Job Description: * ಪ್ರಸ್ತುತ ಬ್ರಿಟನ್‍ನಿಂದ ಶ್ರೀಲಂಕಾದ ಕೊಲಂಬೋಗೆ ಅಕ್ರಮವಾಗಿ ಆಮದು ಮಾಡಲಾಗಿರುವ ಸಾವಿರಾರು ಟನ್ ತೂಕದ ತ್ಯಾಜ್ಯ ವಸ್ತುಗಳನ್ನು ಹೊಂದಿರುವ ನೂರಾರು ಕಂಟೇನರ್‍ಗಳನ್ನು ಶ್ರೀಲಂಕಾ ದೇಶವು ಮರಳಿ ಬ್ರಿಟನ್‍ಗೆ ರವಾನಿಸಿದೆ. * ಬ್ರಿಟನ್‍ ರಾಷ್ಟ್ರದಿಂದ ಈ ತ್ಯಾಜ್ಯವಸ್ತುಗಳು 2017 ಹಾಗೂ 2019 ರ ನಡುವೆ ಶ್ರೀಲಂಕಾಗೆ ಬಂದಿವೆ ಎನ್ನಲಾಗಿದೆ, ಇವುಗಳನ್ನು ಬಳಸಿದ ಮ್ಯಾಟ್ರೆಸ್‍ಗಳು, ಕಾರ್ಪೆಟ್‍ಗಳು ಹಾಗೂ ರಗ್‍ಗಳು ಎಂದು ತಿಳಿಸಲಾಗಿತ್ತು. * ಬ್ರಿಟನ್‍ ನಿಂದ ಆಗಮಿಸುವ ಕಂಟೇನರ್ ಗಳಲ್ಲಿ ಅಸಾಧ್ಯವಾದ ವಾಸನೆಯನ್ನು ಹೊರ ಬರುತಿತ್ತು ಎಂದು ತಿಳಿಸಲಾಗಿದೆ, ಈ ಕಾರಣದಿಂದಾಗಿ ಈ ಕಂಟೇನರ್ ಗಳನ್ನು ಮರಳಿ ಬ್ರಿಟನ್ ಗೆ ಕಳುಹಿಸಲಾಗಿದೆ ಎಂದಿದ್ದಾರೆ. ಒಟ್ಟಾರೆ ಇಲ್ಲಿಯವರೆಗೆ 45 ಕಂಟೇನರ್ ಗಳನ್ನೂ ಮರಳಿ ಬ್ರಿಟನ್ ಗೆ ರವಾನಿಸಲಾಗಿದೆ. ಪ್ರಸ್ತುತ ಬ್ರಿಟನ್ 'ನೊಂದ 263 ಕಂಟೇನರ್'ಗಳ ಪೈಕಿ ಮರಳಿ ಕಳುಹಿಸಲಾಗಿರುವ 45 ಕಂಟೇನರ್'ಗಳು ಕೊನೆಯ ಕಂಟೇನರ್'ಗಳಾಗಿದ್ದವು. * ಇಲ್ಲಿಯವರೆಗೆ ಬ್ರಿಟನ್'ನಿಂದ ಸರಿ ಸುಮಾರು 3,000 ಟನ್ ವೇಸ್ಟ್(ತ್ಯಾಜ್ಯ) ಶ್ರೀಲಂಕಾ ರಾಷ್ಟ್ರಕ್ಕೆ ಆಗಮಿಸಿದೆ ಎಂದು ತಿಳಿಸಲಾಗಿದೆ. ಪ್ರಸ್ತುತ ಶ್ರೀಲಂಕಾದ ಕಸ್ಟಮ್ಸ್ ಮುಖ್ಯಸ್ಥ ವಿಜಿತಾ ರವಿಪ್ರಿಯ ಅವರು ತಿಳಿಸಿರುವ ಪ್ರಕಾರ ಈ ರೀತಿಯ ಅಪಾಯಕಾರಿ ತ್ಯಾಜ್ಯವನ್ನು ಮತ್ತೆ ನಡೆಯದಂತೆ ಎಚ್ಚರವನ್ನು ವಹಿಸಲಾಗಿದೆ ಎಂದು ತಿಳಿಸಿದ್ದಾರೆ. * ಈ ಹಿಂದೆ 2020ರ ಸೆಪ್ಟೆಂಬರ್'ನಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಒಳಗೊಂಡಿರುವ ಮೊದಲ ಬ್ಯಾಚಿನ 21 ಕಂಟೇನರ್'ಗಳನ್ನೂ ಬ್ರಿಟನ್‍ಗೆ ಮರಳಿ ರವಾನಿಸಲಾಗಿದೆ. ಶ್ರೀಲಂಕಾದಲ್ಲಿನ ಸ್ಥಳೀಯ ಕಂಪನಿಯು ಈ ತ್ಯಾಜ್ಯವನ್ನು ಬ್ರಿಟನ್‍'ನಿಂದ ಆಮದು ಮಾಡಿಕೊಂಡಿತ್ತು. ಆಮದು ಮಾಡಿಕೊಂಡಿರುವ ತ್ಯಾಜ್ಯಗಳಲ್ಲಿ ಬಳಸಿರುವ ಮ್ಯಾಟ್ರೆಸ್‍ಗಳಲ್ಲಿನ ಸ್ಪ್ರಿಂಗ್ ಮತ್ತು ಹತ್ತಿಯನ್ನು ವಿದೇಶಗಳಲ್ಲಿರುವ ತಯಾರಕರಿಗೆ ರವಾನಿಸುವ ಉದ್ದೇಶವನ್ನು ಹೊಂದಿತ್ತು ಎನ್ನಲಾಗಿದೆ. * ಶ್ರೀಲಂಕಾದ ಸ್ಥಳೀಯ ಸಂಸ್ಥೆಯು ಆಮದು ಮಾಡಿಕೊಂಡಿರುವ ಈ ತ್ಯಾಜ್ಯದಲ್ಲಿನ ಸುಮಾರು 180 ಟನ್ ತ್ಯಾಜ್ಯವನ್ನು ಈ ಹಿಂದೆ 2017 ಹಾಗೂ 2018 ರಲ್ಲಿ ಭಾರತ ಹಾಗೂ ದುಬೈಗೆ ಸಾಗಿಸಲಾಗಿತ್ತು ಎಂದು 2019 ರಲ್ಲಿ ಶ್ರೀಲಂಕಾ ನಡೆಸಿರುವ ಸಂಶೋಧನೆಯಲ್ಲಿ ತಿಳಿಸಿದೆ. * ಶ್ರೀಲಂಕಾ ಅಷ್ಟೇ ಅಲ್ಲದೇ ಇನ್ನು ಅನೇಕ ದೇಶಗಳು ಫಿಲಿಪ್ಪೀನ್ಸ್, ಇಂಡೊನೇಷ್ಯಾ ಹಾಗೂ ಮಲೇಷ್ಯಾ ರಾಷ್ಟ್ರಗಳು ನೂರಾರು ಕಂಟೇನರ್'ಗಳನ್ನೂ ತಿರಸ್ಕರಿಸಿ ಮರಳಿ ಅವುಗಳನ್ನು ಆ ದೇಶಕ್ಕೆ ಮರಳಿಸಿದೆ.