Job Description: * ಪ್ರಸ್ತುತ ರಕ್ಷಣಾ ಸಚಿವಾಲಯದ ಸ್ವಾಧೀನ ವಿಭಾಗವು ಇತ್ತೀಚಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(BEL)ನ ಜೊತೆಗೆ ಕಮಾಂಡರ್ ಸೈಟ್ ಆಫ್ ಬ್ಯಾಟಲ್ ಟ್ಯಾಂಕ್ಸ್-ಟಿ-90ನ(Battle Tanks-T-90) ರೆಟ್ರೋ-ಮಾರ್ಪಾಟಿಗಾಗಿ ಸುಮಾರು 1,075 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದಾಗಿ ಕೇಂದ್ರ ಸರ್ಕಾರದ 'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ಉತ್ತೇಜನ ನೀಡಿದಂತಾಗಿದೆ. * ಇದೀಗ ಭಾರತೀಯ ಸೇನೆಯ 957 ಟಿ-90 ಟ್ಯಾಂಕ್ʼಗಳಲ್ಲಿ ರೆಟ್ರೋ-ಮಾರ್ಪಾಡು ಕೈಗೊಳ್ಳಲಾಗುತ್ತಿದೆ. ಹಾಗೂ ಭಾರತದ ಪ್ರಮುಖ ಯುದ್ಧ ಟ್ಯಾಂಕ್ ಟಿ-90ನ ಕಮಾಂಡರ್ ನೋಟವನ್ನು ರಾತ್ರಿ ಸಮಯದಲ್ಲಿ ವೀಕ್ಷಣೆಗಾಗಿ ಇಮೇಜ್ ಕನ್ವರ್ಟರ್ (IC) ಟ್ಯೂಬ್ ಆಧಾರಿತ ದೃಶ್ಯಗಳ ಜೊತೆಗೆ ಅಳವಡಿಸಲಾಗಿದೆ. * ಇದೀಗ DRDO ಹಾಗೂ BEL ಜೊತೆಯಾಗಿ ಭಾರತೀಯ ಸೇನೆಯ ಅಗತ್ಯದ ಆಧಾರದ ಮೇಲೆ ಸುಧಾರಿತ ಮಿಡ್ ವೇವ್ ಥರ್ಮಲ್ ಇಮೇಜ್ (MWIR) ಆಧಾರಿತ ದೃಷ್ಟಿಯನ್ನ ಇಮೇಜ್ ಕನ್ವರ್ಟರ್ ಆಧಾರಿತ ದೃಷ್ಟಿಗೆ ಬದಲಾವಣೆ ಮಾಡಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ ಎಂದು ರಕ್ಷಣಾ ಸಚಿವಾಲಯವು ಮಾಹಿತಿಯನ್ನು ನೀಡಿದೆ. * ಪ್ರಸ್ತುತ ಈ T-90 3 ನೇ ತಲೆಮಾರಿನ ರಷ್ಯಾದ ಮುಖ್ಯ ಯುದ್ಧ ಟ್ಯಾಂಕ್ ಆಗಿದೆ. ರಷ್ಯಾದ ರಕ್ಷಣಾ ಸಚಿವಾಲಯವು ಈ ಹಿಂದೆ 1992 ರಲ್ಲಿ T-72BU ನ್ನು ಅಧಿಕೃತವಾಗಿ ಸೇವೆಗೆ ಸೇರ್ಪಡೆಮಾಡಿಕೊಂಡಿದೆ, ಹಾಗೂ ಅಸ್ತಿತ್ವದಲ್ಲಿರುವ T-72 ರೂಪಾಂತರಗಳನ್ನೂ ಮಾರ್ಕೆಟಿಂಗ್ ಹಾಗೂ ಪ್ರಚಾರದ ಉದ್ದೇಶಗಳಿಗಾಗಿ ಏಕಕಾಲದಲ್ಲಿ T-90 ಎಂದು ಮರುನಾಮಕರಣ ಮಾಡಲಾಗಿದೆ. ಇದನ್ನು ರಷ್ಯಾದ ನಿಜ್ನಿ ಟಾಗಿಲ್‌ನಲ್ಲಿ ಉರಾಲ್ವಗೊನ್ಜಾವೊಡ್ ಅವರು ನಿರ್ಣಿಸಿದ್ದಾರೆ. ರಷ್ಯಾದ ಸೇನೆಯು ಈ ಹಿಂದೆ 2012 ರಲ್ಲಿ T-90 ಖರೀದಿಯನ್ನು ಮೊಟಕುಗೊಳಿಸಿತು. ಆದರೆ ಮತ್ತೇ 2022 ರಲ್ಲಿ ಅದರ ಉತ್ತರಾಧಿಕಾರಿಯಾದ T-14 ಅರ್ಮಾಟಾದ ಸರಣಿ ಉತ್ಪಾದನೆಯುನ್ನು ಆರಂಭಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ T-64, T-72 ಮತ್ತು T-80 ಸರಣಿಯ ಮುಖ್ಯ ಯುದ್ಧ ಟ್ಯಾಂಕ್‌ಗಳಿಗೆ ಹೊಸ ರೂಪವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ಸೋವಿಯತ್-ಯುಗದ ಕಾರ್ಯಕ್ರಮವೊಂದರಲ್ಲಿ T-90 ತನ್ನ ಮೂಲವನ್ನು ಹೊಂದಿದೆ.