Job Description: * ಈ ಹಿಂದೆ 2019 ರ ಫೆಬ್ರವರಿ.14 ರಂದು ಪುಲ್ವಾಮಾ ದಾಳಿಯು ಸಂಭವಿಸಿದೆ. ಪ್ರಸ್ತುತ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಮಾರ್ಗದಲ್ಲಿ ಭಾರತೀಯ ಭದ್ರತಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿರುವ ವಾಹನಗಳ ಬೆಂಗಾವಲು ಜಮ್ಮು ಮತ್ತು ಕಾಶ್ಮೀರದ ಹಿಂದಿನ ರಾಜ್ಯದ ಪುಲ್ವಾಮಾ ಜಿಲ್ಲೆಯ ಲೆಥಾಪೋರಾದಲ್ಲಿ ವಾಹನದ ಆತ್ಮಹತ್ಯಾ ಬಾಂಬರ್‌ನಿಂದ ದಾಳಿ ಸಂಭವಿಸಿದೆ. * ಈ ಆತ್ಮಹತ್ಯಾ ಬಾಂಬರ್‌ನ ದಾಳಿಯಿಂದಾಗಿ ಸುಮಾರು 40 ಭಾರತೀಯ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿಗಳು ಮತ್ತು ಪುಲ್ವಾಮಾ ಜಿಲ್ಲೆಯ ಸ್ಥಳೀಯ ಕಾಶ್ಮೀರಿ ಯುವಕ ಆದಿಲ್ ಅಹ್ಮದ್ ದಾರ್ ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ಮೂಲದ ಇಸ್ಲಾಮಿ ಭಯೋತ್ಪಾದಕ ಜೈಶ್-ಎ-ಮೊಹಮ್ಮದ್ ಗುಂಪು ಈ ದಾಳಿಯ ಹೊಣೆಯನ್ನು ಹೊತ್ತಿದೆ. ಭಾರತವು ಈ ದಾಳಿಗೆ ನೆರೆಯ ರಾಷ್ಟ್ರ ಪಾಕಿಸ್ತಾನವನ್ನು ದೂಷಿಸಿದೆ. ಈ ದಾಳಿಯಿಂದಾಗಿ ಭಾರತ-ಪಾಕಿಸ್ತಾನ ಸಂಬಂಧಗಳಿಗೆ ತೀವ್ರ ಹೊಡೆತವನ್ನು ಉಂಟುಮಾಡಿದೆ. * ಈ ಹಿನ್ನಲೆಯಿಂದಾಗಿ 2019 ರಲ್ಲಿ ಭಾರತ-ಪಾಕಿಸ್ತಾನ ಮಿಲಿಟರಿ ಬಿಕ್ಕಟ್ಟಿಗೆ ಕಾರಣವಾಯಿತು. ನಂತರ ಭಾರತೀಯ ತನಿಖೆಗಳು 19 ಆರೋಪಿಗಳನ್ನು ಪತ್ತೆ ಹಚ್ಚಿದವು. ಹಾಗೂ 2021 ರ ಆಗಸ್ಟ್ ನ ವೇಳೆಗೆ '6' ಪ್ರಮುಖ ಆರೋಪಿಗಳು ಕೊಲ್ಲಲ್ಪಟ್ಟರು ಹಾಗೂ '7' ಜನರನ್ನು ಬಂಧನಕ್ಕೆ ಒಳಪಡಿಸಲಾಯಿತು. * ಈ ಹಿಂದೆ 2019 ರಲ್ಲಿ ಆವಂತಿಪೋರಾ ಬಳಿಯ ಲೆಥ್‌ಪೋರಾದಲ್ಲಿ ಭದ್ರತಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿರುವ ಪರಿಣಾಮದಿಂದಾಗಿ 76 ನೇ ಬೆಟಾಲಿಯನ್‌ನ 40 CRPF ಸಿಬ್ಬಂದಿಗಳು ಮೃತಪಟ್ಟರು, ಹಾಗೂ ಗಾಯಾಳುಗಳನ್ನು ಶ್ರೀನಗರದ ಸೇನಾ ಆಸ್ಪತ್ರೆಗೆ ಸೇರಿಸಲಾಯಿತು. * ಈ ದಾಳಿಯು 1989 ರಿಂದ ಕಾಶ್ಮೀರದಲ್ಲಿ ಭಾರತದ ರಾಜ್ಯ ಭದ್ರತಾ ಸಿಬ್ಬಂದಿಯ ಮೇಲೆ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಾಗಿದೆ. * ಈ ದಾಳಿಯ ದುಷ್ಕರ್ಮಿಯನ್ನು ಆದಿಲ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ, ಇವನು 2016 ರ ಸೆಪ್ಟೆಂಬರ್ ಹಾಗೂ 2018 ರ ಮಾರ್ಚ್ ನಡುವೆ ಆದಿಲ್ ದಾರ್'ನನ್ನು ಭಾರತೀಯ ಅಧಿಕಾರಿಗಳು '6' ಬಾರಿ ಬಂಧಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಆದರೆ ಈತನನ್ನು ಪ್ರತಿ ಬಾರಿಯೂ ಯಾವುದೇ ಆರೋಪಗಳಿಲ್ಲದೆ ಬಿಡುಗಡೆ ಮಾಡಲಾಗಿದೆ. * ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಳಿಯ ತನಿಖೆಗಾಗಿ 12 ಸದಸ್ಯರ ತಂಡವನ್ನು ರಚಿಸಿ ಆ ಸ್ಥಳಕ್ಕೆ ರವಾನಿಸಿತು, ಆ ತಂಡವು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜೊತೆಗೂಡಿ ಕೆಲಸ ಮಾಡಿದೆ. NIA ಅಧಿಕಾರಿಗಳ ಆರಂಭಿಕ ತನಿಖೆ ಪ್ರಕಾರ ಕಾರಿನಲ್ಲಿ 300 ಕಿಲೋಗ್ರಾಂಗಳಷ್ಟು ಸ್ಫೋಟಕಗಳನ್ನು ಸಾಗಿಸುತ್ತಿದೆ ಎಂದು ತಿಳಿಸಲಾಗಿದೆ, ಹಾಗೂ 80 ಕಿಲೋಗ್ರಾಂಗಳಷ್ಟು ಆರ್‌ಡಿಎಕ್ಸ್, ಹಾಗೂ ಅಮೋನಿಯಂ ನೈಟ್ರೇಟ್ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಎನ್ನಲಾಗಿದೆ. ಈ ಎಲ್ಲ ಸ್ಫೋಟಕಗಳನ್ನು ನಿರ್ಮಾಣ ಸ್ಥಳದಿಂದ ಕಳವು ಮಾಡಿರಬಹುದು ಎಂದು ಹೇಳಿಕೆ ನೀಡಿದ್ದಾರೆ.