Job Description: * ಪ್ರಸ್ತುತ ಇಥಿಯೋಪಿಯಾದ ನೈಲ್ ನದಿಯಲ್ಲಿನ ವಿವಾದಾತ್ಮಕ ಬಹುಮಿಲಿಯ ಡಾಲರ್ ಡ್ಯಾಮ್ ನಿಂದ ವಿದ್ಯುತ್ ಉತ್ಪಾದಿಸುವ ಪ್ರಕ್ರಿಯೆಗೆ ಇಥಿಯೋಪಿಯಾ ಪ್ರಧಾನಿ ಅಬೀಯ್ ಅಹ್ಮದ್ ಅವರು ಚಾಲನೆ ನೀಡಿದ್ದಾರೆ. * ಈ ಡ್ಯಾಮ್ ನ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಚಾಲನೆ ನೀಡುವ ಸಭೆಗೆ ಅಲ್ಲಿನ ಉನ್ನತ ಅಧಿಕಾರಿಗಳು ಆಗಮಿಸಿದ್ದರು, ಹಾಗೂ ಇಥಿಯೋಪಿಯಾ ಪ್ರಧಾನಿ ಅಹ್ಮದ್ ಅವರು ವರ್ಚುವಲ್ ಸಭೆಯ ಮೂಲಕ ಈ ವಿದ್ಯುತ್ ಉತ್ಪಾದನೆಗೆ ಚಾಲನೆ ನೀಡಿದರು. ಈ ಸಭೆಯ ನಂತರ ಮಾತನಾಡಿದ ಅವರು ದೇಶದ ಜತೆಗೂಡಿ ಕೆಲಸ ಮಾಡಬಯಸುವ ಈ ವಲಯದ ಇತರ ದೇಶಗಳಿಗೆ ಶುಭ ಸಮಾಚಾರವಾಗಿದೆ ಎಂದು ತಿಳಿಸಿದರು. * ಪ್ರಸ್ತುತ ಆಫ್ರಿಕಾದ ಅತೀ ದೊಡ್ಡ ಜಲವಿದ್ಯುತ್ ಯೋಜನೆಯಾಗಿರುವ "ದಿ ಗ್ರ್ಯಾಂಡ್ ಇಥಿಯೋಪಿಯನ್ ರಿನೈಸೆನ್ಸ್ ಡ್ಯಾಮ್"ನ ನಿರ್ಮಾಣದ ಕಾರ್ಯಕ್ಕೆ ಈ ಹಿಂದೆ 2011 ರಲ್ಲಿ ಚಾಲನೆಯನ್ನು ನೀಡಲಾಗಿತ್ತು ಆದರೆ ಆ ದಿನದಿಂದಲೂ ಈ ಡ್ಯಾಮ್ ವಿವಾದದ ಕೇಂದ್ರಬಿಂದುವಾಗಿದೆ. * ಇದೀಗ ನೈಲ್ ನದಿ ಹರವಿನ ಕೆಳಪಾತ್ರದಲ್ಲಿನ ದೇಶಗಳಾಗಿರುವ ಈಜಿಪ್ಟ್ ಹಾಗೂ ಸುಡಾನ್ ದೇಶಗಳು ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ, ಕಾರಣ ಈ ದೇಶಗಳಿಗೆ ಲಭಿಸಬೇಕಾಗಿರುವ ನೀರಿನ ಪಾಲಿಗೆ ಕೊರತೆ ಉಂಟಾಗಲಿದೆ ಎಂದು ತಿಳಿದು ತೀವ್ರ ವಿರೋಧವನ್ನು ವ್ಯಕ್ತಪಡಿಸಿವೆ. ಆದರೆ ಇಥಿಯೋಪಿಯಾ ರಾಷ್ಟ್ರವು ಹೇಳಿಕೆ ನೀಡಿರುವ ಪ್ರಕಾರ ಈ ನೀರಿನಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ ಅಲ್ಲದೇ ಆ ನದಿ ನೀರನ್ನು ಎಂದಿನಂತೆಯೇ ಈಜಿಪ್ಟ್ ಹಾಗೂ ಸುಡಾನ್ ದೇಶಗಳಿಗೆ ಹರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಇಥಿಯೋಪಿಯಾದ ಈ ಯೋಜನೆಯಿಂದಾಗಿ ತಮ್ಮ ಜೀವಮಾನದಲ್ಲಿ ಅವರ ಮನೆಯಲ್ಲಿ ವಿದ್ಯುತ್ ಬಲ್ಬ್ ಕಾಣದಿರುವ ಅದೆಷ್ಟೋ ತಾಯಂದಿರಿಗೆ ವಿದ್ಯುತ್ ಪೂರೈಸುವುದೇ ಇಥಿಯೋಪಿಯಾ ರಾಷ್ಟ್ರದ ಪ್ರಮುಖ ಉದ್ದೇಶವಾಗಿದೆ ಎಂದು ಪ್ರಧಾನಿ ಅಬೀಯ್ ಅಹ್ಮದ್ ಅವರು ತಿಳಿಸಿದ್ದಾರೆ. * ನೈಲ್ ನದಿಯು ಈಶಾನ್ಯ ಆಫ್ರಿಕಾದಲ್ಲಿ ಉತ್ತರಕ್ಕೆ ಹರಿಯುವ ಪ್ರಮುಖ ನದಿಯಾಗಿದೆ. ಈ ನದಿಯು ಮೆಡಿಟರೇನಿಯನ್ ಸಮುದ್ರಕ್ಕೆ ಹರಿಯುತ್ತದೆ, ಅಷ್ಟೇ ಅಲ್ಲದೇ ಈ ನದಿಯು ಆಫ್ರಿಕಾದ ಅತಿ ಉದ್ದದ ನದಿಯಾಗಿದೆ, ಹಾಗೂ ಐತಿಹಾಸಿಕವಾಗಿ ವಿಶ್ವದ ಅತಿ ಉದ್ದದ ನದಿ ಎಂದು ಗುರುತಿಸಲಾಗಿದೆ. * ಈ ನೈಲ್ ನದಿಯು ಜಲಾನಯನ ಪ್ರದೇಶವು '11' ದೇಶಗಳನ್ನು ಒಳಗೊಂಡಿದೆ ಅವುಗಳು: ತಾಂಜಾನಿಯಾ, ಉಗಾಂಡಾ, ರುವಾಂಡಾ, ಬುರುಂಡಿ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಕೀನ್ಯಾ, ಇಥಿಯೋಪಿಯಾ, ಎರಿಟ್ರಿಯಾ, ದಕ್ಷಿಣ ಸುಡಾನ್, ರಿಪಬ್ಲಿಕ್ ಆಫ್ ಸುಡಾನ್, ಹಾಗೂ ಈಜಿಪ್ಟ್. ಅದರಲ್ಲಿಯೂ ಮುಖ್ಯವಾಗಿ ಈ ನೈಲ್ ನದಿಯು ಈಜಿಪ್ಟ್, ಸುಡಾನ್ ಹಾಗೂ ದಕ್ಷಿಣ ಸುಡಾನ್‌ಗಳ ಪ್ರಾಥಮಿಕ ನೀರಿನ ಮೂಲವಾಗಿದೆ.