Job Description: * ಇತ್ತೀಚಿಗೆ ಭಾರತೀಯ ಫುಟ್ಬಾಲ್ ತಂಡದ ಮಾಜಿ ಆಟಗಾರ ಹಾಗೂ ಮಿಡ್‌ಫೀಲ್ಡರ್‌ ಆಗಿದ್ದ ಸುರಜಿತ್‌ ಸೇನ್‌ಗುಪ್ತ ಅವರು ತಮ್ಮ 71 ನೇ ವಯಸ್ಸಿನಲ್ಲಿ ಕೋವಿಡ್‌-19 ಸೋಂಕು ತಗುಲಿರುವ ಹಿನ್ನಲೆಯಿಂದಾಗಿ ನಿಧನರಾಗಿದ್ದಾರೆ. ಇವರಷ್ಟೇ ಅಲ್ಲದೇ ಇತ್ತೀಚಿಗೆ ಪ್ರಮುಖ ಆಟಗಾರ ಸುಭಾಷ್‌ ಭೌಮಿಕ್‌ ನಿಧನರಾಗಿದ್ದಾರೆ, ಇವರು ಭಾರತ ಹಾಗೂ ಈಸ್ಟ್‌ ಬೆಂಗಾಲ್‌ ತಂಡದ ಆಟಗಾರರಾಗಿದ್ದರು. * ಸುರಜಿತ್‌ ಸೇನ್‌ಗುಪ್ತ ಅವರು ಈ ಹಿಂದೆ 1970 ರ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿರುವ ಭಾರತೀಯ ತಂಡದ ಆಟಗಾರರಾಗಿದ್ದರು. ಇವರು ಈಸ್ಟ್‌ ಬೆಂಗಾಲ್‌ ತಂಡಕ್ಕಾಗಿ ಆಡುತ್ತಿದ್ದರು. * ಈಸ್ಟ್‌ ಬೆಂಗಾಲ್‌ ತಂಡದಲ್ಲಿ ಸುರಜಿತ್‌ ಸೇನ್‌ಗುಪ್ತ ಅವರು ಪ್ರಮುಖ ಆಟಗಾರರಾಗಿ ಮಿಂಚಿದ್ದರು, ಇವರು ಈಸ್ಟ್‌ ಬೆಂಗಾಲ್‌ ತಂಡಕ್ಕಾಗಿ ಆಡುತ್ತಿದ್ದ ಸಂಧರ್ಭದಲ್ಲಿ ಈಸ್ಟ್‌ ಬೆಂಗಾಲ್‌ ತಂಡವು ಸತತವಾಗಿ '6' ಬಾರಿ ಅಂದರೆ 1970 ರಿಂದ 1976 ರವರೆಗೆ ಪಶ್ಚಿಮ್ಮ ಬಂಗಾಳದ ಕೋಲ್ಕತ್ತ ಫುಟ್‌ಬಾಲ್‌ ಲೀಗ್‌ನಲ್ಲಿ ಚಾಂಪಿಯನ್‌ ಪಟ್ಟವನ್ನು ಪಡೆದುಕೊಂಡಿದೆ. ಇಅದರ ಜೊತೆಯಲ್ಲಿ '6' ಬಾರಿ ಐಎಫ್‌ಎ(IFA) ಶೀಲ್ಡ್ ಮತ್ತು '3' ಬಾರಿ ಡ್ಯುರಾಂಡ್‌ ಕಪ್‌ನಲ್ಲಿ ಚಾಂಪಿಯನ್‌ ಪಟ್ಟವನ್ನು ಪಡೆದುಕೊಂಡಿದೆ. * ಈ ಮೊದಲು ಸುರಜಿತ್‌ ಅವರು ಎರಡು ವರ್ಷಗಳ ಅವಧಿಗೆ ಅಂದರೆ 1972 ರಿಂದ 1974 ನಡುವೆ ಮೋಹನ್‌ ಬಾಗನ್‌ ತಂಡಕ್ಕೆ ಆಡಿದ್ದರು. ಮತ್ತೇ 1980ರಲ್ಲಿ ಮಹಮಡನ್‌ ಸ್ಪೋರ್ಟಿಂಗ್‌ ತಂಡದ ಪರವಾಗಿ ಆಟ ಆಡಿದ್ದರು. * 1975 ರಲ್ಲಿ ಐಎಫ್‌ಎ(IFA) ಶೀಲ್ಡ್ ಫೈನಲ್‌ನಲ್ಲಿ ಈಸ್ಟ್ ಬೆಂಗಾಲ್‌ನ ಬಗಾನ್‌ನ 5-0 ಅಂತರದಲ್ಲಿ ಗೆದ್ದಿರುವ ತಂಡದಲ್ಲಿ ಒಬ್ಬರಾಗಿದ್ದರು. ಪ್ರಸ್ತುತ ಈ ಗೆಲುವು ಕೋಲ್ಕತ್ತಾ ಡರ್ಬಿಯ ಇತಿಹಾಸದಲ್ಲಿ ದೊಡ್ಡ ಅಂತರದ ಗೆಲುವಾಗಿದೆ. ಮತ್ತೇ 1976 ರಲ್ಲಿ ಇವರು ಸಂತೋಷ್ ಟ್ರೋಫಿ ಅಭಿಯಾನದಲ್ಲಿ ಬಂಗಾಳ ತಂಡದ ನಾಯಕರಾಗಿದ್ದರು. ಸೂರಜಿತ್ ಅವರು ಅನೇಕ ಟ್ರೋಫಿಗಳು ಮತ್ತು ಪ್ರಶಸ್ತಿಗಳನ್ನು ಜಯಿಸಿದ್ದಾರೆ. * ಸುರಜಿತ್‌ ಅವರು ನಿಧನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟ್ವೀಟ್‌ ಮಾಡುವ ಮೂಲಕ ಸಂತಾಪವನ್ನು ಸೂಚಿಸಿದ್ದಾರೆ.