Job Description: * ಇತ್ತೀಚಿಗೆ ಭಾರತೀಯ ಮಹಿಳಾ ತಂಡದ ಕ್ರಿಕೆಟ್ ಆಟಗಾರ್ತಿ ವಿ. ಆರ್. ವನಿತಾ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. ವನಿತಾ ಅವರು ಈ ಮೊದಲು 2014 ರ ಜನವರಿಯಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಹಾಗೂ ಮೊದಲ T20I ಪಂದ್ಯವನ್ನು ವಿಶಾಖಪಟ್ಟಣಂದಲ್ಲಿ ಆಡಿದ್ದರು. * ವಿ. ಆರ್. ವನಿತಾ ಅವರು ಒಟ್ಟಾರೆಯಾಗಿ ತಮ್ಮ ತಮ್ಮ ವೃತ್ತಿಜೀವನದಲ್ಲಿ '6' ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ 16 T20 ಪಂದ್ಯಗಳಲ್ಲಿ ಆಟವಾಡಿ ಒಟ್ಟಾರೆ 301 ರನ್ ಗಳನ್ನೂ ಕಲೆಹಾಕಿದ್ದಾರೆ. ಹಾಗೂ ಇವರು ದೇಶೀಯ ಪಂದ್ಯಾವಳಿಗಳಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಆಟವಾಡಿದ್ದಾರೆ. ವನಿತಾ ಅವರು 'ಲಿಸ್ಟ್ ಎ' ಹಾಗೂ 'ಟಿ 20' ಎರಡೂ ಪಂದ್ಯಗಳಲ್ಲಿ 1410 ರನ್ ಗಳನ್ನೂ ಕಲೆಹಾಕಿದ್ದಾರೆ. * ಪ್ರಸ್ತುತ ವನಿತಾ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಬಂಗಾಳದ ಕ್ರಿಕೆಟ್ ಸಂಸ್ಥೆಗಳಿಗೆ ಧನ್ಯವಾದವನ್ನು ತಿಳಿಸುತ್ತೇನೆ ಎಂದಿದ್ದಾರೆ. * ವೆಲ್ಲಸ್ವಾಮಿ ರಾಮ ವನಿತಾ ಅವರು ಭಾರತೀಯ ಮಾಜಿ ಕ್ರಿಕೆಟಿಗ. ಇವರು ಕರ್ನಾಟಕ ತಂಡದ ಆರಂಭಿಕ ಬ್ಯಾಟರ್ ಆಗಿದ್ದರು. ಇತ್ತೀಚಿಗೆ ಇವರು 2022 ರ ಫೆಬ್ರವರಿಯಲ್ಲಿ ಎಲ್ಲಾ ರೀತಿಯ ಕ್ರಿಕೆಟ್‌ ಗೆ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. * ವನಿತಾ ಅವರ ವೃತ್ತಿ ಜೀವನವನ್ನು ಈ ಹಿಂದೆ 2006 ರಲ್ಲಿ ಕರ್ನಾಟಕ ಮಹಿಳಾ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡುವ ಮೂಲಕ ಆರಂಭಿಸಿದ್ದರು.