Job Description: * ಭಾರತೀಯ ರಿಸರ್ವ್ ಬ್ಯಾಂಕ್ (RBI) ಪಿಸಿ(PC) ಫೈನಾನ್ಷಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್'ನ ನೋಂದಣಿ ಪ್ರಮಾಣಪತ್ರವನ್ನ ರದ್ದುಗೊಳಿಸಲಾಗಿದೆ ಎಂದು ಅಧಿಕೃತವಾಗಿ ಹೇಳಿಕೆ ನೀಡಿದೆ. * ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ, 1934ರ ಸೆಕ್ಷನ್ 45-ಐಎ (6) (4)ರ ಅಡಿಯಲ್ಲಿ ಕಲ್ಪಿಸಲಾಗಿರುವ ಅಧಿಕಾರಗಳನ್ನ ಚಲಾಯಿಸುವ ಮೂಲಕ, ನವದೆಹಲಿಯ PC ಫೈನಾನ್ಷಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್'ಗೆ ನೀಡಲಾಗಿರುವ ನೋಂದಣಿ ಪ್ರಮಾಣಪತ್ರವನ್ನು RBI ರದ್ದುಗೊಳಿಸಿದೆ. ಇದೀಗ ಪಿಸಿ ಫೈನಾನ್ಷಿಯಲ್ ಸರ್ವೀಸಸ್ ಎನ್ ಬಿಎಫ್ ಐ (ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆ)ಯು ವ್ಯವಹಾರಗಳ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ. * ಇತ್ತೀಚಿಗೆ ಪಿಸಿ ಫೈನಾನ್ಷಿಯಲ್ ಸರ್ವೀಸಸ್ ಪ್ರಾಥಮಿಕವಾಗಿ 'ಕ್ಯಾಶ್ ಬೀನ್' ಎಂಬ ಆಪ್'ನ ಮುಖಾಂತರ ಮೊಬೈಲ್ ಅಪ್ಲಿಕೇಶನ್ ಆಧಾರಿತ ಸಾಲ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿತ್ತು, ಆದರೆ ಇದು KYC ನಿಯಮಗಳಲ್ಲಿ RBI ನ ನಿರ್ದೇಶನಗಳ ಸಂಪೂರ್ಣ ಉಲ್ಲಂಘನೆ ಮಾಡಿದೆ ಈ ಹಿನ್ನಲೆಯಿಂದಾಗಿ ಕಂಪನಿಯ ನೋಂದಣಿ ಪ್ರಮಾಣಪತ್ರವನ್ನ ರದ್ದು ಪಡಿಸಲಾಗಿದೆ ಎಂದು RBI ತಿಳಿಸಿದೆ. * ಪ್ರಸ್ತುತ KYC ಯು ಗ್ರಾಹಕರು ಹಾಗೂ ಹೂಡಿಕೆ ಸಲಹೆಗಾರರನ್ನು ರಕ್ಷಿಸುತ್ತದೆ. ಇದೀಗ ಗ್ರಾಹಕರು ತಮ್ಮ ಹೂಡಿಕೆ ಸಲಹೆಗಾರರಿಗೆ ತಮ್ಮ ವೈಯಕ್ತಿಕ ಸನ್ನಿವೇಶಗಳಿಗೆ ಯಾವತರಹದ ಹೂಡಿಕೆಗಳು ಉತ್ತಮವಾಗಿ ಹೋಲಿಕೆಯಾಗುತ್ತವೆ ಎಂಬುದನ್ನು ತಿಳಿಸುವ ಮೂಲಕ ರಕ್ಷಣೆ ನೀಡುತ್ತದೆ. ಇದರ ಜೊತೆಯಲ್ಲಿ ಹೂಡಿಕೆ ಸಲಹೆಗಾರರು ತಮ್ಮ ಕ್ಲೈಂಟ್‌ನ ಪೋರ್ಟ್‌ಫೋಲಿಯೊದಲ್ಲಿ ಯಾವುದನ್ನೂ ಸೇರ್ಪಡೆ ಮಾಡಬಹುದು ತಿಳಿಸುವ ಮೂಲಕ ರಕ್ಷಣೆ ನೀಡುತ್ತದೆ. ಪ್ರಸ್ತುತ KYC ಅನುಸರಣೆಯು ಸಾಮಾನ್ಯವಾಗಿ ಅಪಾಯ ನಿರ್ವಹಣೆ, ಗ್ರಾಹಕ ಸ್ವೀಕಾರ ನೀತಿಗಳು ಹಾಗೂ ವಹಿವಾಟು ಮೇಲ್ವಿಚಾರಣೆಯ ಅವಶ್ಯಕತೆಗಳು ಹಾಗೂ ಅವುಗಳ ನೀತಿಗಳನ್ನು ಹೊಂದಿರುತ್ತದೆ. * ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (KYC) ಎನ್ನುವುದು ಹೂಡಿಕೆ ಹಾಗೂ ಹಣಕಾಸು ಸೇವೆಗಳ ಉದ್ಯಮದಲ್ಲಿ ಗ್ರಾಹಕರು, ಅವರ ಅಪಾಯದ ಪ್ರೊಫೈಲ್‌ ಹಾಗೂ ಹಣಕಾಸಿನ ಪ್ರೊಫೈಲ್'ನ್ನು ಪರಿಶೀಲಿಸಲು ಬಳಕೆ ಮಾಡಲಾಗುವ ಮಾನದಂಡಗಳ ಗುಂಪಾಗಿದೆ. ಅಲ್ಲದೇ ಹೂಡಿಕೆಯ ಉದ್ಯಮದಲ್ಲಿ ಪ್ರತಿ ಬ್ರೋಕರ್-ಡೀಲರ್ ಕ್ಲೈಂಟ್ ಖಾತೆಗಳಿಗೆ ಸಂಬಂಧಪಟ್ಟಿರುವ ಸಮಂಜಸವಾದ ಪ್ರಯತ್ನವನ್ನು ಬಳಸಬೇಕೆಂದು KYC ಷರತ್ತು ಹೇರುತ್ತದೆ. * ಪ್ರಸ್ತುತ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು KYC ಮಾನದಂಡಗಳನ್ನು ಬಳಸಿಕೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದೆ.