Job Description: * ಪ್ರಸ್ತುತ 2022 ರ ಫೆಬ್ರವರಿ. 28 ರಂದು ಸ್ಪೇನ್‌'ನ ಬಾರ್ಸಿಲೋನಾದಲ್ಲಿ 'ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC)' ನಲ್ಲಿ ಜಾಗತಿಕ ಮೊಬೈಲ್ ಆರ್ಥಿಕ ವರದಿಯನ್ನು ಪ್ರದರ್ಶಿಸಿದೆ. ಈ ಜಾಗತಿಕ ಮೊಬೈಲ್ ಆರ್ಥಿಕ ವರದಿಯು ಜಾಗತಿಕವಾಗಿ ಒಟ್ಟಾರೆ 5G ಸಂಪರ್ಕಗಳ ಸಂಖ್ಯೆ 2022 ರಲ್ಲಿ 1 ಬಿಲಿಯನ್ ಗೇರುವ ಸಾಧ್ಯತೆಯಿದೆ ಎಂದು ತೋರಿಸಿದೆ. * ಈ ಹಿಂದೆ 2021 ರಲ್ಲಿ ಮೊಬೈಲ್ ತಂತ್ರಜ್ಞಾನಗಳು ಹಾಗೂ ಸೇವೆಗಳು USD 4.5 ಟ್ರಿಲಿಯನ್ ಆರ್ಥಿಕ ಮೌಲ್ಯವನ್ನು ಉತ್ಪಾದಿಸಿದೆ. ಈ ಉತ್ಪಾದನೆಯು ಜಾಗತಿಕ GDP ಯ 5% ಕ್ಕೆ ಸಮವಾಗಿದೆ. ಹಾಗೂ ಇದು 2025 ರಲ್ಲಿ USD 5 ಟ್ರಿಲಿಯನ್‌ಗೆ ಏರಿಕೆಯಾಗುವ ನಿರೀಕ್ಷೆಯಿದೆ. * ಮುಂಬರುವ 2025 ರ ಅಂತ್ಯದ ವೇಳೆಗೆ, 5G ಒಟ್ಟು ಮೊಬೈಲ್ ಸಂಪರ್ಕಗಳ ಕಾಲು ಭಾಗದಷ್ಟು ಖಾತೆಯನ್ನು ಹೊಂದಿರಲಿವೆ. ಹಾಗೂ ಪ್ರಪಂಚದಾದ್ಯಂತ '5' ಜನರಲ್ಲಿ ಇಬ್ಬರು 5G ನೆಟ್‌ವರ್ಕ್‌ನ ಬಳಕೆ ಮಾಡುತ್ತಿರುತ್ತಾರೆ. * 5G ಸಂಪರ್ಕಕ್ಕಾಗಿ ಸಾರ್ವಜನಿಕ ಹಣವನ್ನು ಬಳಕೆ ಮಾಡುವದು, ಡಿಜಿಟಲ್ ಕೌಶಲ್ಯ ತರಬೇತಿಯಲ್ಲಿ ಹೂಡಿಕೆ, ಸರ್ಕಾರಿ ಸೇವೆಗಳಲ್ಲಿ ಡಿಜಿಟಲ್ ರೂಪಾಂತರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವದರ ಜೊತೆಗೆ ಮೊಬೈಲ್ ವಲಯದಲ್ಲಿ ಶುಲ್ಕ ಹಾಗೂ ತೆರಿಗೆಗಳ ಮೂಲಕ ಆದಾಯವನ್ನು ಸಂಗ್ರಹಿಸಲು ಸಮತೋಲಿತ ವಿಧಾನವನ್ನು ಬಳಸಿಕೊಳ್ಳುವದು. ನಂತರ ಸಾಂಕ್ರಾಮಿಕವನ್ನು ಸಾಧಿಸಲು ಪ್ರಮುಖವಾಗಿದೆ ಎಂದು GSMA ವರದಿ ಮಾಡಿದೆ. * 2025 ರ ವೇಳೆಗೆ 4G ಅಳವಡಿಕೆಯು ಜಾಗತಿಕವಾಗಿ ಒಟ್ಟಾರೆ ಸಂಪರ್ಕಗಳಲ್ಲಿ 55% ರಷ್ಟು ಪಾಲನ್ನು ಹೊಂದಲಿದೆ. ಪ್ರಸ್ತುತ 4G ಅಳವಡಿಕೆಯು ಆಫ್ರಿಕಾದಲ್ಲಿ ಬೆಳೆಯಲು ಹೆಚ್ಚಿನ ಸ್ಥಳವನ್ನು ಒಳಗೊಂಡಿದೆ, 4G ಅಳವಡಿಕೆಯು ಒಟ್ಟು ಸಂಪರ್ಕಗಳ 5ನೇ ಒಂದು ಭಾಗಕ್ಕಿಂತ ಕಡಿಮೆಯಾಗಿದೆ. * ಪ್ರಸ್ತುತ ರಷ್ಯಾ-ಉಕ್ರೇನ್ ಯುದ್ಧ ಸಂದರ್ಭದಲ್ಲಿ ನಡುವೆ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಡೆಯುತ್ತಿದೆ. ಹಾಗೂ ಇದು ಕಾಂಗ್ರೆಸ್ 5G ಮೇಲೆ ಕೇಂದ್ರೀಕರಿಸುವದರ ಜೊತೆಗೆ ದೇಶಗಳು ಹಾಗೂ ಆರ್ಥಿಕತೆಗಳಿಗೆ ಅನುಕೂಲವಾಗುವಂತೆ ಅವುಗಳ ಸಾಮರ್ಥ್ಯವನ್ನು ವೃದಿಸುತ್ತದೆ. ಹಾಗೂ ಉನ್ನತ ಟೆಲಿಕಾಂ ಧ್ವನಿಗಳಿಂದ ಪ್ರಮುಖ ಸೆಷನ್‌ಗಳಿಗೆ ಸಾಕ್ಷಿಯಾಗಲಿವೆ. - ಭಾರತಿ ಎಂಟರ್‌ಪ್ರೈಸಸ್ ಅಧ್ಯಕ್ಷ ಸುನಿಲ್ ಭಾರತಿ ಮಿತ್ತಲ್ - ಅಮೆಜಾನ್ ವೆಬ್ ಸೇವೆಗಳ CEO, ಆಡಮ್ ಸೆಲಿಪ್ಸ್ಕಿ - ಎಫ್‌ಸಿಸಿ ಅಧ್ಯಕ್ಷೆ, ಜೆಸ್ಸಿಕಾ ರೋಸೆನ್‌ವರ್ಸೆಲ್ - ಕ್ವಾಲ್ಕಾಮ್ಮ್(Qualcomm)ನ ಅಧ್ಯಕ್ಷ ಮತ್ತು CEO, ಕ್ರಿಸ್ಟಿಯಾನೋ ಅಮನ್.