Job Description: * ಪ್ರಸ್ತುತ ನೀತಿ ಆಯೋಗವು ಫೋನ್ ಪೇ ಸಹಯೋಗದೊಂದಿಗೆ ಫಿನ್ ಟೆಕ್ (Fintech) ಉದ್ಯಮದ ಪ್ರಾಮುಖ್ಯತೆಯನ್ನು ಪ್ರದರ್ಶಿಸುವಲ್ಲಿ ಮೊದಲ ಬಾರಿಗೆ ಹ್ಯಾಕಥಾನ್'ನ್ನು ಆಯೋಜಿಸುತ್ತಿದೆ. ಈ ಹ್ಯಾಕಥಾನ್ ಫಿನ್‌ ಟೆಕ್ ಪರಿಸರ ವ್ಯವಸ್ಥೆಗೆ ಪರಿಹಾರಗಳನ್ನು ಒದಗಿಸುವ ಗುರಿ ಹೊಂದಿದೆ. ಈ ಈವೆಂಟ್‌ಗೆ ಅಂತಿಮ ಎಂಟ್ರಿ ಸಲ್ಲಿಸಲು ಇದೇ ಫೆಬ್ರವರಿ. 25 ರಂದು ಕೊನೆಯ ದಿನಾಂಕ ಎಂದು ತಿಳಿಸಿದೆ, ಹಾಗೂ ಈ ಹ್ಯಾಕಥಾನ್‌ನ ವಿಜೇತರನ್ನು ಫೆಬ್ರವರಿ 28 ರಂದು ಘೋಷಣೆ ಮಾಡಲಾಗುತ್ತದೆ. * ಈ ಹ್ಯಾಕಥಾನ್ ಆಯೋಜನೆಯಲ್ಲಿ ಪಾಲ್ಗೊಳ್ಳುವವರು ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು 2022 ರ ಫೆಬ್ರವರಿ 21 ರಂದು ಸಾಯಂಕಾಲ 4 ಗಂಟೆಗೆ ಲೈವ್ AMA ಇರಲಿದೆ ಎಂದು ತಿಳಿಸಲಾಗಿದೆ. ಈ ಹ್ಯಾಕಥಾನ್ ಆಯೋಜನೆಯಲ್ಲಿ ವಿಜೇತವಾದ ತಂಡಗಳಿಗೆ 5 ಲಕ್ಷ ರೂ. ಬಹುಮಾನ ಒದಗಿಸಲಾಗುವದು. * ಅಗ್ರ 5 ವಿಜೇತರಿಗೆ ಈ ರೀತಿ ನಗದು ಬಹುಮಾನ ಒದಗಿಸಲಾಗುತ್ತದೆ. - 1 ನೇ ಸ್ಥಾನ: ತಂಡಕ್ಕೆ 1,50,000 ರೂ.- 1 ಬಹುಮಾನ - 2 ನೇ ಸ್ಥಾನ: ತಂಡಕ್ಕೆ 1,00,000 ರೂ.- 2 ಬಹುಮಾನಗಳು - 3 ನೇ ಸ್ಥಾನ: ತಂಡಕ್ಕೆ 75,000 ರೂ.- 2 ಬಹುಮಾನಗಳು * ಹ್ಯಾಕಥಾನ್‌ ನಲ್ಲಿ ಪಾಲ್ಗೊಳ್ಳುವವರು ಫೋನ್‌ ಪೇ ಪಲ್ಸ್‌ ರೀತಿಯ ಯಾವುದೇ ಓಪನ್-ಡೇಟಾ API ಜೊತೆಗಿನ ಈ ಕೆಳಗಿನ ಬಳಕೆಯ ಸಂದರ್ಭಗಳಿಗೆ ಆಧಾರವಾಗಿ ಬಳಕೆ ಮಾಡಲಾಗುತ್ತದೆ. ಹಣಕಾಸು ಸೇರ್ಪಡೆಗೆ ಒತ್ತು ನೀಡಲು ಸಾಲ, ವಿಮೆ ಅಥವಾ ಹೂಡಿಕೆಗೆ ಪರ್ಯಾಯ ಮಾದರಿಗಳು ಹಣಕಾಸು ಸೇವೆಗಳ ವ್ಯಾಪಕವಾಗಿ ಬಳಕೆ ಮಾಡಿಕೊಳ್ಳಲು ಚಾಲನೆ ನೀಡಲು ವಿವಿಧ ಜನಸಂಖ್ಯಾಶಾಸ್ತ್ರ ಹಾಗೂ ಭೌಗೋಳಿಕತೆಗಳಿಗೆ ಪವರ್ ಡೇಟಾ ಸಿಗ್ನಲ್‌ ಗಳನ್ನು ಬಳಕೆ ಮಾಡುವ ಹೊಸ ಉತ್ಪನ್ನಗಳು ಡಿಜಿಟಲ್ ಪಾವತಿ ಮಾಹಿತಿಯನ್ನು ಪಡೆದ ವರ್ಧಿತ ದೃಶ್ಯೀಕರಣ ಹಾಗೂ ಬುದ್ಧಿವಂತಿಕೆಯಿಂದ ಪಾಲ್ಗೊಳ್ಳುವವರು ರಚಿಸಿರುವ ಅಂತಿಮ ಅಪ್ಲಿಕೇಶನ್ ಇವುಗಳಲ್ಲಿ ಯಾವುದಾದರು ಒಂದನ್ನು ಹೊಂದಿರಬೇಕು. * ತಮ್ಮ ಹ್ಯಾಕ್‌'ಗಳನ್ನು ಅಭಿವೃದ್ಧಿಪಡಿಸಲು ಕೆಳಗಿನ ಸ್ಯಾಂಡ್‌ಬಾಕ್ಸ್ ಪ್ಲಾಟ್‌ ಫಾರ್ಮ್‌ಗಳನ್ನು ಬಳಕೆ ಮಾಡುವದು. - ಸೆಟು ಎಎ ಸ್ಯಾಂಡ್‌ಬಾಕ್ಸ್. - ಸೆಟು ಪಾವತಿಗಳ ಸ್ಯಾಂಡ್‌ಬಾಕ್ಸ್. * ಹಣಕಾಸು ತಂತ್ರಜ್ಞಾನ ಇದನ್ನು ಸಂಕ್ಷಿಪ್ತವಾಗಿ ಫಿನ್‌ಟೆಕ್ ಎನ್ನಲಾಗುತ್ತದೆ, ಹಣಕಾಸು ತಂತ್ರಜ್ಞಾನ ಎಂಬುದು ಹಣಕಾಸು ಸೇವೆಗಳ ವಿತರಣೆಯಲ್ಲಿ ಸಾಂಪ್ರದಾಯಿಕ ಹಣಕಾಸು ವಿಧಾನಗಳೊಂದಿಗೆ ಸ್ಪರ್ಧಿಸುವ ಗುರಿಯನ್ನು ಹೊಂದಿದೆ. ಫಿನ್‌ಟೆಕ್ ಇದು ಆರ್ಥಿಕ ಚಟುವಟಿಕೆಗಳನ್ನು ಸುಧಾರಿಸಲು ತಂತ್ರಜ್ಞಾನವನ್ನು ಬಳಸುವ ಉದಯೋನ್ಮುಖ ಉದ್ಯಮವಾಗಿದೆ. ಹಣಕಾಸು ತಂತ್ರಜ್ಞಾನ ಕಂಪನಿಗಳು ಸ್ಟಾರ್ಟ್‌ಅಪ್‌ಗಳು ಹಾಗೂ ಸ್ಥಾಪಿತ ಹಣಕಾಸು ಸಂಸ್ಥೆಗಳು ಹಾಗೂ ಅಸ್ತಿತ್ವದಲ್ಲಿರುವ ಹಣಕಾಸು ಕಂಪನಿಗಳು ನೀಡುವ ಹಣಕಾಸು ಸೇವೆಯನ್ನು ಬದಲಿಸಲು ತಂತ್ರಜ್ಞಾನ ಕಂಪನಿಗಳನ್ನು ಹೊಂದಿರುತ್ತವೆ.