Job Description: * ಅಮೇರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚಿಗೆ ಸ್ವಂತದ ಹೊಸ ಸಾಮಾಜಿಕ ಮಾಧ್ಯಮ "ಟ್ರೂತ್ ಸೋಶಿಯಲ್" (Truth Social)ನ್ನು ಆಯಪಲ್‌ ಕಂಪನಿಯ 'ಆಪ್ ಸ್ಟೋರ್‌'ನಲ್ಲಿ ಬಿಡುಗಡೆ ಮಾಡಿದ್ದಾರೆ. * ರಾಯಿಟರ್ಸ್ ವರದಿಯ ಪ್ರಕಾರ ಈ ಸಾಮಾಜಿಕ ಮಾಧ್ಯಮವು ಆಯಪಲ್‌ ಫೋನ್‌ಗಳಲ್ಲಿ ಅಪ್ಲಿಕೇಷನ್‌ ಸ್ವಯಂಚಾಲಿತವಾಗಿ ಡೌನ್‌ಲೋಡ್‌ ಆಗಲಿದೆ ಎಂದು ತಿಳಿಸಿದೆ. * ಈ ಹಿಂದೆ 2021 ರ ಅಮೇರಿಕದ ಕ್ಯಾಪಿಟಲ್ ಮೇಲಿನ ದಾಳಿಯ ನಂತರ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್, ಫೇಸ್‌ಬುಕ್ ಹಾಗೂ ಯೂಟ್ಯೂಬ್‌ ಖಾತೆಗಳಿಗೆ ನಿಷೇಧ ಹೇರಲಾಗಿತ್ತು. ಈ ಕಾರಣದಿಂದಾಗಿ ಟ್ರಂಪ್ ಅವರು ತಾವೇ ಒಂದು ಸ್ವಂತದ ಪ್ರತ್ಯೇಕ ಸಾಮಾಜಿಕ ಮಾಧ್ಯಮವನ್ನು ಆರಂಭಿಸಿದ್ದಾರೆ. * ಈ ಟ್ರೂತ್ ಸೋಶಿಯಲ್ ಎಂಬುದು ಇದೊಂದು ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ, ಈ ವೇದಿಕೆಯನ್ನು ಟ್ರಂಪ್ ಮೀಡಿಯಾ ಹಾಗೂ ಟೆಕ್ನಾಲಜಿ ಗ್ರೂಪ್ ರಚಿಸಿವೆ. ಇತ್ತೀಚಿಗೆ ಇದನ್ನು 2022 ರ ಫೆಬ್ರವರಿ 21 ರಂದು ಆರಂಭಿಸಲಾಗಿದೆ. * ಈ ಸಾಮಾಜಿಕ ಮಾಧ್ಯಮ ವೇದಿಕೆಯ ಸೇವಾ ನಿಯಮಗಳು: ಕಂಪನಿಯು ಇದನ್ನು 2021 ರ ಅಕ್ಟೋಬರ್ ನಲ್ಲಿ ಮೊದಲ ಬಾರಿಗೆ ಘೋಷಣೆ ಮಾಡಲಾಗಿದೆ, ಈ ಕಂಪನಿಯು ಈ ಸೈಟ್‌ಗೆ ಪೋಸ್ಟ್ ಮಾಡುವ ಯಾವುದೇ ವಿಷಯವು ನಿಖರತೆ, ಆಕ್ರಮಣಶೀಲತೆ, ಅಭಿಪ್ರಾಯಗಳು ವಿಶ್ವಾಸಾರ್ಹತೆಗೆ ಕಾನೂನುಬದ್ಧವಾಗಿ ಯಾವುದೇ ಜವಾಬ್ದಾರರಾಗಿರುವುದಿಲ್ಲ ಎಂದು ತಿಳಿಸಿದೆ. ಈ ಕಾನೂನನ್ನು ಟ್ರಂಪ್ ಅವರ ಅಧ್ಯಕ್ಷರಾಗಿದ್ದ ಸಂಧರ್ಭದಲ್ಲಿ ಇದಕ್ಕೆ ದೃಢವಾಗಿ ವಿರೋಧಿಸಿದ್ದರು. * ಟ್ರೂತ್ ಸೋಶಿಯಲ್ ಟ್ವಿಟರ್ ನಂತರ ಅತ್ಯಧಿಕವಾಗಿ ಮಾದರಿಯಾಗಿದೆ. ಈ ವರದಿಯ ಪ್ರಕಾರ, ಬಳಕೆದಾರರು ಪೋಸ್ಟ್‌ಗಳನ್ನು ಮಾಡಲು ಹಾಗೂ ಇತರ ಬಳಕೆದಾರರ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಕಲ್ಪಿಸಿದೆ. ಹಾಗೂ ಈ ವೇದಿಕೆಯು ನ್ಯೂಸ್‌ಫೀಡ್ ನ್ನು ಹೊಂದಿದೆ. ಸಾಧ್ಯ ಇದನ್ನು 'ಸತ್ಯ ಫೀಡ್' ಎನ್ನಲಾಗುತ್ತದೆ.