Job Description: * ಪ್ರಸ್ತುತ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಹಾಗೂ ಇಸ್ರೇಲ್‌ ಬಾಹ್ಯಾಕಾಶ ಸಂಸ್ಥೆ (ISA)ಗಳು ಬಾಹ್ಯಾಕಾಶ ಅಧ್ಯಯನದಲ್ಲಿ ಜಂಟಿ ಸಹಭಾಗಿತ್ವದ ಅಡಿಯಲ್ಲಿ ಒಟ್ಟಿಗೆ ಸೇರಿ ಕಾರ್ಯನಿರ್ವಹಿಸಲು ಲಭ್ಯವಿರುವ ಅವಕಾಶಗಳ ಬಗ್ಗೆ ಚರ್ಚಿಸಲು ಇತ್ತೀಚಿಗೆ ಬೆಂಗಳೂರಿನಲ್ಲಿರುವ ISRO ಕೇಂದ್ರ ಕಚೇರಿಯಲ್ಲಿ ಸಭೆಯನ್ನು ನಡೆಸಿವೆ. * ಭಾರತದಲ್ಲಿರುವ ಇಸ್ರೇಲ್‌ ರಾಯಭಾರಿ ನೆಯೊರ್‌ ಗಿಲೊನ್‌, ಹಾಗೂ ಇಸ್ರೋ ಅಧ್ಯಕ್ಷ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಎಸ್‌. ಸೋಮನಾಥ್‌ ಅವರು ಈ ಕಾರ್ಯಕರ್ಮದಲ್ಲಿ ಪಾಲ್ಗೊಂಡಿದ್ದರು. * ಇದೀಗ ಭಾರತವು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಗಳನ್ನು ಮಾಡಲು ಸಹಾಯ ಮಾಡಿಕೊಡುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರಗಳನ್ನು ತಗೆದುಕೊಳ್ಳಲಾಗುವದು ಎಂದು ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆಯನ್ನು ನೀಡಿದ ಕಾರಣದಿಂದಾಗಿ ಈ ಸಭೆಯನ್ನು ನಡೆಸಲಾಗಿದೆ. * ಈ ಹಿಂದಿನ ವರ್ಷದಲ್ಲಿ ಭಾರತೀಯ ಇಸ್ರೋ, ಇಸ್ರೇಲ್'ನ ಐಎಸ್‌ಎ, ಜಂಟಿಯಾಗಿ ನಿರ್ಮಿಸಿರುವ ಸಣ್ಣ ಉಪಗ್ರಹಗಳಿಗಾಗಿ ಅಭಿವೃದ್ಧಿ ಪಡಿಸಲಾಗುತ್ತಿರುವ ಇಲೆಕ್ಟ್ರಿಕ್‌ ಪ್ರೊಪಲಂನ್ ಸಿಸ್ಟಂ (EPS) ಮತ್ತು ಜಿಯೋ-ಲಿಯೋ ತಂತ್ರಜ್ಞಾನದ ಪರಿಶೀಲನೆಯನ್ನು ಮಾಡಿವೆ. * ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಇದೊಂದು ಭಾರತದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯಾಗಿದೆ. ಈ ಸಂಸ್ಥೆಯು ತನ್ನ ಪ್ರಧಾನ ಕಛೇರಿಯನ್ನು ಕರ್ನಾಟಕ ರಾಜ್ಯದ ಬೆಂಗಳೂರು ನಗರದಲ್ಲಿ ಹೊಂದಿದೆ. ಪ್ರಸ್ತುತ ಈ ಸಂಸ್ಥೆಯು ಬಾಹ್ಯಾಕಾಶ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಅಷ್ಟೇ ಅಲ್ಲದೇ ಈ ಸಂಸ್ಥೆಯನ್ನು ಭಾರತೀಯ ಪ್ರಧಾನ ಮಂತ್ರಿಯವರು ನೇರವಾಗಿ ಮೇಲ್ವಿಚಾರಣೆ ಮಾಡುತ್ತಾರೆ. * ಪ್ರಸ್ತುತ ISRO ಅಧ್ಯಕ್ಷರು ಬಾಹ್ಯಾಕಾಶ ಇಲಾಖೆಯ ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಾರೆ. ಈ ISRO ಬಾಹ್ಯಾಕಾಶ ಪರಿಶೋಧನೆ ಹಾಗೂ ಸಂಬಂಧಿತ ತಂತ್ರಜ್ಞಾನಗಳ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುವ ಭಾರತದಲ್ಲಿನ ಪ್ರಾಥಮಿಕ ಸಂಸ್ಥೆಯಾಗಿದೆ. ಇದೊಂದು ಸಂಪೂರ್ಣ ಉಡಾವಣಾ ಸಾಮರ್ಥ್ಯಗಳನ್ನು ಹೊಂದಿರುವ ವಿಶ್ವದ '6' ಸರ್ಕಾರಿ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಇದು ಕೂಡ ಒಂದಾಗಿದೆ. * ವಿಜ್ಞಾನಿ ವಿಕ್ರಮ್ ಸಾರಾಭಾಯ್ ಅವರು ಬಾಹ್ಯಾಕಾಶ ಸಂಶೋಧನೆಯ ಅಗತ್ಯವನ್ನು ಗುರುತಿಸಿ 1962 ರಲ್ಲಿ ಅಣುಶಕ್ತಿ ಇಲಾಖೆ ಅಡಿಯಲ್ಲಿ ಜವಾಹರಲಾಲ್ ನೆಹರು ಅವರು ಬಾಹ್ಯಾಕಾಶ ಸಂಶೋಧನೆಗಾಗಿ ಭಾರತೀಯ ರಾಷ್ಟ್ರೀಯ ಸಮಿತಿಯನ್ನು ಸ್ಥಾಪನೆ ಮಾಡಿದರು. ನಂತರ ಈ ಸಂಸ್ಥೆಯು 1969 ರಲ್ಲಿ DAE ಬೆಳೆದು ISRO ಆಗಿ ಪರಿವರ್ತನೆಯಾಯಿತು.