Job Description: * ಬೆಂಗಳೂರು ಓಪನ್-2 ATP ಚಾಲೆಂಜರ್ ಟೆನಿಸ್ ಟೂರ್ನಿಯ ಚಾಂಪಿಯನ್‌ ಪಟ್ಟದಲ್ಲಿನ ಎರಡೂ ಸೆಟ್‌ಗಳಲ್ಲಿ ಆಸ್ಟ್ರೆಲಿಯಾದ ಅಲೆಕ್ಸಾಂಡರ್ ವುಕಿಕ್ ಅವರು ಮೇಲುಗೈನ್ನು ಸಾಧಿಸಿ ಈ ಟೆನಿಸ್ ಟೂರ್ನಿಯ ಪ್ರಶಸ್ತಿಯನ್ನು ಗೆದಿದ್ದಾರೆ. ಇತ್ತೀಚಿಗೆ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವುಕಿಚ್‌ ಅವರು ಬಲ್ಗೇರಿಯಾದ ದಿಮಿತರ್ ಕುಜ್ಮನೊವ್ ಅವರ ಎದುರು 6-4, 6-4 ರ ಅಂತರದಲ್ಲಿ ಜಯ ಸಾಧಿಸಿದ್ದಾರೆ. * ಬೆಂಗಳೂರು ಓಪನ್ ಇದೊಂದು ಹಾರ್ಡ್ ಕೋರ್ಟ್‌ಗಳಲ್ಲಿ ವೃತ್ತಿಪರ ಟೆನಿಸ್ ಪಂದ್ಯಾವಳಿಯಾಗಿದೆ. ಇದು ಪ್ರಸ್ತುತ ಅಸೋಸಿಯೇಷನ್ ಆಫ್ ಟೆನ್ನಿಸ್ ಪ್ರೊಫೆಷನಲ್ಸ್ (ATP) ಚಾಲೆಂಜರ್ ಟೂರ್‌ನ ಭಾಗವಾಗಿದೆ. ಈ ಸ್ಪರ್ಧೆಯನ್ನು 2015 ರಿಂದ ಭಾರತದ ಬೆಂಗಳೂರಿನಲ್ಲಿ ವಾರ್ಷಿಕವಾಗಿ ನಡೆಸಲಾಗುತ್ತಿದೆ. * ಅಲೆಕ್ಸಾಂಡರ್ ವುಕಿಕ್ ಅವರು 2022 ರ ಫೆಬ್ರವರಿ. 21 ರಂದು ವಿಶ್ವ ನಂ. 118 ರ ವೃತ್ತಿಜೀವನದ ಉನ್ನತ ATP ಸಿಂಗಲ್ಸ್ ಶ್ರೇಯಾಂಕವನ್ನು ಪಡೆದುಕೊಂಡಿದ್ದಾರೆ. ಇವರು ಈ ಹಿಂದೆ 2019 ರ ಜುಲೈ ನಲ್ಲಿ ವಿಶ್ವ ನಂ. 422 ರ ವೃತ್ತಿಜೀವನದ ಉನ್ನತ ATP ಡಬಲ್ಸ್ ಶ್ರೇಯಾಂಕವನ್ನು ಪಡೆದುಕೊಂಡಿದ್ದಾರೆ. ವುಕಿಕ್ ಅವರು ITF ಫ್ಯೂಚರ್ಸ್ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿಕೊಂಡಿದ್ದಾರೆ. * ಅಲೆಕ್ಸಾಂಡರ್ ವುಕಿಕ್ ಅವರು ಈ ಹಿಂದೆ 2018 ರ ಸಿಡ್ನಿ ಇಂಟರ್‌ನ್ಯಾಶನಲ್‌ನಲ್ಲಿ ಮುಖ್ಯ ಡ್ರಾ ATP ಸಿಂಗಲ್ಸ್‌ಗೆ ಪಾದಾರ್ಪಣೆಯನ್ನು ಮಾಡಿದ್ದಾರೆ ಈ ಹಿಂದೆ 2020 ರ ಫ್ರೆಂಚ್ ಓಪನ್‌ನಲ್ಲಿ ಅವರ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗೆ ಚೊಚ್ಚಲ ಪ್ರವೇಶ ಪಡೆದುಕೊಂಡಿದ್ದರು.