Job Description: * ಪ್ರಸ್ತುತ ಒಬ್ಬಂಟಿಯಾಗಿ ಪ್ರಯಾಣ ಬೆಳೆಸುವ ಮಹಿಳೆಯರಿಗೆ ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಸೌದಿ ಅರೇಬಿಯಾದ ನಗರ ಮದೀನಾ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಮಾಹಿತಿಯು ಇತ್ತೀಚಿಗೆ ಯುರೋಪ್‌ ಮೂಲದ ಸಂಸ್ಥೆಯು ನಡೆಸಿರುವ ಸಮೀಕ್ಷೆಯಲ್ಲಿ ವರದಿಯಾಗಿದೆ. * ಈ ಸಮೀಕ್ಷೆಯನ್ನು UK ಮೂಲದ ಇನ್ಸುರೆ ಮೈ ಟ್ರಿಪ್(InsureMyTrip) ಎಂಬ ಟ್ರಾವೆಲ್‌ ಇನ್ಸುರೆನ್ಸ್‌ ಕಂಪೆನಿಯು ನಡೆಸಿದೆ. ಪ್ರಸ್ತುತ ಸೌದಿ ಅರೇಬಿಯಾದ ಮದೀನಾ ನಗರವು ಒಂಟಿ ಮಹಿಳೆಯರ ಪ್ರಯಾಣಕ್ಕೆ ಸಂಬಂಧಪಟ್ಟಿರುವ ಹಲವಾರು ಮಾನದಂಡಗಳಲ್ಲಿ 10/10 ಅಂಕಗಳನ್ನೂ ಪಡೆದುಕೊಂಡು ಮೊದಲ ಸ್ಥಾನದಲ್ಲಿದೆ. ಸರಾಸರಿ 84 ಪ್ರತಿಶತದಷ್ಟು ಒಂಟಿ ಪ್ರಯಾಣಿಕ ಮಹಿಳೆಯರ ಅಗತ್ಯಗಳನ್ನು ಪೂರೈಸಲು ಮತ್ತು ಅವರಿಗೆ ಸುರಕ್ಷಿತ ಸ್ಥಳಗಳನ್ನು ಕಂಡುಹಿಡಿಯಲು InsureMyTrip ಸೈಟ್'ನ ಮೂಲಕ ಅಧ್ಯಯನವನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ಮದೀನಾ ನಗರವು ರಾತ್ರಿ ವೇಳೆಯಲ್ಲಿ ಏಕಾಂಗಿಯಾಗಿ ಪ್ರಯಾಣ ಬೆಳೆಸಲು ಸುರಕ್ಷಿತ ಭಾವನೆಯ ನೀಡುವ ನಿಟ್ಟಿನಲ್ಲಿ ಅತೀ ಹೆಚ್ಚು ಅಂಕಗಳನ್ನೂ ಪಡೆದುಕೊಂಡಿದೆ. * ಈ ಇನ್ಸುರೆ ಮೈ ಟ್ರಿಪ್ ಕಂಪನಿ ನಡೆಸಿರುವ ಅಧ್ಯಯನದ ಪ್ರಕಾರ, ಥೈಲ್ಯಾಂಡ್‌ನ ಚಿಯಾಂಗ್ ಮಾಯ್ ನಗರವು ಒಟ್ಟು 9.06/10 ಅಂಕಗಳನ್ನೂ ಪಡೆದು 2 ನೇ ಸುರಕ್ಷಿತ ನಗರವಾಗಿ ಹೊರ ಹೊಮ್ಮಿದೆ. ಇದರ ಜೊತೆಗೆ ದುಬೈ ನಗರವು 9.43/10 ಅಂಕಗಳನ್ನೂ ಪಡೆದುಕೊಂಡು 3 ನೇ ಸ್ಥಾನವನ್ನು ಪಡೆದುಕೊಂಡಿದೆ. * * ಒಂಟಿ ಮಹಿಳಾ ಪ್ರಯಾಣಿಕರಿಗೆ ಅತ್ಯಂತ ಕಡಿಮೆ ಸುರಕ್ಷಿತವಾಗಿರುವ ನಗರಗಳು : ಜೋಹಾನ್ಸ್‌ಬರ್ಗ್, ಕೌಲಾಲಂಪುರ್ ಹಾಗೂ ಭಾರತದ ರಾಜಧಾನಿ ದೆಹಲಿ ಈ ಪಟ್ಟಿಯಲ್ಲಿ 59 ನೇ ಸ್ಥಾನವನ್ನು ಪಡೆದುಕೊಂಡು ಕಳಪೆಯಾಗಿದೆ. * ಅತ್ಯಂತ ಸೆಕ್ಯುಲರ್‌ ದೇಶವಾದ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ 10 ಕ್ಕೆ ಕೇವಲ 3.78 ಅಂಕ ಪಡೆದುಕೊಂಡು ಕಡಿಮೆ ಸುರಕ್ಷಿತ ನಗರವಾಗಿದೆ. * ಪ್ರಸ್ತುತ ಈ ಇನ್ಸುರೆ ಮೈ ಟ್ರಿಪ್ ( InsureMyTrip) ಕಂಪನಿಯನ್ನು ಈ ಹಿಂದೆ 2000 ರಲ್ಲಿ ಸ್ಥಾಪನೆ ಮಾಡಲಾಗಿದೆ. ಜಿಮ್ ಗ್ರೇಸ್ ಅವರು ಈ ಕಂಪನಿಯ ಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ. ಇದೊಂದು ಪ್ರಪಂಚದ ಮೊದಲ ಪ್ರಮುಖ ಪ್ರಯಾಣ ವಿಮೆ ಹೋಲಿಕೆ ವೆಬ್‌ಸೈಟ್ ಆಗಿದೆ.