Job Description: * ಭಾರತ ದೇಶವು ಫೆಬ್ರವರಿ. 12 ರಂದು ರಾಷ್ಟ್ರೀಯ ಉತ್ಪಾದಕ(Productivity) ದಿನವನ್ನು ಆಚರಣೆ ಮಾಡುತ್ತದೆ. ಈ ದಿನದಂದು ಗುರಿಗಳನ್ನು ಸಾಧಿಸಲು ಸಮಯ, ಕೌಶಲ್ಯ, ಶಕ್ತಿ, ಬುದ್ಧಿವಂತಿಕೆ, ಸಂಪನ್ಮೂಲಗಳು ಮತ್ತು ಅವಕಾಶಗಳನ್ನು ಕಲ್ಪಿಸುತ್ತದೆ. * ಪ್ರಸ್ತುತ ರಾಷ್ಟ್ರೀಯ ಉತ್ಪಾದಕತೆ ಮಂಡಳಿ (NPC) ಭಾರತದ ಎಲ್ಲಾ ಕ್ಷೇತ್ರಗಳಲ್ಲಿ ಉತ್ಪಾದಕತೆ ಹಾಗೂ ಗುಣಮಟ್ಟದ ಜಾಗೃತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ರಾಷ್ಟ್ರೀಯ ಉತ್ಪಾದಕತೆ ದಿನವನ್ನುಆಯೋಜಿಸಿದೆ. * ಪ್ರಸ್ತುತ ನ್ಯಾಷನಲ್ ಪ್ರೊಡಕ್ಟಿವಿಟಿ ಕೌನ್ಸಿಲ್ 2022 ರ ಫೆಬ್ರವರಿ. 12 ರಿಂದ 18 ರವರೆಗೆ 'ರಾಷ್ಟ್ರೀಯ ಉತ್ಪಾದಕತೆ ಸಪ್ತಾಹ'ವನ್ನು ಆಚರಣೆ ಮಾಡುತ್ತದೆ. * ಫೆಬ್ರವರಿ. 12 ರಿಂದ 18 ರವರೆಗೆ ವಾರವನ್ನು ಈ ಉದ್ದೇಶಗಳ ಜೊತೆ ಆಚರಣೆ ಮಾಡಲಾಗುತ್ತದೆ: - ಉತ್ಪಾದಕತೆಯ ಪರಿಕರಗಳ ಅನುಷ್ಠಾನವನ್ನು ಉತ್ತೇಜಿಸುವದು. - ಸಮಕಾಲೀನ ವಿಷಯಗಳ ಜೊತೆಗೆ ತಂತ್ರಗಳನ್ನು ಹೆಚ್ಚಿಸಲು. - ಉತ್ಪಾದಕತೆ, ಸ್ಪರ್ಧಾತ್ಮಕತೆ, ಗುಣಮಟ್ಟ ಹಾಗೂ ದಕ್ಷತೆಯನ್ನು ಬಗ್ಗೆ ತಿಳಿಸಲು. - ಸೆಮಿನಾರ್‌ಗಳು, ಕಾರ್ಯಾಗಾರಗಳು ಹಾಗೂ ಗುಣಮಟ್ಟದ ಘಟನೆಗಳ ಮೂಲಕ ಪ್ರಜ್ಞೆಯನ್ನು ಮೂಡಿಸುವದು. - ಅಭಿಯಾನಗಳನ್ನು ಏರ್ಪಡಿಸುವುದು ಜೊತೆಗೆ ಉತ್ಪಾದಕತೆಯನ್ನು ಹೆಚ್ಚಿಸುವ ಬಗ್ಗೆ ಜ್ಞಾನವನ್ನು ನೀಡುವದು. * ಪ್ರಸ್ತುತ ರಾಷ್ಟ್ರೀಯ ಉತ್ಪಾದಕ ಮಂಡಳಿಯು(NPC) ಈ ವರ್ಷ 'ಉತ್ಪಾದನೆಯ ಮೂಲಕ ಸ್ವಾವಲಂಬನೆ' ಎಂಬ ವಿಷಯದ ಅಡಿಯಲ್ಲಿ ಈ ಉತ್ಪಾದಕತೆಯ ವಾರವನ್ನು ಆಚರಣೆ ಮಾಡುತ್ತಿದೆ. * ಈ ರಾಷ್ಟ್ರೀಯ ಉತ್ಪಾದಕತೆ (Productivity) ದಿನವನ್ನು ಉತ್ಪಾದಕತೆ, ನಾವೀನ್ಯತೆ ಹಾಗೂ ದಕ್ಷತೆಯ ವಿಷಯದ ಬಗ್ಗೆ ಜಾಗೃತಿ ಮೂಡಿಸಲು ಆಚರಣೆ ಮಾಡಲಾಗುತ್ತದೆ. * ರಾಷ್ಟ್ರೀಯ ಉತ್ಪಾದಕತೆ ಮಂಡಳಿ (NPC)ಯನ್ನು ಈ ಹಿಂದೆ 1958 ರಲ್ಲಿ ಸ್ಥಾಪಿಸಲಾಗಿರುವ ಸ್ವಾಯತ್ತ ಸಂಸ್ಥೆಯಾಗಿದೆ. ಇದೊಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಭಾರತದ ಉತ್ಪಾದನಾ ಸಂಸ್ಕೃತಿಯನ್ನು ಉತ್ತೇಜಿಸಲು ಮೀಸಲಾದ ರಾಷ್ಟ್ರೀಯ ಸಂಸ್ಥೆಯಾಗಿದೆ. NPC ಯನ್ನು 1860 ರ ಸೊಸೈಟೀಸ್ ನೋಂದಣಿ ಕಾಯಿದೆ ಅಡಿಯಲ್ಲಿ ನೋಂದಾಯಿಸಲಾಗಿದೆ. ಅಷ್ಟೇ ಅಲ್ಲದೇ ಇದೊಂದು ಟೋಕಿಯೋ ಮೂಲದ ಏಷ್ಯನ್ ಪ್ರೊಡಕ್ಟಿವಿಟಿ ಆರ್ಗನೈಸೇಶನ್'ನ ಒಂದು ಘಟಕವಾಗಿದೆ, ಅಷ್ಟೇ ಅಲ್ಲದೇ ಇದೊಂದು ಅಂತರ-ಸರ್ಕಾರಿ ಸಂಸ್ಥೆಯಾಗಿದೆ.