ಟ್ ಇಂಡಿಯನ್ ಕ್ರಿಕೆಟಿ ಆಟಗಾರ ಹಾಗೂ 1950 ರ ದಶಕದ ಪ್ರಬಲ ಬೌಲರ್ ಇವರಾಗಿದ್ದರು. ಈ ಹಿಂದೆ 1951 ರಲ್ಲಿ ವರ್ಷದ '5' ವಿಸ್ಡನ್ ಕ್ರಿಕೆಟಿಗರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ. 'ವಿಕ್ಟರಿ ಕ್ಯಾಲಿಪ್ಸೊ' ಇವರು ಚೆಂಡನ್ನು ಎರಡೂ ಕಡೆ ತಿರುಗಿಸುವ ಸಾಮರ್ಥ್ಯಕ್ಕೆ ಉತ್ತಮ ಹೆಸರನ್ನು ಪಡೆದಿದ್ದಾರೆ. ಈ ಹಿಂದೆ 1950 ರಲ್ಲಿ ಇವರು ಇಂಗ್ಲಿಷ್ ನೆಲದಲ್ಲಿ '3' ಟೆಸ್ಟ್ ಸರಣಿ ಗೆಲುವು ದಾಖಲಿಸಿದ ವೆಸ್ಟ್ ಇಂಡೀಸ್ ತಂಡದ ಕೊನೆಯ ಸದಸ್ಯ ಇವರಾಗಿದ್ದಾರೆ.