Job Description: * ಪ್ರಸ್ತುತ ಕೇಂದ್ರ ಜಾಗೃತ ಆಯೋಗದ (Central Vigilance Commission) ನಿರ್ದೇಶಕರಾಗಿ ಭಾರತೀಯ ಕಂದಾಯ ಸೇವೆ (Indian Revenue Service) ಅಧಿಕಾರಿಯಾಗಿರುವ 'ಅಮಿತ್ ಕುಮಾರ್ ಸಿಂಗಲ್' ಅವರನ್ನು ನೇಮಿಸಲಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಮಾಹಿತಿ ನೀಡಿದೆ. * ಇದೀಗ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ಕೇಂದ್ರ ಜಾಗೃತ ಆಯೋಗದ ನಿರ್ದೇಶಕರಾಗಿ ಸಿಂಗಲ್ ಅವರು '5' ವರ್ಷಗಳ ಅವಧಿಗೆ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. * 2007 ರ ಬ್ಯಾಚ್‌ನ IRS ಅಧಿಕಾರಿ ಸಿಂಗಲ್ ಅವರನ್ನು ಕಂದಾಯ ಇಲಾಖೆಯು ಕೇಂದ್ರ ನಿಯೋಜನೆಗೆ ಶಿಫಾರಸು ಮಾಡಿದೆ. * ಸೆಂಟ್ರಲ್ ವಿಜಿಲೆನ್ಸ್ ಕಮಿಷನ್ (CVC) ಸರ್ಕಾರದ ಭ್ರಷ್ಟಾಚಾರವನ್ನು ಪರಿಹರಿಸಲು 1964 ರಲ್ಲಿ ರಚಿಸಲಾದ ಒಂದು ಉನ್ನತ ಭಾರತೀಯ ಸರ್ಕಾರಿ ಸಂಸ್ಥೆಯಾಗಿದೆ. ಈ ಸಂಸ್ಥೆಯನ್ನು 2003 ರಲ್ಲಿ ಸಂಸತ್ತು CVC ಯ ಶಾಸನಬದ್ಧ ಸ್ಥಾನಮಾನವನ್ನು ನೀಡುವ ಕಾನೂನನ್ನು ಜಾರಿಗೊಳಿಸಿದೆ. ಹಾಗೂ ಈ ಸಂಸ್ಥೆಯು ಸ್ವಾಯತ್ತ ಸಂಸ್ಥೆಯ ಸ್ಥಾನಮಾನವನ್ನು ಹೊಂದಿದೆ, ಇದರ ಜೊತೆಗೆ ಯಾವುದೇ ಕಾರ್ಯನಿರ್ವಾಹಕ ಪ್ರಾಧಿಕಾರದಿಂದ ನಿಯಂತ್ರಣವಿರದೆ, ಕೇಂದ್ರದ ಅಡಿಯಲ್ಲಿನ ಎಲ್ಲಾ ವಿಜಿಲೆನ್ಸ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಒಳಗೊಂಡಿದೆ. * ಈ ಸಂಸ್ಥೆಯನ್ನು 1964 ರ ಫೆಬ್ರವರಿ. 11 ರಂದು ಭಾರತ ಸರ್ಕಾರದ ನಿರ್ಣಯದ ಮೇರೆಗೆ ಸ್ಟಾಪನೆ ಮಾಡಲಾಗಿದೆ. ಭಾರತದ ಮೊದಲ ಮುಖ್ಯ ವಿಜಿಲೆನ್ಸ್ ಕಮಿಷನರ್ ಆಗಿ ನಿಟ್ಟೂರು ಶ್ರೀನಿವಾಸ ರಾವ್ ಅವರು ಆಯ್ಕೆಯಾಗಿದ್ದರು. * ಸೆಂಟ್ರಲ್ ವಿಜಿಲೆನ್ಸ್ ಕಮಿಷನ್ ಇದು ವಾರ್ಷಿಕ ವರದಿಯವಾಗಿ ಮಾಡಿದ ಕೆಲಸದ ವಿವರಗಳನ್ನು ಒದಗಿಸುತ್ತದೆ, ಹಾಗೂ ವಿವಿಧ ಸಂಸ್ಥೆಗಳಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಿರುವ ಸಿಸ್ಟಮ್ ವೈಫಲ್ಯಗಳು, ಸಿಸ್ಟಮ್ ಸುಧಾರಣೆಗಳು, ವಿವಿಧ ತಡೆಗಟ್ಟುವ ಕ್ರಮಗಳು ಹಾಗೂ ಆಯೋಗದ ಸಲಹೆಗಳನ್ನು ನಿರ್ಲಕ್ಷಿಸಿದ ಪ್ರಕರಣಗಳು ಇತ್ಯಾದಿಗಳನ್ನು ಹೊರತರಲು ಸಹಾಯ ಮಾಡುತ್ತದೆ.