Job Description: * ಪ್ರಸ್ತುತ ದೇಶದ ರೈಲ್ವೇ ವಲಯದಲ್ಲಿಯೇ ಅತೀ ಉದ್ದದ ಸುರಂಗ ಮಾರ್ಗದ ಕಾರ್ಯವು ಒಂದು ಹಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ರೈಲ್ವೆ ಸುರಂಗವು ಉಧಂಪುರ- ಶ್ರೀನಗರ- ಬಾರಾಮುಲ್ಲಾ ರೈಲು ಮಾರ್ಗದ ಭಾಗವಾಗಿದೆ ಇದೀಗ ಈ ಟನೆಲ್‌ ಸುಂಬರ್‌ ಹಾಗೂ ಅರ್ಪಿಂಚಲ ಮಧ್ಯೆ ಹಳಿ ಹಾಕಲು ನೆರವಾಗಲಿದೆ. * ಪ್ರಸ್ತುತ ಉಧಂಪುರ್-ಶ್ರೀನಗರ-ಬಾರಾಮುಲ್ಲಾ ರೈಲ್ ಲಿಂಕ್ ಯೋಜನೆಯಡಿ ಕತ್ರಾ-ಬನಿಹಾಲ್ ವಿಭಾಗದಲ್ಲಿ ಸುಂಬರ್ ಹಾಗೂ ಅರ್ಪಿಂಚಲಾ ನಿಲ್ದಾಣದ ನಡುವೆ 12.758 ಕಿ.ಮೀ. ಉದ್ದದ ಸುರಂಗದ ಕಾಮಗಾರಿಯನ್ನು ರೈಲ್ವೇ ಯಶಸ್ವಿಯಾಗಿ ಪೂರ್ಣಗೊಳಿಸಿದೆ. * ಪೀರ್‌ ಪಂಜಾಲ್‌ ಟನೆಲ್‌ 11.2 ಕಿ.ಮೀ. ದೂರದ ಮಾರ್ಗವಾಗಿದೆ ಇದು 2ನೇ ಅತೀ ದೊಡ್ಡ ಸುರಂಗ ಮಾರ್ಗವಾಗಿದೆ ಎಂದು ಉತ್ತರ ರೈಲ್ವೇ ವಲಯ ಮಾಹಿತಿಯನ್ನು ನೀಡಿದೆ. * ಸುರಂಗದ ವಿಶೇಷತೆಗಳು: – ಪ್ರಧಾನವಾಗಿ ರೈಲು ಸಂಚರಿಸಲು ಸಿದ್ಧಗೊಂಡಿರುವ ಟನೆಲ್‌ ಆಗಿದೆ – 2 ನೇ ಯದ್ದದ ತುರ್ತು ಪರಿಸ್ಥಿತಿಯಲ್ಲಿ ಸಂಚರಿಸಲು ಲಭ್ಯವಿರಬೇಕಾದ ವ್ಯವಸ್ಥೆಯಾಗಿದೆ. – ಈ ಸುರಂಗದಲ್ಲಿ ಪ್ರತೀ 375 ಮೀ.ಗೆ ರಕ್ಷಣೆ, ಪರಿಹಾರ ಕಾರ್ಯಾಚರಣೆಗೆ ಸಹಾಯವಾಗುವಂತೆ ಕ್ರಮವನ್ನು ಕೈಗೊಳ್ಳಲಾಗಿದೆ. – ಪ್ರಸ್ತುತ ಈ ಸುರಂಗದ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿ ಮುಕ್ತಾಯಗೊಂಡ ನಂತರ ಪ್ರತಿ ಗಂಟೆಗೆ 100 ಕಿ.ಮೀ. ವೇಗದಲ್ಲಿ ರೈಲು ಚಲಿಸಲು ಅಭಿವೃದ್ಧಿಪಡಿಸಲಾಗುತ್ತಿದೆ. * ಇದೀಗ ಈ ಸುರಂಗ ಮಾರ್ಗದಲ್ಲಿ 'ನ್ಯೂ ಆಸ್ಟ್ರಿಯನ್‌ ಟನೆಲಿಂಗ್‌ ಮೆಥಡ್‌'ನ್ನು ಬಳಸಿಕೊಂಡು ಕಾಮಗಾರಿಯನ್ನು ಆರಂಭಿಸಲಾಗಿದೆ. ಈ ತಂತ್ರಜ್ಞಾನಸಲ್ಲಿ ಡ್ರಿಲ್ಲಿಂಗ್‌ (ಕೊರೆಯುವಿಕೆ),ಸ್ಫೋಟ (ಬ್ಲಾಸ್ಟಿಂಗ್‌) ಮುಖಾಂತರ ಕೆಲಸ ಮಾಡಲಾಗುತ್ತದೆ. ಈ ಸುರಂಗವನ್ನು ಕುದುರೆಯ ಲಾಳದಂತೆ ಕೊರೆಯಲಾಗಿದೆ. ಈ ಸುರಂಗ ಮಾರ್ಗದಲ್ಲಿ ಸೀಕ್ವೆನ್ಶಿಯಲ್‌ ಎಕ್ಸ್‌ಕವೇಷನ್‌ ಮೆಥಡ್‌ ಬಳಸಿಕೊಂಡು ಗೋಡೆಗಳನ್ನು ಬಲಿಷ್ಠವಾಗಿ ಕೊರೆಯಲಾಗಿದೆ. * ಪ್ರಸ್ತುತ ಉಧಂಪುರ- ಶ್ರೀನಗರ- ಬಾರಾಮುಲ್ಲಾ ರೈಲು ಮಾರ್ಗದ ಒಂದು ಭಾಗವು ಒಟ್ಟಾರೆ 272 ಕಿ.ಮೀ. ಉದ್ದವಾಗಿದೆ. ಈ ಯೋಜನೆಯ ಅಡಿಯಲ್ಲಿ 161 ಕಿ.ಮೀ. ದೂರದ ಮಾರ್ಗವು ಸಂಚಾರಕ್ಕೆ ಮುಕ್ತವಾಗಿದೆ. ಹಾಗೂ ಕಟ್ರಾದಿಂದ ಬನಿಹಾಲ್‌ ಮಧ್ಯದ 111 ಕಿ.ಮೀ. ದೂರದ ಮಾರ್ಗದ ಕಾಮಗಾರಿಯು ಅತ್ಯಂತ ಕಷ್ಟಕರ ಹಾಗೂ ಸವಾಲಿನದ್ದಾಗಿದೆ. ಕೇಂದ್ರ ಸರ್ಕಾರವು 2020ರಲ್ಲಿ ಈ ಮಾರ್ಗವನ್ನು ಕುಪ್ವಾರಾಕ್ಕೆ ವಿತರಣೆ ಮಾಡಲು ನಿರ್ಧಾರ ಕೈಗೊಂಡಿದೆ. * ಉತ್ತರ ರೈಲ್ವೆಯ ಈ ಸುರಂಗ ಮಾರ್ಗ ನಿರ್ಮಾಣದ ಹಂತದಲ್ಲಿ ಸ್ಥಳೀಯ ಜನರನ್ನು ಅನೇಕ ಕೆಲಸಗಳಿಗಾಗಿ ಬಲಿಸಿಕೊಂಡಿದೆ. ಈ ಸುರಂಗ T-49 ನ ದಕ್ಷಿಣ ಪೋರ್ಟಲ್ 1,200 ಮೀ. ಎತ್ತರದಲ್ಲಿ ಜಿಲ್ಲಾ ಕೇಂದ್ರವಾದ ರಾಂಬನ್‌ನಿಂದ 45 ಕಿ.ಮೀ. ದೂರದಲ್ಲಿನ ಸುಂದರವಾದ ಸುಂಬರ್ ಹಳ್ಳಿಯಲ್ಲಿದೆ, ಹಾಗೂ ಉತ್ತರ ಪೋರ್ಟಲ್ 1,600 ಮೀ. ಎತ್ತರದಲ್ಲಿ ಖಾರಿ ತೆಹಸಿಲ್‌ನ ಅರ್ಪಿಂಚಲಾ ಗ್ರಾಮದ ಬಳಿ ಇದೆ ಎಂದು ರೈಲ್ವೆ ತಿಳಿಸಿದೆ. * ಪ್ರಸ್ತುತ ರೈಲ್ವೆ ಉದ್ಯಮವು 100 ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳನ್ನು ಪಡೆಯಲು ತಯಾರಾಗಿದೆ, ಅವುಗಳನ್ನು ಮುಂದಿನ '3' ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾತ್ತದೆ ಎಂದು ತಿಳಿಸಿದ್ದಾರೆ.