Job Description: * ಪ್ರಸ್ತುತ ಚೀನಾ ತೈಪೆಯ ಚುನ್‌ ಸಿನ್ ಸೆಂಗ್‌ ಅವರು ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೂರ್ನಿಯ ಚಾಂಪಿಯನ್‌ ಪಟ್ಟವನ್ನು ಪಡೆದುಕೊಂಡರು. ಇದೀಗ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಆವರಣದಲ್ಲಿ ನಡೆದ 1 ಗಂಟೆ 44 ನಿಮಿಷದ ವರೆಗೆ ನಡೆದ ಸಿಂಗಲ್ಸ್ ವಿಭಾಗದ ಫೈನಲ್‌ ಹಂತದಲ್ಲಿ ಚುನ್‌ ಸಿನ್ ಅವರು ಕ್ರೊವೇಷ್ಯಾದ ಬೋರ್ನ ಗೋಜೊ ಅವರನ್ನು 6-4, 7-5 ರ ಅಂತರದಲ್ಲಿ ಮಣಿಸಿದ್ದಾರೆ. ಪ್ರಸ್ತುತ ಚುನ್ ಸಿನ್ ಅವರು ಗೆದ್ದಿರುವ 2 ನೇ ಎಟಿಪಿ ಟ್ರೋಫಿ ಇದಾಗಿದೆ. * ಈ ಎಟಿಪಿ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಫೈನಲ್‌ ಹಂತವನ್ನು ಪ್ರವೇಶಿಸಿದ ಕ್ರೊವೇಷ್ಯಾದ ಬೋರ್ನ ಗೋಜೊ ಅವರು ಆರಂಭದಲ್ಲಿ ಕೆಲವು ಪಾಯಿಂಟ್‌ಗಳನ್ನು ಕಲೆಹಾಕಿದರು ಆದರೆ ಅವರೇ ಮಾಡಿರುವ ತಪ್ಪುಗಳಿಂದ ಆ ಪಾಯಿಂಟ್‌ಗಳನ್ನು ಕಳೆದುಕೊಂಡರು. ಚುನ್ ಸಿನ್ ಅವರು ಕ್ರಾಸ್ ಕೋರ್ಟ್ ಡ್ರಾಪ್‌ ಶಾಟ್‌ಗಳ ಮೂಲಕ ಮಿಂಚಿ ಸತತ ''5 ಗೇಮ್‌ ಗಳನ್ನೂ ಜಯಿಸಿಕೊಂಡರು. * ಪ್ರಸ್ತುತ ನಿತಿನ್ ಕುಮಾರ್ ಸಿನ್ಹಾ ಹಾಗೂ ಎನ್‌.ಶ್ರೀರಾಮ್ ಬಾಲಾಜಿ ಅವರು ಬೆಂಗಳೂರು ಓಪನ್-2 ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಜಯ ಗಳಿಸಿ 2 ನೇ ಸುತ್ತಿಗೆ ಪ್ರವೇಶ ಪಡೆದು ಕೊಂಡರು. ಪ್ರಸ್ತುತ ಕೆಎಸ್‌ಎಲ್‌ಟಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನಿತಿನ್ ಕುಮಾರ್ ಜರ್ಮನಿಯ ಕಾಯ್‌ ವೆರ್ನೆಟ್‌ ವಿರುದ್ಧ ಜಯಿಸಿದ್ದಾರೆ. ಶ್ರೀರಾಮ್ ಬಾಲಾಜಿ ಅವರು ಬ್ರೆಜಿಲ್‌'ನ ಗ್ಯಾಬ್ರಿಯಲ್ ಡಿಕಾಮ್ಸ್‌ ವಿರುದ್ಧ ಜಯಿಸಿದ್ದಾರೆ. * ಅರ್ಹತಾ ಸುತ್ತಿನ ಪಂದ್ಯಗಳ ಫಲಿತಾಂಶಗಳು: - ಭಾರತೀಯ ಮುಕುಂದ್ ಶಶಿಕುಮಾರ್‌ ಅವರಿಗೆ ಅಭಿನವ್ ಷ‌ಣ್ಮುಖಂ ಅವರ ವಿರುದ್ಧ ಜಯ. - ಭಾರತದ ಮನೀಷ್ ಸುರೇಶ್ ಕುಮಾರ್‌ ಅವರಿಗೆ ಋಷಿ ರೆಡ್ಡಿ ಅವರ ವಿರುದ್ಧ 6-1, 6-0 ಅಂತರದಿಂದ ಜಯ. - ಆಸ್ಟ್ರೇಲಿಯಾದ ಆಯಂಡ್ರ್ಯೂ ಹ್ಯಾರಿಸ್‌ ಅವರಿಗೆ ಭಾರತದ ಪ್ರಜ್ವಲ್ ದೇವ್‌ ಅವರ ವಿರುದ್ಧ 6-2 7-6 ಅಂತರದಲ್ಲಿ ಜಯ. - ಭಾರತದ ದಿಗ್ವಿಜಯ್ ಪ್ರತಾಪ್‌ ಅವರಿಗೆ ಆಸ್ಟ್ರೇಲಿಯಾದ ಥಾಮಸ್‌ ಫ್ಯನ್‌ಕಟ್‌ ಅವರ ವಿರುದ್ಧ 4-6, 7-5, 6-2ರ ಅಂತರದಲ್ಲಿ ಜಯ. - ಜಪಾನ್‌ನ ರಿಯೊ ನೊಗುಚಿ ಅವರಿಗೆ ಭಾರತದ ಸೂರಜ್ ಪ್ರಬೋಧ್‌ ವಿರುದ್ಧ 6-1, 7-6 ರ ಅಂತರದಲ್ಲಿ ಜಯ. - ಭಾರತದ ನಿತಿನ್ ಕುಮಾರ್ ಸಿನ್ಹಾಗೆ ಜರ್ಮನಿಯ ಕಾಯ್‌ ವೆಹ್ನೆಟ್‌ ವಿರುದ್ಧ ಗೆಲುವು. - ರಷ್ಯಾದ ಬೋಗ್ದನ್ ಬೊಬ್ರೊವ್‌ ಅವರಿಗೆ ಜಪಾನ್‌ನ ತೊಶಿಹಿಡೆ ಮಸುಹಿ ಅವರ ವಿರುದ್ದ ಜಯ. - ಜೆಕ್ ಗಣರಾಜ್ಯದ ಡಾಮಿನಿಕ್ ಪಲನ್‌ ಅವರಿಗೆ ಆಸ್ಟ್ರಿಯಾದ ಅಲೆಕ್ಸಾಂಡರ್ ಎರ್ಲರ್‌ ಅವರ ವಿರುದ್ಧ ಗೆಲುವು. - ಭಾರತದ ಶ್ರೀರಾಮ್ ಬಾಲಾಜಿ ಅವರಿಗೆ ಬ್ರೆಜಿಲ್‌ನ ಗ್ಯಾಬ್ರಿಯೆಲ್ ಡಿಕ್ಯಾಮ್ಸ್‌ ಅವರ ವಿರುದ್ಧ ಗೆಲುವು. - ಗ್ರೀಸ್‌ನ ಮಾರ್ಕೊಸ್‌ ಕಲವೆಲೊನಿಸ್‌ ಅವರಿಗೆ ಜೆಕ್ ಗಣರಾಜ್ಯದ ಜರಸ್ಲೊವ್‌ ಪೊಪಿಸಿಲ್ ಅವರ ವಿರುದ್ಧ ಗೆಲುವು. - ಉಕ್ರೇನ್‌ನ ವ್ಲಾಡಿಸ್ಲಾವ್‌ ಒರ್ಲೊವ್‌ ಅವರಿಗೆ ಧೀರಜ್ ಶ್ರೀನಿವಾಸನ್ ಅವರ ವಿರುದ್ಧ ಜಯ. - ಸ್ವಿಟ್ಜರ್ಲೆಂಡ್‌ನ ಆಯಂಟೊಯ್ನ್‌ ಬೆಲಿಯರ್‌ ಅವರಿಗೆ ಭಾರತದ ಕರಣ್ ಸಿಂಗ್ ಅವರ ವಿರುದ್ಧ ಗೆಲುವು ದಾಖಲಿಸಿದ್ದಾರೆ. * ಪ್ರಸ್ತುತ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಇಲ್ಲಿಯವರೆಗಿನ '4' ಆವೃತ್ತಿಗಳಿಗೆ ಬೆಂಬಲನ್ನು ನೀಡಿದೆ, ಅದೇ ರೀತಿಯಲ್ಲಿ ಬೆಂಗಳೂರು ಓಪನ್‌'ನ ಮುಂದಿನ '5' ಆವೃತ್ತಿಗಳಿಗೂ ಬೆಂಬಲನ್ನು ನೀಡಲು ಮುಂದಾಗಿದೆ ಎಂದು ತಿಳಿಸಿದ್ದಾರೆ.