Job Description: * ಪ್ರಸ್ತುತ ಭಾರತದ ಅತಿ ದೊಡ್ಡ ವ್ಯಾಪಾರಿ ಸೇವಾ ಮತ್ತು UPI ಪಾವತಿ ಆಪ್ 'ಭಾರತ್ ಪೇ' ನ ಸಹ ಸಂಸ್ಥಾಪಕ ಹಾಗೂ ಆಡಳಿತ ನಿರ್ದೇಶಕರಾಗಿರುವ ಅಶ್ನೀರ್ ಗ್ರೋವರ್ ಅವರ ಪತ್ನಿ ಮಾಧುರಿ ಜೈನ್ ಅವರನ್ನು ಹಣಕಾಸು ನಿಧಿ ದುರುಪಯೋಗದ ಆರೋಪದ ಕಾರಣಗಳಿಂದ ಸಂಸ್ಥೆಯಿಂದ ವಜಾ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಮಾಧುರಿ ಜೈನ್ ಅವರು 'ಭಾರತ್ ಪೇ' ಕಂಪೆನಿಯ ನಿಯಂತ್ರಕಿಯಾಗಿದ್ದರು. * ಇತ್ತೀಚಿಗೆ 'ಭಾರತ್ ಪೇ'ನಲ್ಲಿ ಸಂಭವಿಸಿರುವ ಹಣಕಾಸು ಅವ್ಯವಹಾರಗಳಿಗೆ ಬಗ್ಗೆ ಆಲ್ವಾರೆಝ್ ಆಯಂಡ್ ಮಾರ್ಶಲ್ ಸಂಸ್ಥೆಯು ಪ್ರಾಥಮಿಕ ತನಿಖೆಯನ್ನು ಆರಂಭಿಸಿತ್ತು, ಆಗಿನಿಂದಲೂ ಈ ಸಂಸ್ಥೆಯು ಮಾಧುರಿ ಜೈನ್ ಅವರ ಚಟುವಟಿಕೆಗಳ ಮೇಲೆ ಗಮನವನಿಟ್ಟಿತ್ತು ಎಂದು ದಿ ಎಕನಾಮಿಕ್ ಟೈಮ್ಸ್ ಮಾಹಿತಿ ನೀಡಿದೆ. * ಈ ಹಿಂದೆ 2018 ರಿಂದ ಮಾಧುರಿ ಜೈನ್ ಅವರು 'ಭಾರತ್ ಪೇ' ಸಂಸ್ಥೆಯ ಹಣಕಾಸು ವ್ಯವಹಾರಗಳ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಇವರನ್ನು ಸೇವೆಯಿಂದ ವಜಾಗೊಳಿಸಿರುವ ಆದೇಶಪತ್ರವನ್ನು ಅವರಿಗೆ ರವಾನಿಸಲಾಗಿದೆ ಎಂದಿದ್ದಾರೆ. * 'ಭಾರತ್ ಪೇ' ಸಂಸ್ಥೆಯು ಫಿನ್ಟೆಕ್ ಸಂಸ್ಥೆಯಾಗಿದೆ, ಕ್ಯೂಆರ್ ಕೋಡ್'ಗಳ ಮೂಲಕ ಸಣ್ಣ ಸಣ್ಣ ಅಂಗಡಿ ಮಾಲಕರಿಗೆ ಡಿಜಿಟಿಲ್ ವಿಧಾನದಲ್ಲಿ ಹಣಪಾವತಿಸಲು ಸಹಾಯವನ್ನು ಮಾಡುತ್ತದೆ. 'ಪೇಟಿಎಂ' ಮತ್ತು 'ಗೂಗಲ್ ಪೇ'ನಂತಹ ಡಿಜಿಟಲ್ ಪಾವತಿ ಆಪ್'ಗಳಿಗೆ ಪೈಪೋಟಿಯನ್ನು ನೀಡುತ್ತಿರುವ ಭರತ್ ಪೇ, ಇದೀಗ 3 ಶತಕೋಟಿ ಡಾಲರ್ ಮೌಲ್ಯದ ಸಂಪತ್ತನ್ನು ಒಳಗೊಂಡಿದೆ. * ಇದೀಗ 'ಭಾರತ್‌ಪೇ' 3 ರಿಂದ 12 ತಿಂಗಳ ಅವಧಿಗೆ 7 ಲಕ್ಷಗಳವರೆಗೆ ವ್ಯಾಪಾರಿ ಸಾಲಗಳನ್ನು ನೀಡುತ್ತದೆ. ಹಾಗೂ ಉತ್ಪನ್ನಗಳು ಮತ್ತು ಪೀರ್ ಟು ಪೀರ್ ಸಾಲ ನೀಡುವ ಉತ್ಪನ್ನವನ್ನು 12% ಕ್ಲಬ್ ಎನ್ನಲಾಗುತ್ತದೆ. ಈ ಕಂಪನಿಯು 2020 ರಲ್ಲಿ ಡಿಜಿಟಲ್ ಗೋಲ್ಡ್ ಉತ್ಪನ್ನವನ್ನು ಆರಂಭಿಸಿದೆ, ಈ ಕಂಪನಿಯು ಬಳಕೆದಾರರಿಗೆ ವಹಿವಾಟು ನಡೆಸಲು 24-ಕ್ಯಾರೆಟ್ ಚಿನ್ನದೊಂದಿಗೆ 99.5% ಶುದ್ಧತೆಯನ್ನು ನೀಡುತ್ತದೆ.