Job Description: * ಇದೀಗ ರಾಜ್ಯ ಸರ್ಕಾರವು ಬಾಡಿಗೆ ವಾಹನ ಚಾಲಕರ ಹೋರಾಟಕ್ಕೆ ಒಪ್ಪಿಗೆಯನ್ನು ನೀಡಿ ಬೈಕ್ ಟ್ಯಾಕ್ಸಿ ರ್ಯಾಪಿಡೊ(Rapido Bike Taxi)ವನ್ನು ನಿಷೇಧಿಸಿ ಆದೇಶವನ್ನು ಹೊರಡಿಸಿದೆ. * ಸಾರಿಗೆ ಹಾಗೂ ರಸ್ತೆ ಸುರಕ್ಷತೆ ಆಯುಕ್ತರು ಈ ಬಗ್ಗೆ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶದ ಮೂಲಕ ಸಾರ್ವಜನಿಕರು ತಮ್ಮ ಖಾಸಗಿ ವಾಹನಗಳನ್ನು ಬೇರೆ ಯಾವುದೇ ಕಂಪೆನಿಗಳಿಗೆ ಬಾಡಿಗೆಯನ್ನು ನೀಡಬಾರದು, ಈ ಆದೇಶವನ್ನು ಮೀರಿ ಬಾಡಿಗೆ, ವಾಣಿಜ್ಯ ಚಟುವಟಿಕೆಗಳಿಗೆ ಬಳಕೆ ಮಾಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. * ಪ್ರಸ್ತುತ ಆಪ್ ಆಧಾರಿತ ಬೈಕ್, ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಒಂದು ವೇಳೆ ನಿಯಮವನ್ನು ಉಲ್ಲಘಿಸಿ ಸೇವೆ ನೀಡಿದರೆ ಅಂತವರವಿರುದ್ಧ ಕ್ರಮ ಜರುಗಿಸಲಾಗುವದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಇತ್ತೀಚಿಗಷ್ಟೇ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿರುವ 500ಕ್ಕೂ ಅಧಿಕ ಬೈಕ್ ಟ್ಯಾಕ್ಸಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೂ ವೈಯಕ್ತಿಕ ಚಾಲಕರಿಗೆ ಸುಮಾರು 10,500 ರೂ.ವರೆಗೆ ದಂಡ ಹಾಕಲಾಗಿದೆ ಎಂದಿದ್ದಾರೆ. * ಈ ಹಿಂದೆ ಟ್ಯಾಕ್ಸಿ, ಆಟೋ ರಿಕ್ಷಾ ಚಾಲಕರು ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಯಿಂದ ನಮ್ಮ ಆದಾಯಕ್ಕೆ ತೊಂದರೆಯಾಗುತ್ತದೆ ಎಂದು ಆರೋಪಿಸಿದ್ದರು. ಈ ಹಿನ್ನಲೆಯಿಂದಾಗಿ ಸರ್ಕಾರ ಆಪ್ ಆಧಾರಿತ ರ್ಯಾಪಿಡೊ ಬೈಕ್ ಟ್ಯಾಕ್ಸಿ(Rapido Bike Taxi)ಯನ್ನು ನಿಷೇಧಿಸಿ ಆದೇಶವನ್ನು ಹೊರಡಿಸಿದೆ. * ಭಾರತದ ಅತಿ ದೊಡ್ಡ ಬೈಕ್ ಟ್ಯಾಕ್ಸಿ ಸೇವೆ Rapido 25 ಮಿಲಿಯನ್'ಗಿಂತಲೂ ಅಧಿಕ ಅಪ್ಲಿಕೇಶನ್ ಡೌನ್‌ಲೋಡ್‌ಗಳೊಂದಿಗೆ ಭಾರತದ ಮೊದಲ ಹಾಗೂ ವೇಗವಾಗಿ ಬೆಳೆಯುತ್ತಿರುವ ಬೈಕ್ ಟ್ಯಾಕ್ಸಿ ಅಪ್ಲಿಕೇಶನ್ ಆಗಿದೆ. ಇದೀಗ ಇದು 100 ಕ್ಕೂ ಅಧಿಕ ನಗರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. * ಈ Rapido 2015 ರಲ್ಲಿ ಆರಂಭವಾಗಿದೆ ಆಗಿನಿಂದಲೂ ಬಹಳ ದೂರದ ಹಂತಕ್ಕೆ ಸಾಗಿದೆ. ಇದು ತನ್ನ ಕಠಿಣ ಪರಿಶ್ರಮದಿಂದ ಮಾರುಕಟ್ಟೆಯಲ್ಲಿ ಒಂದು ಸ್ಥಾನವನ್ನು ಪಡೆದುಕೊಂಡಿದೆ.