Job Description: * ಪ್ರಸ್ತುತ IRCTC ಯು ಟಿಕೆಟ್‌ಗಳನ್ನು ಬುಕಿಂಗ್ ಮಾಡಲು 'ಕನ್‌ಫರ್ನ್ ಟಿಕೆಟ್' (confirm ticket) ಎಂಬ ಹೊಸ ಅಪ್ಲಿಕೇಶನ್'ನ್ನು ಬಿಡುಗಡೆ ಮಾಡಲಿದೆ. ಇದೀಗ ಬಿಡುಗಡೆ ಮಾಡಲಾಗುವ ಈ ಮೊಬೈಲ್ ಅಪ್ಲಿಕೇಶನ್ ನ್ನು ವಿಶೇಷವಾಗಿ ತತ್ಕಾಲ್ ಬುಕಿಂಗ್‌ಗಾಗಿ ಆರಂಭಿಸಲಾಗಿದೆ. * ಈ ಆಪ್'ನ ಮೂಲಕ ಪ್ರಯಾಣಿಕರು ತಾವು ಇರುವ ಜಾಗ ಅಥವಾ ಮನೆಯಿಂದಲೇ ತುರ್ತು ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದು. ಈ 'ಕನ್ಫರ್ಮ್ ಟಿಕೆಟ್' ಆಪ್ ಪ್ರಯಾಣಿಕರಿಗೆ ವಿವಿಧ ರೈಲುಗಳ ಸೀಟ್ ಲಭ್ಯತೆಯನ್ನು ನೋಡಲು ಅನುಮತಿಯನ್ನು ನೀಡುತ್ತದೆ. ಜೊತೆಗೆ ಲಭ್ಯವಿರುವ ಎಲ್ಲಾ ತತ್ಕಾಲ್ ಟಿಕೆಟ್‌ಗಳನ್ನು ತೋರಿಸುತ್ತದೆ. ಇದೀಗ ಆಂಡ್ರಾಯ್ಡ್ ಫೋನ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನ ಮೂಲಕ ಈ ಅಪ್ಲಿಕೇಶನ್ ನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಬಹುದಾಗಿದೆ. * ಬಳಕೆದಾರರು ಈ ಟಿಕೆಟ್ ಅಪ್ಲಿಕೇಶನ್ ಮೂಲಕ ಉಚಿತ ಟಿಕೆಟ್ ರದ್ದತಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಹಾಗೂ ಈ ಅಪ್ಲಿಕೇಶನ್ ಲಾಗಿನ್ ಮಾಡುವ ಸಂಧರ್ಭದಲ್ಲಿ ವೈಯಕ್ತಿಕ ಮಾಹಿತಿಯನ್ನು ಉಳಿಸಲು ಅನುಮತಿಯನ್ನು ನೀಡುತ್ತದೆ, ಇದರಿಂದ ಪ್ರಯಾಣಿಕರ ಸಮಯ ಉಳಿತಾಯವಾಗುತ್ತದೆ. ಪದೇ ಪದೇ ಪ್ರಯಾಣಿಕನ ಮಾಹಿತಿಯನ್ನು ನಮೂದಿಸುವ ಅಗತ್ಯವಿರುವದಿಲ್ಲ ಎಂದು ತಿಳಿಸಿದೆ. * ಪ್ರಸ್ತುತ ಈ ಅಪ್ಲಿಕೇಶನ್'ನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಹಾಗೂ IRCTC ನೆಕ್ಸ್ಟ್ ಜನರೇಷನ್ ಅಪ್ಲಿಕೇಶನ್ ಮುಖಾಂತರ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರ ಜೊತೆಗೆ IRCTC ವೆಬ್‌ಸೈಟ್ ಆಗಿರುವ www.irctc.co.in ನಲ್ಲಿ ವಿವರಗಳನ್ನು ನಮೂದಿಸಲಾಗಿದೆ. ಆದರೆ ಅಪ್ಲಿಕೇಶನ್ ಮೂಲಕ ತತ್ಕಾಲ್ ಟಿಕೆಟ್‌ಗಳನ್ನೂ ಬುಕ್ ಮಾಡುವದರಿಂದ ಹೆಚ್ಚುವರಿ ಶುಲ್ಕವನ್ನು ಭರಿಸಬೇಕಾಗುತ್ತದೆ. * ಇಂಡಿಯನ್ ರೈಲ್ವೇಸ್ ಕ್ಯಾಟರಿಂಗ್ ಹಾಗೂ ಟೂರಿಸಂ ಕಾರ್ಪೊರೇಷನ್ (IRCTC) ಭಾರತೀಯ ರೈಲ್ವೇಸ್, ರೈಲ್ವೇ ಸಚಿವಾಲಯ, ಭಾರತೀಯ ರೈಲ್ವೆಗೆ ಟಿಕೆಟ್, ಅಡುಗೆ ಹಾಗೂ ಪ್ರವಾಸೋದ್ಯಮ ಸೇವೆಗಳನ್ನು ನೀಡುವ ಭಾರತ ಸರ್ಕಾರದ ಮಾಲೀಕತ್ವವನ್ನು ಹೊಂದಿದೆ. ಈ IRCTC ನ್ನು ಹಿಂದೆ 2019 ರಿಂದ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ಸೇರಿಸಲಾಗಿದೆ, ಹಾಗೂ ಸರ್ಕಾರವು ಬಹುಪಾಲು ಮಾಲೀಕತ್ವವನ್ನು ಹೊಂದಿದೆ. * IRCTC ನ್ನು ಈ ಹಿಂದೆ 1999 ರ ಸೆಪ್ಟೆಂಬರ್. 27 ರಂದು ಸ್ಥಾಪಿಸಲಾಗಿದೆ. ಇದೊಂದು ಭಾರತೀಯ ರೈಲ್ವೆಯ ಮೂಲಕ ಭಾರತ ಸರ್ಕಾರದ ಸಂಪೂರ್ಣ ಸ್ವಾಮ್ಯದ ಸಾರ್ವಜನಿಕ ರಂಗದ ಉದ್ಯಮವಾಗಿದೆ. ಇದರಿಂದ ಭಾರತೀಯ ರೈಲ್ವೇಗೆ ಆನ್‌ಲೈನ್ ಟಿಕೆಟ್, ಊಟೋಪಚಾರ, ಹಾಗೂ ರೈಲುಗಳಲ್ಲಿ ಮತ್ತು ರೈಲು ನಿಲ್ದಾಣಗಳಲ್ಲಿ ಕುಡಿಯುವ ನೀರನ್ನು ಮಾರಾಟ ಈ ಎಲ್ಲ ಸೇವೆಗಳನ್ನು ಸಾರ್ವಜನಿಕರಿಗೆ ನೀಡುತ್ತದೆ, ಹಾಗೂ ಈ ಸೇವೆಗಳನ್ನು ನೀಡುವ ಅಧಿಕಾರ ಹೊಂದಿರುವ ಏಕೈಕ ಘಟಕ ಇದಾಗಿದೆ. ಮತ್ತೇ ಇದನ್ನು 2008 ರ ಮೇ ತಿಂಗಳಿನಲ್ಲಿ ಮಿನಿರತ್ನ ಸಾರ್ವಜನಿಕ ನಿಗಮ ಎಂದು ವರ್ಗೀಕರಿಸಲಾಗಿದೆ.