Job Description: * ಇತ್ತೀಚಿಗೆ ಭಾರತದ ಯುವ ಪ್ರತಿಭೆ ಆರ್. ಪ್ರಜ್ಞಾನಂದ ಅವರು ವಿಶ್ವ ಚಾಂಪಿಯನ್ ಮ್ಯಾಗ್ನಸ್‌ ಕಾರ್ಲ್‌ಸನ್ ಅವರನ್ನು ಸೋಲಿಸಿದ್ದರು, ಇದೀಗ ಮತ್ತೇ ಏರ್‌ಥಿಂಗ್ಸ್ ಮಾಸ್ಟರ್ಸ್ ಆನ್‌ಲೈನ್‌ ರ‍್ಯಾಪಿಡ್‌ ಚೆಸ್‌ ಟೂರ್ನಿಯಲ್ಲಿ ಮತ್ತೆರಡು ಜಯ ಸಂಪಾದಿಸಿದ್ದಾರೆ. * ಪ್ರಸ್ತುತ ಪ್ರಜ್ಞಾನಂದ ಅವರು 10 ಮತ್ತು 12 ನೇ ಸುತ್ತುಗಳಲ್ಲಿ ರಷ್ಯಾದ ಗ್ರ್ಯಾಂಡ್‌ಮಾಸ್ಟರ್‌ಗಳಾದ ಆಯಂಡ್ರೆ ಎಸಿಪೆಂಕೊ ಹಾಗೂ ಅಲೆಕ್ಸಾಂಡ್ರಾ ಕೊಸ್ತೆನ್ಯೂಕ್ ಅವರನ್ನು ಸೋಲಿಸಿದ್ದಾರೆ. ನಂತರ ಪ್ರಜ್ಞಾನಂದ ಅವರು ನಾರ್ವೆಯ ಮ್ಯಾಗ್ನಸ್ ಅವರನ್ನು ಸೋಲಿಸಿದ್ದಾರೆ. * ಉಜ್ಬೆಕಿಸ್ತಾನದ ನಾದಿರ್‌ಬೆಕ್‌ ಅಬ್ದುಸತರೊವ್ ಎದುರು ಪ್ರಜ್ಞಾನಂದ ಅವರು 9ನೇ ಸುತ್ತಿನಲ್ಲಿ ಡ್ರಾ ಸಾಧಿಸಿಕೊಂಡಿದ್ದಾರೆ, ಮತ್ತು 11 ನೇ ಸುತ್ತಿನಲ್ಲಿ ರಷ್ಯಾದ ಇಯಾನ್‌ ನೆಪೊಮ್ನಿಯಾಚಿ ಅವರ ವಿರುದ್ಧ ಸೋಲನ್ನು ಕಂಡಿದ್ದಾರೆ. * ಇದೀಗ ಪ್ರಜ್ಞಾನಂದ ಅವರು 15 ಪಾಯಿಂಟ್ಸ್‌ಗಳನ್ನೂ ಪಡೆದುಕೊಂಡು 12 ನೇ ಸ್ಥಾನದಲ್ಲಿದ್ದಾರೆ. * ಪ್ರಸ್ತುತ 13, 14 ಮತ್ತು 15 ನೇ ಸುತ್ತುಗಳಲ್ಲಿ ಪ್ರಜ್ಞಾನಂದ ಅವರು ಕ್ರಮವಾಗಿ ಜರ್ಮನಿಯ ವಿನ್ಸೆಂಟ್‌ ಕೇಮರ್‌, ಅಮೆರಿಕದ ಹ್ಯಾನ್ಸ್ ಮೋಕ್ ನೀಮನ್ ಹಾಗೂ ರಷ್ಯಾದ ವ್ಲಾಡಿಸ್ಲಾವ್‌ ಅರ್ಟ್‌ಮೆವ್‌ ಅವರ ವಿರುದ್ಧ ಆಟವಾಡಲಿದ್ದಾರೆ. * ಇದೀಗ ರಷ್ಯಾದ ಇಯಾನ್‌ ನೆಪ್ನೊಮಿಯಾಚಿ ಅವರು ಪಾಯಿಂಟ್ಸ್ ನ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರ ನಂತರದ ಕಾರ್ಲ್‌ಸನ್‌, ಕುವಾಂಗ್ ಲಿಯೆಮ್ ಲೀ ಹಾಗೂ ಕ್ರಿಸ್ಟಾಫ್ ಡುಡಾ ವಿರುದ್ಧ ಜಯ ಸಾಧಿಸಿ ಪಟ್ಟಿಯಲ್ಲಿ ಜಂಟಿಯಾಗಿ 2 ನೇ ಸ್ಥಾನದಲ್ಲಿದ್ದಾರೆ. * ರಮೇಶ್ಬಾಬು 'ಪ್ರಾಗ್' ಪ್ರಗ್ನಾನಂದಾ ಇವರೊಬ್ಬ ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್. ಇವರು ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಸಾಧಿಸಿದ 5 ನೇ-ಕಿರಿಯ ವ್ಯಕ್ತಿಯಾಗಿದ್ದಾರೆ. ಅಷ್ಟೇ ಅಲ್ಲದೇ ಇವರು ಮಹಿಳಾ ಗ್ರ್ಯಾಂಡ್ ಮಾಸ್ಟರ್ ವೈಶಾಲಿ ರಮೇಶಬಾಬು ಅವರ ಕಿರಿಯ ಸಹೋದರರಾಗಿದ್ದಾರೆ.