Job Description: * ಪ್ರಸ್ತುತ ಅನಿಯಂತ್ರಿತ ಕ್ರಿಪ್ಟೋಕರೆನ್ಸಿಗಳನ್ನು ಪ್ರಚಾರ ಮಾಡುವಾಗ ಜಾಹೀರಾತುದಾರರು ಇದೇ ಏಪ್ರಿಲ್. 1 ರಿಂದ ಹಕ್ಕು ನಿರಾಕರಣೆಯನ್ನು ಹಾಕಬೇಕಾಗುತ್ತದೆ ಎಂದು ಉದ್ಯಮದ ಸ್ವಯಂ-ನಿಯಂತ್ರಕ ಸಂಸ್ಥೆ ಮಾಹಿತಿ ನೀಡಿದೆ. * ಪ್ರಸ್ತುತ ಎಲ್ಲಾ ವರ್ಚುವಲ್ ಡಿಜಿಟಲ್ ಸ್ವತ್ತುಗಳನ್ನು, ಸಾಮಾನ್ಯವಾಗಿ ಕ್ರಿಪ್ಟೋ ಅಥವಾ ಫಂಗಬಲ್ ಅಲ್ಲದ ಟೋಕನ್‌ಗಳು ಎನ್ನಲಾಗುತ್ತದೆ. ಉತ್ಪನ್ನಗಳು ಹಾಗೂ ಸೇವೆಗಳ ಪ್ರಚಾರಗಳಲ್ಲಿ ಹಕ್ಕು ನಿರಾಕರಣೆಯನ್ನು ತಪ್ಪಿಸಿಕೊಳ್ಳಲಾಗದ ರೀತಿಯಲ್ಲಿ ನೋಡಿಕೊಳ್ಳಬೇಕಾಗುತ್ತದೆ. ಎಂದು ಜಾಹೀರಾತು ಗುಣಮಟ್ಟ ಮಂಡಳಿ ಭಾರತ ಹೇಳಿಕೆ ನೀಡಿದೆ. * ವರ್ಚುವಲ್ ಡಿಜಿಟಲ್ ಸ್ವತ್ತುಗಳು ಹಾಗೂ ಸೇವೆಗಳ ಜಾಹೀರಾತಿಗೆ ಒಂದು ನಿರ್ದಿಷ್ಟ ಮಾರ್ಗದರ್ಶನದ ಅಗತ್ಯವಿದೆ ಎಂದು ತಿಳಿಸಿದೆ. ಇದರ ಜೊತೆಗೆ ಹೊಸ ಹಾಗೂ ಮತ್ತು ಉದಯೋನ್ಮುಖ ಹೂಡಿಕೆಯ ಮಾರ್ಗವಾಗಿದೆ ಎಂದು ತಿಳಿಸಲಾಗಿದೆ. ಆದರೆ ಇದರ ಅಪಾಯಗಳ ಬಗ್ಗೆ ಗ್ರಾಹಕರಿಗೆ ಮಾಹಿತಿಯನ್ನು ನೀಡುವ ಅವಶ್ಯಕತೆಯಿದೆ ಎಂದು ಎಎಸ್‌ಸಿಐ ಅಧ್ಯಕ್ಷ ಸುಭಾಷ್ ಕಾಮತ್ ಅವರು ಹೇಳಿದ್ದಾರೆ. * ಪ್ರಸ್ತುತ ಈ 'ಕ್ರಿಪ್ಟೋ ಉತ್ಪನ್ನಗಳು ಹಾಗೂ NFT ಗಳು ಅನಿಯಂತ್ರಿತವಾಗಿವೆ ಹಾಗೂ ಹೆಚ್ಚಿನ ಅಪಾಯಕಾರಿಯಾಗಬಹುದಾಗಿವೆ, ಇಂತಹ ವಹಿವಾಟುಗಳಿಂದಾಗಿ ಯಾವುದೇ ತರಹದ ನಷ್ಟಕ್ಕೆ ನಿಯಂತ್ರಕ ಅವಲಂಬನೆ ವಿರುವದಿಲ್ಲ ಎಂದು ಜಾಹೀರಾತುದಾರರು ಹಕ್ಕು ನಿರಾಕರಣೆಯನ್ನು ಹೊಂದಿರಬೇಕಾಗುತ್ತದೆ ಎಂದು ಅದರ ಮಾರ್ಗಸೂಚಿಗಳು ಮಾಹಿತಿ ನೀಡಿವೆ. * ಇದೀಗ ಹಕ್ಕು ನಿರಾಕರಣೆಗಾಗಿ ಮುದ್ರಣ ಅಥವಾ ಸ್ಥಿರ ಜಾಹೀರಾತಿನಲ್ಲಿ ಜಾಹೀರಾತಿನ 5ನೇ ಜಾಗವನ್ನು ಮೀಸಲಿಡಬೇಕು ಎಂದು ASCI ತಿಳಿಸಿದೆ. ಅಷ್ಟೇ ಅಲ್ಲದೇ ಹಕ್ಕು ನಿರಾಕರಣೆಯು ವೀಡಿಯೊ ಜಾಹೀರಾತುಗಳಲ್ಲಿ ಕನಿಷ್ಠ ಪಕ್ಷ 5 ಸೆಕೆಂಡುಗಳ ಕಾಲ ಪರದೆಯ ಮೇಲೆ ಉಳಿಯಬೇಕು ಎಂದು ತಿಳಿಸಿದೆ, ಹಾಗೆಯೇ ಹಕ್ಕು ನಿರಾಕರಣೆಗಳನ್ನು ಮಾಡುವ ಮಾರ್ಗಸೂಚಿಗಳು ಆಡಿಯೊ, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು, ಕಣ್ಮರೆಯಾಗುತ್ತಿರುವ ಕಥೆಗಳು ಸಹ ಹೊಂದಿವೆ ಎಂದು ತಿಳಿಸಿವೆ. * ಪ್ರಸ್ತುತ ಹಕ್ಕು ನಿರಾಕರಣೆ 'ಕ್ರಿಪ್ಟೋ ಉತ್ಪನ್ನಗಳು ಹಾಗೂ NFT ಗಳು ಅನಿಯಂತ್ರಿತ ಅಪಾಯಕಾರಿಯನ್ನು ಬಳಕೆ ಮಾಡಬೇಕು ನಂತರ ಪೂರ್ಣ ಹಕ್ಕು ನಿರಾಕರಣೆಗೆ ಲಿಂಕ್ ಮಾಡಬೇಕು ಎಂದು ತಿಳಿಸಲಾಗಿದೆ.