Job Description: * ಇತ್ತೀಚಿಗೆ ಮಾಲ್ಡೀವ್ಸ್ ನ ವೆಲಾನಾ ವಿಮಾನ ನಿಲ್ದಾಣದಲ್ಲಿನ ಅಧಿಕಾರಿಗಳು ಏರ್ ಇಂಡಿಯಾದ AI-267 ವಿಮಾನವನ್ನ ಜಲ ಫಿರಂಗಿ ಮೂಲಕ ವಂದನೆಯನ್ನು ತಿಳಿಸುತ್ತಾ ಸ್ವಾಗತಿಸಿಕೊಂಡರು. ಪ್ರಸ್ತುತ ಭಾರತ ಹಾಗೂ ಮಾಲ್ಡೀವ್ಸ್ ನಡುವಿನ 46 ವರ್ಷಗಳ ವಾಯು ಸೇವೆಯ ನೆನಪಿಗಾಗಿ ಈ ರೀತಿಯಲ್ಲಿ ಸ್ವಾಗತವನ್ನು ಕೋರಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * ಈ ಹಿಂದೆ 1976 ರಲ್ಲಿ ಭಾರತವು ಮಾಲ್ಡೀವ್ಸ್ ದೇಶಕ್ಕೆ ವಿಮಾನಗಳನ್ನು ನಿರ್ವಹಣೆ ಮಾಡಲು ಆರಂಭಿಸಿತು. ಭಾರತೀಯ ಏರ್ ಇಂಡಿಯಾ 1976 ರ ಫೆಬ್ರವರಿಯಲ್ಲಿ ಕೇರಳದ ತಿರುವನಂತಪುರಂ ನಗರದಿಂದ ಮಾಲ್ಡೀವ್ಸ್ ಗೆ ತನ್ನ ಪ್ರಥಮ ವಾಣಿಜ್ಯ ವಿಮಾನವನ್ನು ಸೇವೆಯನ್ನು ಆರಂಭಿಸಿದೆ. * ಮಾಲ್ಡೀವಿಯನ್ ಏರ್ ಲೈನ್ಸ್ ಇದೊಂದು ಮಾಲ್ಡೀವ್ಸ್ ನ ರಾಷ್ಟ್ರೀಯ ವಾಹಕವಾಗಿದೆ, ಈ ವಿಮಾನವು ದೆಹಲಿ ಹಾಗೂ ಮೇಲ್ ನಡುವೆ ತನ್ನ ಮೊಟ್ಟ ಮೊದಲ ತಡೆರಹಿತ ವಿಮಾನವನ್ನ 2021 ರ ನವೆಂಬರ್. 04 ರಂದು ಆರಂಭಿಸಿದೆ. ಈ ಏರ್ ಲೈನ್ಸ್ ವಾರದಲ್ಲಿ '3' ಬಾರಿ ಕಾರ್ಯಾಚರಣೆ ನಡೆಸುತ್ತದೆ. * ಏರ್ ಇಂಡಿಯಾ ಇದೊಂದು ಭಾರತದ ಫ್ಲ್ಯಾಗ್ ಕ್ಯಾರಿಯರ್ ಏರ್‌ಲೈನ್ ಆಗಿದೆ, ಈ ಏರ್ ಲೈನ್ ತನ್ನ ಪ್ರಧಾನ ಕಛೇರಿಯನ್ನು ನವದೆಹಲಿಯಲ್ಲಿ ಹೊಂದಿದೆ. ಏರ್ ಇಂಡಿಯಾ ಲಿಮಿಟೆಡ್‌ನ ಮಾಜಿ ಮಾಲೀಕರಾಗಿದ್ದ ಭಾರತ ಸರ್ಕಾರವು ಇತ್ತೀಚಿಗೆ ಈ ಏರ್ ಲೈನ್ ಅನ್ನು ಟಾಟಾ ಗ್ರೂಪ್ಸ್ ಗೆ ಮಾರಾಟವನ್ನು ಪೂರ್ಣಗೊಳಿಸಿದೆ, ಪ್ರಸ್ತುತ ಟಾಟಾ ಸನ್ಸ್‌ನ ವಿಶೇಷ-ಉದ್ದೇಶದ ವಾಹನ ಟಾಲೇಸ್ ಪ್ರೈವೇಟ್ ಲಿಮಿಟೆಡ್‌ನ ಮಾಲೀಕತ್ವದಲ್ಲಿದೆ. ಇದೀಗ ಏರ್ ಇಂಡಿಯಾ 102 ದೇಶೀಯ ಹಾಗೂ ಅಂತರಾಷ್ಟ್ರೀಯ ಸ್ಥಳಗಳಲ್ಲಿ ಸೇವೆಯನ್ನು ನೀಡುತ್ತಿರುವ ಏರ್‌ಬಸ್ ಹಾಗೂ ಬೋಯಿಂಗ್ ವಿಮಾನಗಳ ಸಮೂಹವನ್ನು ನಿರ್ವಹಣೆ ಮಾಡುತ್ತದೆ. ಈ ಏರ್ ಲೈನ್ ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನ್ನ ಏರ್‌ಲೈನ್ ಕೇಂದ್ರವನ್ನು ಹೊಂದಿದೆ. * ಈ ಏರ್ ಇಂಡಿಯಾ ಸುಮಾರು 18.6% ಮಾರುಕಟ್ಟೆ ಪಾಲನ್ನು ಹೊಂದಿ ಭಾರತದಿಂದ ಹೊರಗಿರುವ ಅತಿದೊಡ್ಡ ಅಂತರಾಷ್ಟ್ರೀಯ ವಾಹಕವಾಗಿದೆ. ಈ ಏರ್‌ಲೈನ್ 2014 ರ ಜುಲೈ. 11 ರಂದು ಸ್ಟಾರ್ ಅಲೈಯನ್ಸ್‌ನ 27 ನೇ ಸದಸ್ಯತ್ವವನ್ನು ಪಡೆದುಕೊಂಡಿದೆ. * ಜೆ.ಆರ್.ಡಿ.ಟಾಟಾ ಅವರು ಈ ವಿಮಾನಯಾನ ಸಂಸ್ಥೆಯನ್ನು 1932 ರಲ್ಲಿ ಟಾಟಾ ಏರ್‌ಲೈನ್ಸ್ ಎಂದು ಸ್ಥಾಪನೆ ಮಾಡಿದ್ದಾರೆ. 2 ನೆಯ ಮಹಾಯುದ್ಧದ ನಂತರ ಈ ವಿಮಾನಯಾನ ಸಂಸ್ಥೆಯ ಸಾರ್ವಜನಿಕ ಸೀಮಿತ ಕಂಪನಿಯಾಯಿತು ಹಾಗೂ ಈ ಸಂಸ್ಥೆಯನ್ನು ಏರ್ ಇಂಡಿಯಾ ಎಂದು ಮರುನಾಮಕರಣ ಮಾಡಿದರು. ಇತ್ತೀಚಿಗೆ 2022 ರಲ್ಲಿ ಈ ವಿಮಾನಯಾನ ಹಾಗೂ ಅದರ ಆಸ್ತಿಗಳ ಮಾಲೀಕತ್ವವನ್ನು ಟಾಟಾ ಗ್ರೂಪ್ ಗೆ ಹಿಂದಿರುಗಿಸಲಾಯಿತು.