Job Description: * ಪ್ರಸ್ತುತ ರಾಷ್ಟ್ರದ ಅತಿದೊಡ್ಡ ತೈಲ ಸಂಸ್ಥೆಯಾದ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಮಂಡಳಿಯಲ್ಲಿ ನಿರ್ದೇಶಕರಾಗಿ ಸುಜೋಯ್ ಚೌಧರಿ ಅವರನ್ನು ನೇಮಿಸಲಾಗಿದೆ. * ಸುಜೋಯ್ ಚೌಧರಿ ಅವರು ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾನಿಲಯದಿಂದ ಮೆಕ್ಯಾನಿಕಲ್ ಇಂಜಿನಿಯರ್ ಹಾಗೂ MBA ಪದವಿಯನ್ನು ಪಡೆದಿದ್ದಾರೆ. ಇವರು ಇಂಜಿನಿಯರಿಂಗ್, ಚಿಲ್ಲರೆ ಮಾರಾಟ ಮತ್ತು ಪೆಟ್ರೋಕೆಮಿಕಲ್ಸ್ ನಂತಹ ತೈಲ ಉದ್ಯಮದ ವಿವಿಧ ಕೆಲಸಗಳಲ್ಲಿ ಮೂರು ದಶಕಗಳಿಗಿಂತಲೂ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಚೌಧರಿ ಅವರು ನಿರ್ದೇಶಕರಾಗುವಕಿಂತಲೂ ಮೊದಲು IOC ಯ ಪಂಜಾಬ್ ರಾಜ್ಯ ಕಚೇರಿಯ ಮುಖ್ಯಸ್ಥರಾಗಿದ್ದರು, ಇದರ ಜೊತೆಗೆ ಇವರು ಪಂಜಾಬ್ , ಹಿಮಾಚಲ ಪ್ರದೇಶದಲ್ಲಿ, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಹಾಗೂ ಚಂಡೀಗಢದ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಎಲ್ಲಾ ಪೆಟ್ರೋಲಿಯಂ ಚಟುವಟಿಕೆಗಳ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. * ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಇದೊಂದು ಭಾರತೀಯ ಸರ್ಕಾರಿ ನಿಗಮವಾಗಿದೆ. ಇದು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಅಧೀನದಲ್ಲಿದೆ. ಇದು ತನ್ನ ಪ್ರಧಾನ ಕಛೇರಿಯನ್ನು ನವದೆಹಲಿಯಲ್ಲಿ ಹೊಂದಿದೆ. ಪ್ರಸ್ತುತ ಈ ಸರ್ಕಾರಿ ನಿಗಮವು 2021 ರ ಹೊತ್ತಿಗೆ ವಿಶ್ವದ ಅತಿದೊಡ್ಡ ನಿಗಮಗಳ ಫಾರ್ಚೂನ್ ಗ್ಲೋಬಲ್ 500 ಪಟ್ಟಿಯಲ್ಲಿ 212 ನೇ ಸ್ಥಾನಪಡೆದುಕೊಂಡಿದೆ. ಈ ಸಂಸ್ಥೆಯು 2020-21 ರ ಆರ್ಥಿಕ ವರ್ಷದಲ್ಲಿ ಸುಮಾರು 6.1 ಶತಕೋಟಿ ನಿವ್ವಳ ಲಾಭವನ್ನು ಪಡೆದುಕೊಂಡಿರುವ ದೇಶದಲ್ಲೇ ಅತಿ ದೊಡ್ಡ ಸರ್ಕಾರಿಯ ತೈಲ ನಿಗಮವಾಗಿದೆ. * ಪ್ರಸ್ತುತ ಇಂಡಿಯನ್ ಆಯಿಲ್‌ನ ಶುದ್ಧೀಕರಣ, ಪೈಪ್‌ಲೈನ್ ಸಾಗಣೆ, ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ, ಕಚ್ಚಾ ತೈಲ, ನೈಸರ್ಗಿಕ ಅನಿಲ ಹಾಗೂ ಪೆಟ್ರೋಕೆಮಿಕಲ್‌ಗಳ ಪರಿಶೋಧನೆ ಜೊತೆಗೆ ಉತ್ಪಾದನೆ ಮಾಡಲಿದೆ. ಅಷ್ಟೇ ಅಲ್ಲದೇ ಇಂಡಿಯನ್ ಆಯಿಲ್ ಪರ್ಯಾಯ ಶಕ್ತಿ ಹಾಗೂ ಡೌನ್‌ಸ್ಟ್ರೀಮ್ ಕಾರ್ಯಾಚರಣೆಗೆ ಮುಂದಾಗಿದೆ. ಪ್ರಸ್ತುತ ಇಂಡಿಯನ್ ಆಯಿಲ್ ಶ್ರೀಲಂಕಾ (ಇಂಡಿಯನ್ ಆಯಿಲ್ (ಮಾರಿಷಸ್) ಲಿಮಿಟೆಡ್) ಹಾಗೂ ಮಧ್ಯಪ್ರಾಚ್ಯ (IOC ಮಿಡಲ್ ಈಸ್ಟ್ FZE) ನಲ್ಲಿ ಅಂಗಸಂಸ್ಥೆಯನ್ನು ಹೊಂದಿದೆ. * IOCL 2017–18 ರಲ್ಲಿ 2 ನೇ ವರ್ಷ ಭಾರತದ ಅತ್ಯಂತ ಲಾಭದಾಯಕ ಸರ್ಕಾರಿ ನಿಗಮವಾಗಿ ಹೊರಹೊಮ್ಮಿದೆ. ಈ ಕಂಪನಿಯು 2020 ರಲ್ಲಿ ದಿನಕ್ಕೆ ಸುಮಾರು 140,000 ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಲು ರಷ್ಯಾದ ತೈಲ ಕಂಪನಿ ರಾಸ್ನೆಫ್ಟ್ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದೆ.