Job Description: * ಇತ್ತೀಚಿಗೆ ಹರಿಯಾಣ ರಾಜ್ಯದ ಗುರುಗ್ರಾಮದ ಸಹೋದರಿಯರು ಕೇಂದ್ರ ಸರ್ಕಾರದ 'ಬೇಟಿ ಬಚಾವೋ, ಬೇಟಿ ಪಢಾವೋ' ಯೋಜನೆಯ ಬ್ರ್ಯಾಂಡ್‌ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಅಂತಾರಾಷ್ಟ್ರೀಯ ಚೆಸ್‌ ಆಟಗಾರ್ತಿ ತನಿಷ್ಕಾ ಕೋಟಿಯಾ ಹಾಗೂ ಅವರ ಸಹೋದರಿ ರಿಧಿಕಾ ಕೋಟಿಯಾ ಅವರನ್ನು ಈ ಯೋಜನೆಯ ಬ್ರ್ಯಾಂಡ್‌ ರಾಯಭಾರಿಯಾಗಿದ್ದಾರೆ ಎಂದು ಘೋಷಣೆ ಮಾಡಲಾಗಿದೆ. * ತನಿಷ್ಕಾ ಅವರು ಹರಿಯಾಣ ರಾಜ್ಯದ ಗುರುಗ್ರಾಮದ ಎಸ್‌ಆರ್‌ಸಿಸಿ ವಿದ್ಯಾರ್ಥಿನಿ, ಹಾಗೂ ಅವರ ತಂಗಿ ತಂಗಿ ರಿಧಿಕಾ ಕೋಟಿಯಾ ಅವರು ಸನ್‌ಸಿಟಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. * ಪ್ರಸ್ತುತ ತನಿಷ್ಕಾ ಕೋಟಿಯಾ ಅವರು ವರ್ಲ್ಡ್ ಜ್ಯೂನಿಯರ್‌ ಚೆಸ್‌ ಚಾಂಪಿಯನ್‌ಶಿಪ್‌ ಹಾಗೂ ಅನೇಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದಾರೆ. ಇತ್ತೀಚಿಗೆ ರಿಧಿಕಾ ಅವರು ವಿಶ್ವ ಯುವ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿರುವ ಗುರುಗ್ರಾಮದ ಏಕೈಕ ಬಾಲಕಿ ಇವರಾಗಿದ್ದಾರೆ. ಈ ಸಹೋದರಿಯರು ಕೇಂದ್ರ ಸರ್ಕಾರದ ಯೋಜನೆಯ ರಾಯಭಾರಿಯಾಗಿರುವ ಮಾಹಿತಿಯನ್ನು ಇವರ ತಂದೆ ಅಜಿತ್‌ ಕೋಟಿಯಾ ಅವರು ತಿಳಿಸಿದ್ದಾರೆ. * ಪ್ರಸ್ತುತ ಕೇಂದ್ರ ಸರ್ಕಾರದ ಯೋಜನೆ ಯಾಗಿರುವ ಬೇಟಿ ಬಚಾವೋ, ಬೇಟಿ ಪಢಾವೋ (ಹೆಣ್ಣು ಮಗುವನ್ನು ಉಳಿಸಿ, ಹೆಣ್ಣು ಮಗುವಿಗೆ ಶಿಕ್ಷಣ ನೀಡಿ) ಎನ್ನುವದು ಭಾರತ ಸರ್ಕಾರದ ಅಭಿಯಾನವಾಗಿದೆ, ಇದೀಗ ಭಾರತದಲ್ಲಿ ಹೆಣ್ಣುಮಕ್ಕಳಿಗಾಗಿ ಉದ್ದೇಶಿಸಲಾಗಿರುವ ಕಲ್ಯಾಣ ಸೇವೆಗಳ ಜಾಗೃತಿ ಹಾಗೂ ದಕ್ಷತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ತರಲಾಗಿದೆ. * ಕೇಂದ್ರ ಸರ್ಕಾರವು ಈ ಯೋಜನೆಯನ್ನು 2015 ರಲ್ಲಿ ಹರಿಯಾಣದ ಪಾಣಿಪತ್‌ನಲ್ಲಿ ಸುಮಾರು 100 ಕೋಟಿ ರೂ. ಆರಂಭಿಕ ನಿಧಿಯೊಂದಿಗೆ ಆರಂಭಿಸಿದೆ. ಈ ಅಭಿಯಾನವನ್ನು ಮುಖ್ಯವಾಗಿ ಉತ್ತರ ಪ್ರದೇಶ, ಹರಿಯಾಣ, ಉತ್ತರಾಖಂಡ, ಪಂಜಾಬ್, ಬಿಹಾರ ಹಾಗೂ ದೆಹಲಿಯಲ್ಲಿ ಆರಂಭಿಸಲಾಗಿದೆ. * ದೇಶಾದ್ಯಂತ ಬೇಟಿ ಬಚಾವೋ ಬೇಟಿ ಪಢಾವೋ ಅಭಿಯಾನವನ್ನು ಪ್ರಚಾರ ಮಾಡಲು ಭಾರತ ಸರ್ಕಾರವು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು 2015 ರ ಜನವರಿಯಿಂದ ರಚಿಸಿದೆ. ಈ ಸಮಿತಿಯು 'ಹೆಣ್ಣು ಮಗುವನ್ನು ಉಳಿಸಿ' ಹಾಗೂ 'ಹೆಣ್ಣು ಮಗುವಿಗೆ ಶಿಕ್ಷಣ ನೀಡಿ' ಅಭಿಯಾನವನ್ನು ಉತ್ತೇಜಿಸಲು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. * ಡಾ. ರಾಜೇಂದ್ರ ಫಡ್ಕೆ ಅವರು 'ಬೇಟಿ ಬಚಾವೋ ಬೇಟಿ ಪಢಾವೋ' ಅಭಿಯಾನದ ರಾಷ್ಟ್ರೀಯ ಸಂಚಾಲಕರಾಗಿದ್ದಾರೆ. ಈ ಬೇಟಿ ಬಚಾವೋ ಅಭಿಯಾನವನ್ನು ಭಾರತೀಯ ವೈದ್ಯಕೀಯ ಸಂಘವು ಕೂಡ ಇದಕ್ಕೆ ಬೆಂಬಲ ನೀಡಿದೆ.