Job Description: * ಪ್ರಸ್ತುತ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಶಿಯಲ್ಲಿ ನಡೆಯುವ ಗಂಗಾ ಆರತಿಯ ರೀತಿಯಲ್ಲಿ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿನ ತುಂಗಾನದಿಯ ದಂಡೆಯಲ್ಲಿ ತುಂಗಾ ಆರತಿ ಮಾಡಲು ನಿರ್ಮಾಣ ಮಾಡಲಾಗುತ್ತಿರುವ ಭವ್ಯ ಮಂಟಪಕ್ಕೆ ಶಂಕುಸ್ಥಾಪನೆಯನ್ನು ಮಾಡಿದ್ದಾರೆ. * ಇದೀಗ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿನ ತುಂಗಾ ಆರತಿ ಮಂಟಪ ನಿರ್ಮಾಣಕ್ಕಾಗಿ 30 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಕಾರಣದಿಂದಾಗಿ ಈ ಪ್ರದೇಶವು ಪ್ರವಾಸಿ ಹಾಗೂ ಆಧ್ಯಾತ್ಮಿಕ ಕ್ಷೇತ್ರವಾಗಿಲಿದೆ ಎಂದಿದ್ದಾರೆ. ಜೊತೆಗೆ ಹರಿಹರ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. * ವಾರಣಾಸಿಯು ಪವಿತ್ರ ಗಂಗಾ ನದಿಯ ದಡದಲ್ಲಿರುವ ವಿಶ್ವದ ಅತ್ಯಂತ ಹಳೆಯ ನಗರವಾಗಿದೆ. ಆ ಪ್ರದೇಶದಲ್ಲಿ ಪ್ರತಿದಿನ ಸಂಜೆ ದಶಾಶ್ವಮೇಧ ಘಾಟ್‌ನಲ್ಲಿ ಪುರೋಹಿತರ ಗುಂಪಿನಿಂದ ಗಂಗಾ ಆರತಿ ಮೂಲಕ ಅಗ್ನಿ ಪೂಜೆಯನ್ನು ನಡೆಸಲಾಗುತ್ತದೆ. ಹಲವಾರು ಧಾರ್ಮಿಕ ಹಬ್ಬಗಳು ಹಾಗು ವಾರದ 2 ನೇ ದಿನ ಮಂಗಳವಾರದಂದು ಈ ಘಾಟ್‌ನಲ್ಲಿ ಆರತಿಯನ್ನು ಮಾಡಲಾಗುತ್ತದೆ. ಈ ಗಂಗಾ ಆರತಿಯು ವಾರಣಾಸಿಯಲ್ಲಿ ಸಂಜೆಯ ಸಮಯದಲ್ಲಿ ಜರುಗುವ ಕಾರ್ಯಕ್ರಮವಾಗಿದೆ, ಈ ಸಂಜೆಯ ಅವಧಿಯ ಆಚರಣೆಯು ವಿಶೇಷವಾಗಿಸುತ್ತದೆ ಹಾಗೂ ಆಧ್ಯಾತ್ಮಿಕ ಚಿಂತನೆಗಳಿಂದ ತುಂಬಿರುತ್ತದೆ. * ಗಂಗಾ ಆರತಿಯ ವಾರಣಾಸಿಯ ದಶಾಶ್ವಮೇಧ ಘಾಟ್‌ನಲ್ಲಿ ಸರಿ ಸುಮಾರು 45 ನಿಮಿಷಗಳ ಕಾಲ ಅಂದರೆ ಸೂರ್ಯಾಸ್ತದ ನಂತರ ಗಂಗಾ ಆರತಿ ನಡೆಯುತ್ತದೆ. ಹಾಗೂ ಅಲ್ಲಿನ ಯುವ ಪುರೋಹಿತರ ಗುಂಪು ಕೈಯಲ್ಲಿ ದೀಪವನ್ನು ಹಿಡಿದುಕೊಂಡು ಆ ದೀಪವನ್ನು ಬೆಳಗಿಸುವ ಮೂಲಕ ಆರತಿಯನ್ನು ಆರಂಭಿಸುತ್ತಾರೆ, ಹಾಗೂ ಮಂತ್ರಗಳ ಲಯಬದ್ಧ ಪಠಣವನ್ನು ಆರಂಭಿಸಲಾಗುತ್ತದೆ. * ತುಂಗಾ ನದಿಯು ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿರುವ ಒಂದು ನದಿಯಾಗಿದೆ. ಈ ನದಿಯು ಪಶ್ಚಿಮ ಘಟ್ಟಗಳಲ್ಲಿಉಘಮವಾಗಿದೆ. ಈ ನದಿಯು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆ ಮೂಲಕ ಹರಿಯುತ್ತದೆ. ಪ್ರಸ್ತುತ ಈ ನದಿಯು 147 ಕಿಮೀ ಉದ್ದವಿದೆ, ಈ ತುಂಗಾ ನದಿಯು ಶಿವಮೊಗ್ಗ ಜಿಲ್ಲೆಯ ಕೂಡ್ಲಿ ಎಂಬ ಸಣ್ಣ ಪಟ್ಟಣದಲ್ಲಿ ಭದ್ರಾ ನದಿಯೊಂದಿಗೆ ಸೇರಿಕೊಳ್ಳುತ್ತದೆ. ಈ ಹಿನ್ನಲೆಯಿಂದಾಗಿ ಈ ನದಿಗೆ ತುಂಗಭದ್ರಾ ಎಂಬ ಹೆಸರನ್ನು ನೀಡಲಾಗಿದೆ. * ಪ್ರಸ್ತುತ ಈ ತುಂಗಭದ್ರಾ ನದಿಯು ನೀರು ಪ್ರಪಂಚದಲ್ಲೇ ಅತ್ಯಂತ ಸಿಹಿಯಾದ ನೀರು ಎಂದು ಪರಿಗಣಿಸಲಾಗಿದೆ. ಈ ಕಾರಣದಿಂದ 'ಗಂಗಾ ಸ್ನಾನ' 'ತುಂಗಾ ಪಾನ' ಎಂದು ಹೇಳಲಾಗುತ್ತದೆ. ಈ ತುಂಗಾ ನದಿಗೆ ಗಾಜನೂರಿನಲ್ಲಿ ಅಣೆಕಟ್ಟನ್ನು ಕಟ್ಟಲಾಗಿದೆ ಹಾಗೂ ಹೊಸಪೇಟೆಯಲ್ಲಿ ತುಂಗಭದ್ರಾ ನದಿಗೆ ಅಣೆಕಟ್ಟನ್ನು ಕಟ್ಟಲಾಗಿದೆ.