Job Description: * ಭಾರತ ದೇಶವು ಮುಂದಿನ ವರ್ಷ ಅಂದರೆ 2023 ನೇ ಸಾಲಿನ ಅಂತರರಾಷ್ಟ್ರೀಯ ಒಲಿಂಪಿಕ್ ಕಮಿಟಿಯ ಸಭೆಗೆ ಆತಿಥ್ಯ ವಹಿಸಲಿದೆ. ಈ ಮಾಹಿತಿಯನ್ನು IOC ಯು ಖಚಿತಪಡಿಸಿದೆ. ಈ ಹಿಂದೆ 1983 ರ ನಂತರ ಇದೇ ಮೊದಲ ಬಾರಿಗೆ ಭಾರತದಲ್ಲಿ ಈ ಸಭೆ ಜರುಗಲಿದೆ. ಈ ಸಭೆಯು ಮಹಾರಾಷ್ಟ್ರದ ಮುಂಬೈನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜಿಯೊ ವರ್ಲ್ಡ್‌ ಕನ್ವೆನ್ಷನ್ ಸೆಂಟರ್‌'ನಲ್ಲಿ ಆಯೋಜಿಸಲಾಗುತ್ತಿದೆ. * ಇತ್ತೀಚಿಗೆ ಚೀನಾದ ಬೀಜಿಂಗ್ನಲ್ಲಿ ಜರುಗುತ್ತಿರುವ 139 ನೇ IOC ಅಧಿವೇಶನದ ವೇಳೆ ವಿಶ್ವದ ವಿವಿಧ ನಗರಗಳು 2023 ರ ಸಮ್ಮೇಳನಕ್ಕಾಗಿ ಬಿಡ್ ಸಲ್ಲಿಕೆ ಮಾಡಿದ್ದವು, ಈ ಬಿಡ್ ನಲ್ಲಿ ಮುಂಬೈಗೆ 76 ಮತಗಳ ಪೈಕಿ 75 ಮತಗಳು ಲಭಿಸಿವೆ, ಈ ಹಿನ್ನಲೆಯಿಂದಾಗಿ ಅಂತರರಾಷ್ಟ್ರೀಯ ಒಲಿಂಪಿಕ್ ಕಮಿಟಿಯ ಸಭೆಯು ಮುಂಬೈ ನಗರದಲ್ಲಿ ನಡೆಯಲಿದೆ ಎಂದಿದ್ದಾರೆ. * IOC ಸದಸ್ಯೆಯಾಗಿರುವ ನೀತಾ ಅಂಬಾನಿ, ಭಾರತ ಒಲಿಂಪಿಕ್‌ ಸಮಿತಿ ಅಧ್ಯಕ್ಷ ಡಾ. ನರಿಂದರ್‌ ಬಾತ್ರಾ, ಕ್ರೀಡಾ ಸಚಿವ ಅನುರಾಗ್ ಸಿಂಗ್‌ ಠಾಕೂರ್‌ ಮತ್ತು ಒಲಿಂಪಿಕ್‌ ಚಿನ್ನದ ಪದಕ ವಿಜೇತ ಶೂಟರ್ ಅಭಿನವ ಬಿಂದ್ರಾ ಅವರ ನಿಯೋಗವು ಸಭೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದಾರೆ. * ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ ಇದೊಂದು ಸ್ವಿಟ್ಜರ್ಲೆಂಡ್‌ನ ಲೌಸನ್ನೆ ಮೂಲದ ಸರ್ಕಾರೇತರ ಕ್ರೀಡಾ ಸಂಸ್ಥೆಯಾಗಿದೆ. ಈ ಸಂಸ್ಥೆಯನ್ನು ಸ್ವಿಸ್ ಸಿವಿಲ್ ಕೋಡ್'ನ ಅಡಿಯಲ್ಲಿ ಸಂಘದ ರೂಪದಲ್ಲಿ ರಚಿಸಲಾಗಿದೆ. ಇದನ್ನು ಪಿಯರೆ ಡಿ ಕೂಬರ್ಟಿನ್ ಮತ್ತು ಡೆಮೆಟ್ರಿಯೊಸ್ ವಿಕೆಲಾಸ್ ಅವರು ಈ ಹಿಂದೆ 1894 ರಲ್ಲಿ ಸ್ಥಾಪನೆ ಮಾಡಿದ್ದಾರೆ. ಈ ಸಂಸ್ಥೆಯು ಬೇಸಿಗೆ, ಚಳಿಗಾಲ ಹಾಗೂ ಯುವ ಒಲಿಂಪಿಕ್ ಕ್ರೀಡಾಕೂಟಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ಒಳಗೊಂಡಿದೆ. * IOC ಯು ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳ(NOC) ಆಡಳಿತ ಮಂಡಳಿಯಾಗಿದೆ. 2020 ರ ವೇಳೆಗೆ IOC ಯಿಂದ ಅಧಿಕೃತವಾಗಿ ಗುರುತಿಸಿರುವ 206 NOC ಗಳಿವೆ. * ಜರ್ಮನಿಯ ಥಾಮಸ್ ಬಾಚ್ ಅವರು ಪ್ರಸ್ತುತ IOC ಯ ಅಧ್ಯಕ್ಷರಾಗಿದ್ದಾರೆ.