Job Description: * ಪ್ರಸ್ತುತ 2022ರ ಸಾಲಿನ 'ಸಂಸದ್ ರತ್ನ' ಪುರಸ್ಕಾರಕ್ಕೆ 11 ಜನ ಸಂಸತ್ ಸದಸ್ಯರು ಪಾತ್ರರಾಗಿದ್ದಾರೆ. ಅವರಲ್ಲಿ ತಮಿಳನಾಡು ರಾಜ್ಯದ ಹಿರಿಯ ಬಿಜೆಪಿ ನಾಯಕ ಎಚ್.ವಿ. ಹಂದೆ ಹಾಗೂ ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಎಂ. ವೀರಪ್ಪ ಮೊಯ್ಲಿ ಅವರನ್ನು ಜೀವಮಾನದ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳ ಜೊತೆಗೆ ಕೃಷಿ, ವಿತ್ತ, ಶಿಕ್ಷಣ ಮತ್ತು ಕಾರ್ಮಿಕ ಇಲಾಖೆಗಳ '4' ಸಂಸದೀಯ ಸ್ಥಾಯಿ ಸಮಿತಿಗಳಿಗೆ ನೀಡಿದ ಕೊಡುಗೆಗಾಗಿ ಪುರಸ್ಕಾರವನ್ನು ಘೋಷಣೆ ಮಾಡಲಾಗಿದೆ ಎಂದು ಪ್ರೈಮ್ ಪಾಯಿಂಟ್ ಫೆಡರೇಶನ್ ವರದಿ ಮಾಡಿದೆ. * ಪ್ರಸ್ತುತ 2022ರ ಸಾಲಿನ 12ನೇ ಆವೃತ್ತಿಯ ಸಂಸದ್ ರತ್ನ ಪುರಸ್ಕಾರಗಳನ್ನು ಹೊಸದಿಲ್ಲಿಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುತ್ತದೆ. ಇದೀಗ ಸದನದಲ್ಲಿ ಅಸಾಧಾರಣವಾದ ನಿರ್ವಹಣೆಯನ್ನು ಪ್ರದರ್ಶಿಸಿರುವ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ, ಕ್ರಾಂತಿಕಾರಿ ಸಮಾಜವಾದಿ ಪಕ್ಷದ ಸಂಸದ ಎನ್.ಕೆ. ರಾಮಚಂದ್ರನ್ ಮತ್ತು ಶಿವಸೇನಾ ಸಂಸದ ಶಿರಾಂಗ್ ಅಪ್ಪಾ ಬಾರ್ನೆ ಅವರಿಗೆ ಸಂಸದ್'ರಿಗೆ ವಿಶಿಷ್ಟ ಪುರಸ್ಕಾರವನ್ನು ಘೋಷಣೆ ಮಾಡಲಾಗಿದೆ. * ಪಶ್ಚಿಮಬಂಗಾಳದ TMC ಸಂಸದ ಸೌಗತಾ ರಾಯ್, ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದ ಕಾಂಗ್ರೆಸ್ ಸಂಸದ ಕುಲದೀಪ್ ರಾಯ್ ಶರ್ಮಾ, ಮತ್ತು ಜಾರ್ಖಂಡ್'ನ ಬಿಜೆಪಿ ಸಂಸದರಾದ ಬಿದ್ಯುತ್ ಬಾರಾನ್ ಮಹಾತೊ, ಮಹಾರಾಷ್ಟ್ರದ ಹೀನಾ ವಿಜಯಕುಮಾರ್ ಗಾವಿತ್, ಹಾಗೂ ಮಧ್ಯಪ್ರದೇಶದ ಸುಧೀರ್ ಗುಪ್ತಾ ಅವರು 'ಸಂಸದ್ ರತ್ನ' ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ ಎಂದು ಪ್ರೈಮ್ ಪಾಯಿಂಟ್ ಪ್ರತಿಷ್ಠಾನದ ತೀರ್ಪುಗಾರರ ಸಮಿತಿ ಮಾಹಿತಿಯನ್ನು ನೀಡಿದೆ. * 2021 ರಲ್ಲಿ ನಿವೃತ್ತರಾದ ಸದಸ್ಯರ ಶ್ರೇಣಿಯಲ್ಲಿ, ರಾಜ್ಯಸಭೆಯಲ್ಲಿ ಪೂರ್ಣಾವಧಿಯಲ್ಲಿ ತೋರಿದ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಕೇರಳದ ಮಾಜಿ ಸಿಪಿಎಂ ಸಂಸದ ಕೆ.ಕೆ.ರಾಗೇಶ್ ಅವರಿಗೆ ಪುರಸ್ಕಾರವನ್ನು ಘೋಷಿಸಲಾಗಿದೆ. * ಪ್ರಸ್ತುತ ಕೇಂದ್ರ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವರಾಗಿರುವ ಅರ್ಜುನ್ ರಾಮ್ ಮೇಘವಾಲ್ ಅವರು ಸಂಸದ್ ರತ್ನ ಪುರಸ್ಕಾರ ಸಮಿತಿಗೆ ಅಧ್ಯಕ್ಷರಾಗಿದ್ದಾರೆ. ಹಾಗೂ ಟಿ.ಎಸ್.ಕೃಷ್ಣಮೂರ್ತಿ ಉಪಾಧ್ಯಕ್ಷರಾಗಿದ್ದಾರೆ, ಇವರು ಭಾರತೀಯ ಚುನಾವಣಾ ಆಯೋಗದ ಮಾಜಿ ಅಧ್ಯಕ್ಷರಾಗಿದ್ದರು. * ಇದೀಗ 'ಸಂಸದ್‌ ರತ್ನ' ಪ್ರಶಸ್ತಿಯನ್ನು ಸದನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಸಂಸದರನ್ನು ಗೌರವಿಸಲು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಲಹೆ ಮೇರೆಗೆ ಆರಂಭಿಸಲಾಗಿದೆ. ಈ ಹಿಂದೆ 2010 ರಲ್ಲಿ ಈ ಪ್ರಶಸ್ತಿಯ ಮೊದಲನೆ ಪ್ರದಾನ ಕಾರ್ಯಕ್ರಮದ ಸಮಾರಂಭವನ್ನು ತಮಿಳುನಾಡಿನ ಚೆನ್ನೈನಲ್ಲಿ ನಡೆಸಲಾಗಿತ್ತು. ಆ ಸಂಧರ್ಭದಲ್ಲಿ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಈ ಉಪಕ್ರಮಕ್ಕೆ ಚಾಲನೆ ನೀಡಿದ್ದರು. * ಇಲ್ಲಿಯವರೆಗೆ 75 ಸಂಸದರಿಗೆ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ, ಅದರಲ್ಲಿಯೂ ಉನ್ನತ ಮಟ್ಟದ ಕಾರ್ಯನಿರ್ವಹಣೆ ಮಾಡಿದ ಸಂಸದರಿಗೆ ಈ 'ಸಂಸದ್‌ ರತ್ನ' ಪ್ರಶಸ್ತಿಯನ್ನು ನೀಡಲಾಗುತ್ತದೆ.