Job Description: * ಪ್ರಸ್ತುತ ದುಬೈನಲ್ಲಿರುವ 'ಮ್ಯೂಸಿಯಂ ಆಫ್‌ ದಿ ಫ್ಯೂಚರ್‌' ಕಟ್ಟಡವು ಇದೀಗ ಜಗತ್ತಿನ ಅತ್ಯಂತ ಸುಂದರ ಕಟ್ಟಡ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇದೀಗ ದುಬೈನಲ್ಲಿರುವ ಬುರ್ಜ್‌ ಖಲೀಫಾದ ಸಮೀಪದಲ್ಲೇ ವೃತ್ತಾಕಾರದ '7' ಅಂತಸ್ತಿನ ಕಟ್ಟಡವು 77 ಮೀ. ಎತ್ತರ, 30,000 ಚದರ ಮೀ. ಅಗಲವನ್ನು ಹೊಂದಿದೆ. * ಇದೀಗ ದುಬೈನಲ್ಲಿರುವ ಈ ಮ್ಯೂಸಿಯಂನಲ್ಲಿ ಭವಿಷ್ಯದ ದೃಷ್ಟಿಕೋನ ಹಾಗೂ ಮಾನವೀಯತೆಯನ್ನು ಸ್ಫೂರ್ತಿಗೊಳಿಸುವ, ಮಾನವ ಅಭಿವೃದ್ಧಿಯಲ್ಲಿ ಆವಿಷ್ಕಾರ, ಅಭಿವೃದ್ಧಿಗೆ ಲಭ್ಯವಿರುವ ಅವಕಾಶಗಳ ಶಾಶ್ವತ ಪ್ರದರ್ಶನವಿರುತ್ತದೆ ಎಂದು ತಿಳಿಸಿದ್ದಾರೆ. ಇದರಲ್ಲಿ ಒಂದು ಸಾವಿರ ಜನರು ಕುಳಿತುಕೊಳ್ಳವ ಸಭಾಂಗಣ, ಸಂವಾದ-ಉಪನ್ಯಾಸ ಹಾಗೂ ಕಾರ್ಯಾಗಾರವನ್ನು ಕೈಗೊಳ್ಳಲು ಸುಮಾರು 345 ಜನರು ಕುಳಿತುಕೊಳ್ಳಬಹುದಾದ ಸಭಾಂಗಣಗಳನ್ನು ಈ ಮ್ಯೂಸಿಯಂ ಹೊಂದಿದೆ. * ಪ್ರಸ್ತುತ ದುಬೈ ಪ್ರಧಾನಿಯಾಗಿರುವ ಶೇಖ್‌ ಮೊಹಮ್ಮದ್‌ ಬಿನ್‌ ರಶೀದ್‌ ಅಲ್‌ ಮಕ್ತಾಮ್‌ ಅವರು ಭವಿಷ್ಯ ವಾಣಿಯನ್ನು ಕ್ಯಾಲಿಗ್ರಪಿ ರೂಪದಲ್ಲಿ 1024 ಅಕ್ಷರಗಳನ್ನು ಕಟ್ಟಡದ ಮೇಲೆ ಕೆತ್ತಲಾಗಿದೆ. ಈ ಕಟ್ಟಡವನ್ನು ವಾಸ್ತುಶಿಲ್ಪಿ ಶಾನ್‌ ಕಿಲ್ಲಾ ಅವರು ವಿನ್ಯಾಸ ಮಾಡಿದ್ದಾರೆ, ಈ ಕಟ್ಟಡದ ನಿರ್ಮಾಣಕ್ಕಾಗಿ ಒಂಬತ್ತು ವರ್ಷಗಳ ಸಮಯವನ್ನು ತಗೆದುಕೊಂಡಿದೆ. * ಭವಿಷ್ಯದ ವಸ್ತುಸಂಗ್ರಹಾಲಯ ಹೊಸ ಹಾಗೂ ಭವಿಷ್ಯದ ಸಿದ್ಧಾಂತಗಳು, ಸೇವೆ ಹಾಗೂ ಉತ್ಪನ್ನಗಳಿಗೆ ಇದೊಂದು ಪ್ರದರ್ಶನ ಸ್ಥಳವಾಗಿದೆ. UAEಯ ದುಬೈನ ಫೈನಾನ್ಶಿಯಲ್ ಡಿಸ್ಟ್ರಿಕ್ಟ್‌ನಲ್ಲಿರುವ ಮ್ಯೂಸಿಯಂ ಆಫ್ ದಿ ಫ್ಯೂಚರ್ '3' ಪ್ರಮುಖ ಅಂಶಗಳನ್ನು ಒಳಗೊಂಡಿದೆ ಅವುಗಳು: ಹಸಿರು ಬೆಟ್ಟ, ಕಟ್ಟಡ ಹಾಗೂ ಶೂನ್ಯ. ಪ್ರಸ್ತುತ ಈ ಕಟ್ಟಡವನ್ನು ದುಬೈ ಫ್ಯೂಚರ್ ಫೌಂಡೇಶನ್ ಸ್ಥಾಪನೆ ಮಾಡಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರವು 2022 ರ ಫೆಬ್ರವರಿ. 22 ರಂದು ವಸ್ತುಸಂಗ್ರಹಾಲಯವನ್ನು ಆರಂಭಿಸಿದೆ. * ಇದೀಗ ಈ ವಸ್ತುಸಂಗ್ರಹಾಲಯದ ಗುರಿಯು ತಾಂತ್ರಿಕ ಅಭಿವೃದ್ಧಿ ಹಾಗೂ ಆವಿಷ್ಕಾರವನ್ನು ಉತ್ತೇಜಿಸಲಿದೆ, ಅದರಲ್ಲಿಯೂ ವಿಶೇಷವಾಗಿ ರೊಬೊಟಿಕ್ಸ್ ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರಗಳಿಗೆ ಉತ್ತೇಜನ ನೀಡಲಿದೆ.