Job Description: * ಇತ್ತೀಚಿಗೆ IAS ಅಧಿಕಾರಿ ವಿನೀತ್ ಜೋಶಿ ಅವರನ್ನು ಶಿಕ್ಷಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಚಿವಾಲಯ ವರದಿ ಮಾಡಿದೆ. * ಈ ಮೊದಲು ಮನೋಜ್ ಅಹುಜಾ ಅವರು ಶಿಕ್ಷಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಇವರನ್ನು ಕೃಷಿ ಹಾಗೂ ರೈತರ ಕಲ್ಯಾಣ ಇಲಾಖೆಯಲ್ಲಿ ಒಎಸ್‌ಡಿಯಾಗಿ ನೇಮಿಸಲಾಗಿದೆ. ಇದೀಗ ಅವರ ಸ್ಥಾನಕ್ಕೆ 'ವಿನೀತ್ ಜೋಶಿ' ಅವರನ್ನು ನೇಮಕ ಮಾಡಲಾಗಿದೆ. * ವಿನೀತ್ ಜೋಶಿ ಅವರು1992'ನೇ ಬ್ಯಾಚ್‌'ನ IAS ಅಧಿಕಾರಿಯಾಗಿದ್ದಾರೆ. ಪ್ರಸ್ತುತ ಇವರು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ (NTA) ಡೈರೆಕ್ಟರ್ ಜನರಲ್ ಆಗಿದ್ದರು, ಉನ್ನತ ಶಿಕ್ಷಣದ ಹಾಗೂ ವರ್ಟಿಕಲ್‌ಗಳಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್, ಹಾಗೂ ಹೈಯರ್ ಎಜುಕೇಶನ್ ಫಂಡಿಂಗ್ ಏಜೆನ್ಸಿ (HEFA) ಯನ್ನು ಮೇಲ್ವಿಚಾರಣೆ ಮಾಡುತಿದ್ದರು, ಹಾಗೂ ಮಣಿಪುರ ಸರ್ಕಾರದ ರೆಸಿಡೆಂಟ್ ಕಮಿಷನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. * ವಿನೀತ್ ಜೋಶಿ ಅವರು ವೃತ್ತಿ ಜೀವನ ಇವರು IIT ಕಾನ್ಪುರದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪಡೆದಿದ್ದಾರೆ, ಹಾಗೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್‌ನಿಂದ ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಸಹ ಪಡೆದುಕೊಂಡಿದ್ದಾರೆ. ಇವರು ಈ ಹಿಂದೆ ಇವರು 1992 ರ ಬ್ಯಾಚ್ ನ ಅಧಿಕಾರಿಯಾಗಿ ಮಣಿಪುರ ಕೇಡರ್ ಗೆ ಸೇರಿಕೊಂಡಿದ್ದಾರೆ, ಹಾಗೂ ಆ ಸಮಯದಲ್ಲಿ ಮಣಿಪುರದಲ್ಲಿ ಯುವ ವ್ಯವಹಾರಗಳು ಮತ್ತು ಕ್ರೀಡಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿದ್ದಾರೆ. ಮತ್ತೇ 1999 ರಲ್ಲಿ ಜೋಶಿ ಅವರು ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯದ ಖಾಸಗಿ ಕಾರ್ಯದರ್ಶಿಯಾಗಿ ಸೇರ್ಪಡೆಗೊಂಡಿದ್ದರು. ಮತ್ತೇ ಇವರು ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯದಲ್ಲಿ 2000 ರಿಂದ 2001 ರವರೆಗೆ ಖಾಸಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. * ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE ) ಇದೊಂದು ಸಾರ್ವಜನಿಕ ಹಾಗೂ ಖಾಸಗಿ ಶಾಲೆಗಳಿಗೆ ಭಾರತದಲ್ಲಿನ ರಾಷ್ಟ್ರೀಯ ಮಟ್ಟದ ಶಿಕ್ಷಣ ಮಂಡಳಿಯಾಗಿದೆ, ಈ ಮಂಡಳಿಯನ್ನು ಕೇಂದ್ರ ಸರ್ಕಾರವು ನಿಯಂತ್ರಣದಲ್ಲಿದೆ. ಪ್ರಸ್ತುತ ಭಾರತದಲ್ಲಿ ಅಂದಾಜು 20,299 ಶಾಲೆಗಳು ಹಾಗೂ 28 ವಿದೇಶಗಳಲ್ಲಿ 220 ಶಾಲೆಗಳು CBSE ಗೆ ಸಂಯೋಜಿಸಲ್ಪಟ್ಟಿವೆ.