Job Description: * ಪ್ರಸ್ತುತ ಚೀನಾದ ಬೀಜಿಂಗ್‌ ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿರುವ ಭಾರತದ ಏಕೈಕ ಕ್ರೀಡಾಪಟು ಆಲ್ಪೈನ್ ಸ್ಕೀಯರ್‌ ಆರಿಫ್‌ ಖಾನ್ ಅವರು ಜೈಂಟ್‌ ಸ್ಲಲೋಮ್‌ನಲ್ಲಿ 45 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. * ಆರಿಫ್‌ ಖಾನ್ ಅವರು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯವರಾಗಿದ್ದರೆ '2' ರೇಸ್‌ಗಳಲ್ಲಿ ಸುಮಾರು 2 ಗಂಟೆ 47 ನಿಮಿಷ 24 ಸೆಕೆಂಡುಗಳಲ್ಲಿ ತಮ್ಮ ಗುರಿಯನ್ನು ತಲುಪಿದ್ದಾರೆ. * ಆರಿಫ್‌ ಖಾನ್ ಅವರು ಯಾಂಗಿಂಗ್ ರಾಷ್ಟ್ರೀಯ ಆಲ್ಪೈನ್‌ ಸ್ಕೀಯಿಂಗ್‌ ಕೇಂದ್ರದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು ಆ ಪ್ರದೇಶದಲ್ಲಿನ ಹವಾಮಾನದಿಂದ ಅತ್ಯಂತ ಕಠಿಣ ಸವಾಲು ಎದುರಿಸಿದರು. ಆರಿಫ್‌ ಅವರು ಮೊದಲನೇ ರೇಸ್‌ನಲ್ಲಿ 53 ನೇ ಸ್ಥಾನ ಪಡೆದುಕೊಂಡಿದ್ದರು. ಮತ್ತೆ 2 ನೇ ರೇಸ್‌ನಲ್ಲಿ 44 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆದರೆ ಒಟ್ಟಾರೆಯಾಗಿ ಆರಿಫ್‌ ಅವರು ತೆಗೆದುಕೊಂಡಿರುವ ಸಮಯದ ಆಧಾರದಲ್ಲಿ 45 ನೇ ಸ್ಥಾನವನ್ನು ನೀಡಲಾಗಿದೆ. * ಈ ವಿಭಾಗದಲ್ಲಿ ಸ್ವಿಟ್ಜರ್ಲೆಂಡ್‌ನ ಮಾರ್ಕೊ ಒಡೆರ್ಮಟ್ ಅವರು ಚಿನ್ನ ಪದಕವನ್ನು ಜಯಿಸಿದ್ದಾರೆ. ಹಾಗೂ ಸ್ಲೊವೇನಿಯಾದ ಜನ್ ಕ್ರಂಜೆಕ್ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ, ಹಾಗೂ ಫ್ರಾನ್ಸ್‌ನ ಮ್ಯಾಥ್ಯೂ ಫೈವರ್‌ ಅವರು ಕಂಚಿನ ಪದಕವನ್ನು ಜಯಿಸಿಕೊಂಡಿದ್ದಾರೆ.