Job Description: * ಭಾರತದಲ್ಲಿನ ಜಪಾನೀಸ್ ಇಂಡಸ್ಟ್ರಿಯಲ್ ಟೌನ್‌ಶಿಪ್‌ಗಳ ಅಡಿಯಲ್ಲಿ, ಭಾರತದ ಕೈಗಾರಿಕೆ ಹಾಗೂ ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ(DPIIT) ಹಾಗೂ ಜಪಾನ್‌ನ ಆರ್ಥಿಕತೆ, ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯವು ಪ್ರಗತಿಯನ್ನು ಪರಿಶೀಲಿಸಲು ವಾರ್ಷಿಕ ಸಭೆಯನ್ನು ನಡೆಸಿದೆ. * DPIIT ಹಾಗೂ ರಾಜ್ಯಗಳು ಈ ಟೌನ್‌ಶಿಪ್‌ಗಳಲ್ಲಿ ಜಪಾನಿನ ಹೂಡಿಕೆದಾರರಿಗೆ ಲಭ್ಯವಿರುವ ಅಭಿವೃದ್ಧಿಯನ್ನು ಹೊಂದಿರುವ ಮೂಲಸೌಕರ್ಯ ಹಾಗೂ ಭೂಮಿಯನ್ನು ಪ್ರಸ್ತುತಪಡಿಸಿದವು. ಹಾಗೂ ಹೂಡಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ JIT ಗಳಿಗೆ ಕ್ಷೇತ್ರ ಭೇಟಿಗಾಗಿ ಜಪಾನಿನ ಕಂಪನಿಗಳಿಗೆ ಆಹ್ವಾನವನ್ನು ನೀಡಲಾಗಿದೆ. ಹಾಗೂ COVID-19 ಸಾಂಕ್ರಾಮಿಕದ ಬೆಳಕಿನಲ್ಲಿ ವರ್ಚುವಲ್ ವೇದಿಕೆಯಲ್ಲಿ METI ಜೊತೆಗೆ JIT ಗಳ ಸ್ಥಿತಿಯನ್ನು DPIIT ಪರಿಶೀಲಿಸಿದೆ. * ಭಾರತದಲ್ಲಿನ ಜಪಾನ್ ರಾಯಭಾರ ಕಚೇರಿ ಹಾಗೂ ಜಪಾನ್ ಎಕ್ಸ್‌ಟರ್ನಲ್ ಟ್ರೇಡ್ ಆರ್ಗನೈಸೇಶನ್ ಭಾಗವಹಿಸಿದ್ದವು. ಭಾರತದ ಕಡೆಯಿಂದ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು, ಜಪಾನಿನ ಟೋಕಿಯೊದಲ್ಲಿನ ಭಾರತದ ರಾಯಭಾರ ಕಚೇರಿ ಹಾಗೂ ಇನ್ವೆಸ್ಟ್ ಇಂಡಿಯಾದ ಪ್ರತಿನಿಧಿಗಳು ಹಾಗೂ ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. * ಈ ಹಿಂದೆ 2015 ರ ಏಪ್ರಿಲ್ ನಲ್ಲಿ ಜಪಾನ್ ಹಾಗೂ ಭಾರತ ನಡುವೆ ಸಹಿ ಹಾಕಲಾಗಿರುವ 'ಭಾರತ-ಜಪಾನ್ ಹೂಡಿಕೆ ಹಾಗೂ ವ್ಯಾಪಾರ ಪ್ರಚಾರ ಮತ್ತು ಏಷ್ಯಾ-ಪೆಸಿಫಿಕ್ ಆರ್ಥಿಕ ಏಕೀಕರಣಕ್ಕಾಗಿ ಕ್ರಿಯಾ ಕಾರ್ಯಸೂಚಿಗೆ ಅನುಗುಣವಾಗಿ ಜಪಾನ್ ಕೈಗಾರಿಕಾ ಟೌನ್‌ಶಿಪ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ಇದರಿಂದಾಗಿ 'ಜಪಾನ್ ಕೈಗಾರಿಕಾ ಟೌನ್‌ಶಿಪ್‌ಗಳನ್ನು' ಭಾರತಕ್ಕೆ ಜಪಾನಿನ ಹೂಡಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತದಲ್ಲಿ ನಿರ್ದಿಷ್ಟವಾಗಿ ದೆಹಲಿ ಮುಂಬೈ ಕೈಗಾರಿಕಾ ಕಾರಿಡಾರ್ ಹಾಗೂ ಚೆನ್ನೈ ಬೆಂಗಳೂರು ಕೈಗಾರಿಕಾ ಕಾರಿಡಾರ್ ಪ್ರದೇಶಗಳಲ್ಲಿ ಅಭಿವೃದ್ಧಿಪಡಿಸುವ ಸಲುವಾಗಿ ಈ ಕ್ರಮಗಳನ್ನು ಕೈಗೊಳ್ಳಲು ಸಹಿ ಹಾಕಲಾಗಿದೆ. * ಪ್ರಸ್ತುತ ಭಾರತದಲ್ಲಿ ದೇಶ-ಕೇಂದ್ರಿತ ಕೈಗಾರಿಕಾ ಟೌನ್‌ಶಿಪ್‌ಗಳನ್ನು ಒಳಗೊಂಡಿರುವ ಏಕೈಕ ದೇಶ ಜಪಾನ್. ಪ್ರಸ್ತುತ JIT ಗಳಾದ್ಯಂತ 114 ಜಪಾನೀಸ್ ಕಂಪನಿಗಳಿವೆ. ನೀಮ್ರಾನಾ ಹಾಗೂ ಶ್ರೀ ಸಿಟಿ ಕೈಗಾರಿಕಾ ಟೌನ್‌ಶಿಪ್‌ಗಳು ಅಧಿಕ ಜಪಾನಿನ ಕಂಪನಿಗಳಿಗೆ ಆತಿಥ್ಯವನ್ನು ವಹಿಸಲಿವೆ. ಇಸುಜು, ದೈಕೀನ್, ಯಮಹ ಮ್ಯೂಸಿಕ್, ಕೊಬೆಲ್ಕ, ಹಿಟಾಚಿ ಆಟೋಮೋಟಿವ್ ಇನ್ನಿತರ ಕಂಪನಿಗಳು ಈ ಟೌನ್‌ಶಿಪ್‌ಗಳಲ್ಲಿ ಉತ್ಪಾದನೆಯನ್ನು ಸ್ಥಾಪನೆ ಮಾಡಲು ಜಪಾನ್ ದೇಶದ ಹೂಡಿಕೆದಾರರನ್ನು ಗುರುತಿಸಲಿವೆ ಎಂದಿದ್ದಾರೆ.