Job Description: * ಪ್ರಸ್ತುತ ಭಾರತೀಯ ಮೂಲದ ಇಂಜಿನಿಯರ್‌ ಸಂಜಯ್‌ ರಾಮಭದ್ರನ್‌ ಅವರು ಅಮೇರಿಕದ ಟೆಕ್ಸಾಸ್‌ನ ಹೂಸ್ಟನ್‌ನ ಪ್ರಸಿದ್ಧ ಸಾರ್ವಜನಿಕ ಸಾರಿಗೆ ಸಂಸ್ಥೆಯಾಗಿರುವ ಹಾರಿಸ್‌ ಕೌಂಟಿ ಮೆಟ್ರೊಪೊಲಿಟನ್‌ ಟ್ರಾನ್ಸಿಸ್ಟ್‌ ಅಥಾರಿಟಿಗೆ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. * ಸಂಜಯ್‌ ರಾಮಭದ್ರನ್‌ ಅವರು ಟೆಕ್ಸಾಸ್‌ನಲ್ಲಿ ಸಾರಿಗೆ ಸಂಸ್ಥೆಗೆ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಭಾರತೀಯರಾಗಿದ್ದಾರೆ. * ಪ್ರಸ್ತುತ ಸಂಜಯ್‌ ಅವರು ರಾಜಸ್ಥಾನದ ಬಿರ್ಲಾ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಹಾಗೂ ಸೈನ್ಸ್‌ನಲ್ಲಿ ಇಂಜಿನಿಯರಿಂಗ್‌ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ತಮ್ಮ ಮುಂದಿನ ಶಿಕ್ಷಣವನ್ನು ಟೆಕ್ಸಾಸ್‌ನ ಎ & ಎಂ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದಾರೆ. ಇವರು ಈ ಹಿಂದೆ 2015 ರಿಂದ ಮೆಟ್ರೋ ಬೋರ್ಡ್‌ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಬಂಡವಾಳ ಹಾಗೂ ಕಾರ್ಯತಂತ್ರ ಯೋಜನಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. * ಟೆಕ್ಸಾಸ್ ಡಿಪಾರ್ಟ್‌ಮೆಂಟ್ ಆಫ್ ಟ್ರಾನ್ಸ್‌ಪೋರ್ಟೇಶನ್ ಇದೊಂದು ಅಮೇರಿಕದ ಟೆಕ್ಸಾಸ್ ರಾಜ್ಯದ ಸರ್ಕಾರಿ ಸಂಸ್ಥೆಯಾಗಿದೆ. ಪ್ರಸ್ತುತ ಈ ಏಜೆನ್ಸಿಯ ಸಾರ್ವಜನಿಕ ಮುಖವು ಸಾಮಾನ್ಯವಾಗಿ ರಾಜ್ಯದ ಅಧಿಕ ರಾಜ್ಯ ಹೆದ್ದಾರಿ ವ್ಯವಸ್ಥೆಯ ನಿರ್ಮಾಣ ಹಾಗೂ ನಿರ್ವಹಣೆಯ ಸಂಬಂಧ ಹೊಂದಿದೆ, ಈ ಏಜೆನ್ಸಿಯು ರಾಜ್ಯದಲ್ಲಿ ವಾಯುಯಾನ, ರೈಲು, ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ನೋಡಿಕೊಳ್ಳುವ ಜವಾಬ್ದಾರಿಯ ಹೊಣೆಯನ್ನು ಹೊತ್ತಿದೆ. * ಪ್ರಸ್ತುತ ಟೆಕ್ಸಾಸ್ ಡಿಪಾರ್ಟ್‌ಮೆಂಟ್ ಆಫ್ ಟ್ರಾನ್ಸ್‌ಪೋರ್ಟೇಶನ್ ಈ ಹಿಂದೆ ವಾಹನ ನೋಂದಣಿಯನ್ನು ಸಹ ನೋಡಿಕೊಳ್ಳುತಿತ್ತು, ನಂತರ ಆ ಕಾರ್ಯವನ್ನು ಟೆಕ್ಸಾಸ್ ಮೋಟಾರು ವಾಹನಗಳ ಇಲಾಖೆಗೆ ವರ್ಗಾವಣೆ ಮಾಡಲಾಯಿತು. ಈ ಸಂಸ್ಥೆಯು ತನ್ನ ಕಾರ್ಯಾಚರಣೆಯನ್ನು 2009 ರ ನವೆಂಬರ್'ನಲ್ಲಿ ಆರಂಭಿಸಿದೆ.