Job Description: * ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಇಂದೋರ್‌ ನಗರದಲ್ಲಿ ಸುಮಾರು 550 ಟನ್‌ ಸಾಮರ್ಥ್ಯದ "ಗೋಬರ್‌-ಧನ್‌" ಜೈವಿಕ-ಸಿಎನ್‌ಜಿ(CNG) ಸ್ಥಾವರವನ್ನು ವರ್ಚುವಲ್‌ ಸಭೆಯ ಮೂಲಕ ಉದ್ಘಾಟಿಸಿದ್ದಾರೆ. ಪ್ರಸ್ತುತ ಈ ಗೋವರ್ಧನ್‌ ಸ್ಥಾವರವು "ತ್ಯಾಜ್ಯದಿಂದ ಸಂಪತ್ತು" ಎಂಬ ಪರಿಕಲ್ಪನೆಯನ್ನು ಹೊಂದಿದೆ. * ಪ್ರಧಾನಿ ಮೋದಿ ಅವರು ಈ ಸ್ಥಾವರಕ್ಕೆ ಚಾಲನೆ ನೀಡಿದರು, ನಂತರ ಮಾತನಾಡಿದ ಅವರು ಹಲವಾರು ಹಲವು ದಶಕಗಳಿಂದ ದೇಶದ ನಗರಗಳಲ್ಲಿ ಸಾವಿರಾರು ಎಕರೆ ಪ್ರದೇಶಗಳಲ್ಲಿ ಲಕ್ಷಗಟ್ಟಲೆ ಟನ್‌ ತ್ಯಾಜ್ಯವು ಸಂಗ್ರಹವಾಗಿತ್ತು. ಈ ತ್ಯಾಜ್ಯದಿಂದಾಗಿ ವಾಯುಮಾಲಿನ್ಯ ಮತ್ತು ಜಲಮಾಲಿನ್ಯ ಹೆಚ್ಚಳವಾಗಿತ್ತು, ಇದರಿಂದಾಗಿ ಅನೇಕ ಸಾಂಕ್ರಾಮಿಕ ರೋಗಗಳು ಬಂದಿವೆ. ಈ ಹಿನ್ನಲೆಯಿಂದಾಗಿ 2ನೇ ಹಂತದ ಸ್ವತ್ಛ ಭಾರತ ಯೋಜನೆಯ ಅಡಿಯಲ್ಲಿ ಈ ತ್ಯಾಜ್ಯದ ಸಮಸ್ಯೆಗೆ ಪರಿಹಾರವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. * ಸುಮಾರು 7 ರಿಂದ 8 ವರ್ಷಗಳ ಹಿಂದೆ ಭಾರತದಲ್ಲಿ ಪೆಟ್ರೋಲ್‌ನಲ್ಲಿ ಎಥೆನಾಲ್‌ ಸಮ್ಮಿಶ್ರಣವು ಕೇವಲ ಶೇ.1 ರಿಂದ 2 ರಷ್ಟಿತ್ತು. ಆದರೆ ಇದೀಗ ಶೇ.8 ಕ್ಕೆ ಏರಿಕೆಯಾಗಿದೆ ಎಂದಿದ್ದಾರೆ. ಗೋವರ್ಧನ್‌ ಸ್ಥಾವರವು ಇಡೀ ಏಷ್ಯಾ ಖಂಡದಲ್ಲೇ ಬೃಹತ್‌ ಬಯೋ-ಸಿಎನ್‌ಜಿ(CNG) ಸ್ಥಾವರವಾಗಿದೆ. ಈ ಸ್ಥಾವರವು ಪ್ರತಿ ದಿನಕ್ಕೆ 550 ಟನ್‌ ತ್ಯಾಜ್ಯವನ್ನು ಕರಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇದೀಗ ಈ ಜೈವಿಕ ಸಿಎನ್‌ಜಿ (CNG) ಘಟಕವು ಮಧ್ಯಪ್ರದೇಶದ ಇಂದೋರ್‌ನ ದೇವ್‌ಗುರಾಡಿಯಾ ಪ್ರದೇಶದಲ್ಲಿದೆ. * ಮುಂದಿನ ಎರಡು ವರ್ಷಗಳಲ್ಲಿ ದೇಶದಲ್ಲಿನ 75 ಪ್ರಮುಖ ಮುನ್ಸಿಪಲ್ ಸಂಸ್ಥೆಗಳಲ್ಲಿ ಈ ರೀತಿಯ ಗೋಬರ್-ಧನ್ ಜೈವಿಕ-ಸಿಎನ್‌ಜಿ ಸ್ಥಾವರಗಳನ್ನು ನಿರ್ಮಿಸಲಾಗುತ್ತದೆ ಎಂದು ತಿಳಿಸಿದ್ದಾರೆ ಇದರಿಂದಾಗಿ ಭಾರತದ ನಗರಗಳನ್ನು ಸ್ವಚ್ಛ, ಹಾಗೂ ಮಾಲಿನ್ಯ ಮುಕ್ತವಗಳಿವೆ ಎಂದಿದ್ದಾರೆ. * ಪ್ರಸ್ತುತ ಪ್ರಧಾನ ಮಂತ್ರಿ ಕಚೇರಿ ತಿಳಿಸಿರುವ ಮಾಹಿತಿಯ ಪ್ರಕಾರ ಈ ಘನತ್ಯಾಜ್ಯದ ಗೋಬರ್-ಧನ್ ಸ್ಥಾವರವು ಸ್ವಚ್ಛ ಭಾರತ್ ಮಿಷನ್ ಅರ್ಬನ್ 2.0 ಅಡಿಯಲ್ಲಿ 'ಕಸ ಮುಕ್ತ ನಗರಗಳನ್ನು' ರಚಿಸುವದಕ್ಕೆ ಅನುಗುಣವಾಗಿವೆ ಎಂದಿದೆ. * ಗೋಬರ್-ಧನ್ ಸ್ಥಾವರವು ಪ್ರತಿ ದಿನಕ್ಕೆ ಸುಮಾರು 17,000 ಕೆಜಿ CNG ಹಾಗೂ 100 ಟನ್ ಸಾವಯವ ಗೊಬ್ಬರವನ್ನು ಉತ್ಪಾದಿಸಲಿದೆ ಎಂದು ನಿರೀಕ್ಷಿಸಿದ್ದಾರೆ.