Job Description: * ಪ್ರಸ್ತುತ 6 ನೇ ತರಗತಿ ಓದುತ್ತಿರುವ ಎಂ.ಆರ್.ನವಜಿತ್, ಈತ ಹಿಮ್ಮುಖ ಬರವಣಿಗೆಯನ್ನು ಅಭ್ಯಾಸ ಮಾಡಿಕೊಂಡು ಇದೀಗ ಎಲ್ಲಾ ಹೆಸರುಗಳನ್ನು ಹಿಮ್ಮುಖದಲ್ಲಿ ಬರೆದು ವಿಶೇಷ ಸಾಧನೆ ಮಾಡಿದ್ದಾನೆ. ಸದ್ಯ ತಮಿಳುನಾಡು ರಾಜ್ಯದ ಎಲ್ಲಾ 38 ಜಿಲ್ಲೆಗಳ ಹೆಸರನ್ನು ಹಿಮ್ಮುಖ ಬರವಣಿಗೆಯಲ್ಲಿ ಕೇವಲ 7 ನಿಮಿಷ, 7 ಸೆಕೆಂಡುಗಳು ಮತ್ತು 4 ಮಿಲಿಸೆಕೆಂಡ್‌ಗಳಲ್ಲಿ ಬರೆದಿದ್ದಾನೆ. * ಎಂ.ಆರ್.ನವಜಿತ್ ನ ಸಾಧನೆಯು ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಗೆ ಸೇರ್ಪಡೆಯಾಗಿದೆ. ಇದೀಗ ತಮಿಳುನಾಡು ರಾಜ್ಯದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಈತನಿಗೆ ಗೌರವವನ್ನು ಸಲ್ಲಿಸಿದ್ದಾರೆ. * ಪ್ರಸ್ತುತ ನವಜಿತ್ ತಮಿಳುನಾಡು ರಾಜ್ಯದ ಎಲ್ಲಾ ಜಿಲ್ಲೆಗಳ ಹೆಸರನ್ನು ಹಿಮ್ಮುಖ ಬರೆಯುವ ಮೂಲಕ "ಗ್ರ್ಯಾಂಡ್ ಮಾಸ್ಟರ್" ಎಂಬ ಬಿರುದು ಪಡೆದುಕೊಂಡಿದ್ದಾನೆ. ಈಗಾಗಲೇ ಈತನ ಹೆಸರು ಈತ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್- ಗ್ರ್ಯಾಂಡ್ ಮಾಸ್ಟರ್ ಆಗಿ ಪ್ರಮಾಣೀಕರಣವಾಗಿದೆ, ಇದೀಗ ಈತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿದ್ದಾನೆ.