Job Description: * ಪ್ರತಿ ವರ್ಷವು ಫೆಬ್ರವರಿ 21 ರಂದು ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಣೆ ಮಾಡಲಾಗುತ್ತದೆ, ಈ ದಿನವೂ ಭಾಷಾ ವೈವಿಧ್ಯತೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಬಗೆಯನ್ನು ಉತ್ತೇಜಿಸಲು ಹಾಗೂ ಬಹುಭಾಷಾವಾದವನ್ನು ಉತ್ತೇಜಿಸಲು ವಿಶ್ವಾದ್ಯಂತ ವಾರ್ಷಿಕ ಆಚರಿಸುವ ಆಚರಣೆಯಾಗಿದೆ. * ಈ ದಿನವನ್ನು UNESCO 1999 ನವೆಂಬರ್. 17 ರಂದು ಮೊದಲ ಬಾರಿಗೆ ಘೋಷಣೆ ಮಾಡಿದೆ. ಮತ್ತೇ ಇದನ್ನು 2002 ರಲ್ಲಿ UN ನಿರ್ಣಯ 56/262 ರ ಅಡಿಯಲ್ಲಿ ಅಂಗೀಕರಿಸುವುದರ ಜೊತೆಗೆ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಿಂದ ಔಪಚಾರಿಕವಾಗಿ ಗುರುತಿಸಿದೆ. ಮಾತೃಭಾಷಾ ದಿನವನ್ನು ಉತ್ತೇಜಿಸುವದು ಒಂದು ವಿಶಾಲವಾದ ಉಪಕ್ರಮದ ಅಂಗವಾಗಿದೆ. UN ಜನರಲ್ ಅಸೆಂಬ್ಲಿಯು 2007 ರ ಮೇ. 16 ರಂದು UN ರೆಸಲ್ಯೂಶನ್ 61/266 ಅಡಿಯಲ್ಲಿ ಅಂಗೀಕರಿಸಿರುವ ಹಾಗೆ ಪ್ರಪಂಚದ ಜನರು ಬಳಸುವ ಎಲ್ಲಾ ಭಾಷೆಗಳ ಸಂರಕ್ಷಣೆಯಾಗಿದೆ, ಮತ್ತೇ ಇದನ್ನು 2008 ರಲ್ಲಿ ಇಂಟರ್ನ್ಯಾಷನಲ್ ಇಯರ್ ಆಫ್ ಲ್ಯಾಂಗ್ವೇಜಸ್ ಎಂದು ಸ್ಥಾಪಿಸಲಾಗಿದೆ. * ಪ್ರಸ್ತುತ ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸುವ ಉದ್ದೇಶವು ಬಾಂಗ್ಲಾದೇಶದ ಉಪಕ್ರಮವಾಗಿತ್ತು. ಈ ಹಿಂದೆ ಬಾಂಗ್ಲಾದೇಶದಲ್ಲಿ ಫೆಬ್ರವರಿ. 21 ರಂದು ಬಾಂಗ್ಲಾದೇಶದ ಜನರು ಬಾಂಗ್ಲಾ ಭಾಷೆಗೆ ಮಾನ್ಯತೆಗಾಗಿ ಹೋರಾಡಿದ ದಿನದ ವಾರ್ಷಿಕೋತ್ಸವದ ಅಂಗವಾಗಿ ಈ ದಿನವನ್ನು ಭಾರತದ ಪಶ್ಚಿಮ ಬಂಗಾಳದಲ್ಲಿ ಆಚರಣೆ ಮಾಡಲಾಗುತ್ತದೆ. * ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನು 1996 ರ ಫೆಬ್ರವರಿ. 21 ರಂದು ಪ್ರಪಂಚದಾದ್ಯಂತ ಆಚರಣೆ ಮಾಡಲಾಗುತ್ತದೆ. ಬಾಂಗ್ಲಾದೇಶದ ಜನರು ಮಾಡಿರುವ ಭಾಷಾ ಚಳುವಳಿಗೆ ಗೌರವ ಸಲ್ಲಿಸಲು ಈ ದಿನವನ್ನು ಈ ಘೋಷಣೆಯನ್ನು ಮಾಡಲಾಗಿದೆ. * ಈ ಹಿಂದೆ 1947 ರಲ್ಲಿ ಪಾಕಿಸ್ತಾನ ದೇಶವನ್ನು ರಚಿಸಿದಾಗ, ಆ ಪ್ರದೇಶವು ಎರಡು ಭೌಗೋಳಿಕವಾಗಿ ಪ್ರತ್ಯೇಕ ಭಾಗಗಳಾದವು, ಅವುಗಳು ಆಗಿನ ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ) ಹಾಗೂ ಪಶ್ಚಿಮ ಪಾಕಿಸ್ತಾನ (ಈಗಿನ ಪಾಕಿಸ್ತಾನ). ಅಲ್ಲಿನ ಸಂಸ್ಕೃತಿ ಹಾಗೂ ಭಾಷೆಯ ಆಧಾರದ ಮೇಲೆ ಎರಡು ಭಾಗಗಳಾಗಿದ್ದವು. * ಪೂರ್ವ ಪಾಕಿಸ್ತಾನ ಹಾಗೂ ಪಶ್ಚಿಮ ಪಾಕಿಸ್ತಾನದ ಬಹುಪಾಲು ಜನರು ಬಂಗಾಳಿ ಅಥವಾ ಬಾಂಗ್ಲಾ ಭಾಷೆಯನ್ನು ಬಳಸುತ್ತಿದ್ದರು, ಆದರೆ ಪಾಕಿಸ್ತಾನ ಸರ್ಕಾರವು ಉರ್ದುವನ್ನು ಪಾಕಿಸ್ತಾನದ ಏಕೈಕ ರಾಷ್ಟ್ರೀಯ ಭಾಷೆ ಎಂದು ಘೋಷಣೆ ಮಾಡಿತು, ಆಗ 1948 ರಾಲಿ ಪೂರ್ವ ಪಾಕಿಸ್ತಾನದ ಜನರು ಪ್ರತಿಭಟಣೆಯನ್ನು ನಡೆಸಿದರು. ಕಾರಣ ಅಲ್ಲಿನ ಜನರು ಉರ್ದು ಜೊತೆಗೆ ಬಾಂಗ್ಲಾ ಭಾಷೆಯನ್ನು ರಾಷ್ಟ್ರೀಯ ಭಾಷೆಗಳಲ್ಲಿನ ಒಂದು ಭಾಷೆ ಎಂದು ಘೋಷಣೆ ಮಾಡಬೇಕೆಂದರು. ಆ ಸಂಧರ್ಭದಲ್ಲಿ ಢಾಕಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರ ಬೆಂಬಲದ ಜೊತೆಗೆ ಬೃಹತ್ ರ್ಯಾಲಿಗಳು ಹಾಗೂ ಸಭೆಗಳನ್ನು ಏರ್ಪಡಿಸಿದ್ದರು. * ಮತ್ತೇ 1952 ರ ಫೆಬ್ರವರಿ 21 ರಂದು, ಪೊಲೀಸರು ರ್ಯಾಲಿಗಳ ಮೇಲೆ ಗುಂಡು ಹಾರಿಸಿ ಪ್ರತಿಭಟನೆಯನ್ನು ಚದುರಿಸಿದರು, ಆಗ ಅಬ್ದುಸ್ ಸಲಾಂ, ಅಬುಲ್ ಬರ್ಕತ್, ರಫೀಕ್ ಉದ್ದೀನ್ ಅಹ್ಮದ್, ಅಬ್ದುಲ್ ಜಬ್ಬಾರ್ ಇನ್ನು ಅನೇಕರು ಮೃತಪಟ್ಟರು ಈ ಘಟನೆಯಿಂದಾಗಿ ಜನರು ತಮ್ಮ ಮಾತೃಭಾಷೆಗಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಆಗಿನಿಂದಲೂ ಬಾಂಗ್ಲಾದೇಶೀಯರು ಅಂತರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸುತ್ತಾರೆ.