Job Description: * ಪ್ರಸ್ತುತ ಬಿಹಾರದ ರಾಜಧಾನಿ ಪಾಟ್ನಾದಿಂದ ಸರಿ ಸುಮಾರು 100 ಕಿ. ಮೀ. ದೂರದಲ್ಲಿರುವ, ಈ ಬೋಧಗಯಾ ಪ್ರದೇಶವು ಹಿಂದೂ ಹಾಗೂ ಬೌದ್ಧರ ಪ್ರಮುಖ ಯಾತ್ರಾ ಸ್ಥಳವಾಗಿವೆ. * ಈ ಪ್ರದೇಶವು ಬಿಹಾರದ ಫಲ್ಗು ನದಿಯ ದಂಡೇ ಮೇಲಿನ ಪ್ರದೇಶದಲ್ಲಿದೆ. ಪ್ರಾಕೃತಿಕ ಸೌಂದರ್ಯ ಹಾಗೂ ಶಿಲ್ಪಕಲೆಗೆ ಈ ಬೋಧಗಯಾ ಪ್ರದೇಶವು ಉತ್ತಮ ಹೆಸರಾಗಿದೆ. * ಈ ಬೋಧಗಯಾ ಪ್ರದೇಶಕ್ಕೆ ಅಲ್ಲಿನ ದೇವಾಲಯ, ಪರ್ವತಗಳು, ಕೆರೆಗಳು, ಮೆರುಗನ್ನು ತಂದಿವೆ. ಈ ಹಿಂದೆ 1787 ರಲ್ಲಿ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರು ಕಟ್ಟಿಸಿರುವ ವಿಷ್ಣು ದೇವಾಲಯ ಈ ಪ್ರದೇಶದಲ್ಲಿ ಉತ್ತಮ ಆಕರ್ಷಕವಾಗಿದೆ. ಹಾಗೂ ಇದರ ಹತ್ತಿರದಲ್ಲಿರುವ ಸೂರ್ಯ ಕುಂಡ್, ಸೀತಾ ಕುಂಡ್ ಸರೋವರಗಳು ಈ ಸ್ಥಳಕ್ಕೆ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವನ್ನು ತಂದು ಕೊಂಡಿವೆ. * ಬಿಹಾರ್'ನ ಪಾಟ್ನಾ ನಗರದಿಂದ 1 ಕಿ.ಮೀ. ದೂರದಲ್ಲಿನ ಬ್ರಹ್ಮ ಪರ್ವತದಲ್ಲಿ ಅಶೋಕ ಚಕ್ರವರ್ತಿ ಬೌದ್ಧ ಸ್ತೂಪ ನಿರ್ಮಿಸಲಾಗಿದೆ. ಹಾಗೂ ಈ ಇಲ್ಲಿರುವಂತಹ ಬ್ರಹ್ಮಕುಂಡ್ ಸರೋವರದಲ್ಲಿ ಪಿತೃಗಳಿಗೆ ತರ್ಪಣವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಸ್ಥಳವು ಬೋಧಗಯಾ ಗಯಾದಿಂದ ಸುಮಾರು 12 ಕಿ. ಮೀ. ದೂರದಲ್ಲಿದೆ, ಅಷ್ಟೇ ಅಲ್ಲದೆ ಈ ಸ್ಥಳದಲ್ಲಿನ ಬೋಧಿವೃಕ್ಷದ ಕೆಳಗೆ ಬುದ್ಧನಿಗೆ ಜ್ಞಾನೋದಯವಾಗಿದೆ ಎಂದು ಹೇಳಲಾಗುತ್ತದೆ. * ಮಹಾಬೋಧಿ ಮಂದಿರವು ಈ ಪ್ರದೇಶದಲ್ಲಿನ ಪ್ರಮುಖ ಸ್ಥಳವಾಗಿದೆ. ಈ ಹಿಂದೆ ಕ್ರಿ.ಪೂ. 3 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಶಿಲ್ಪಕಲೆ ಅದ್ಭುತವಾಗಿದೆ, ಹಾಗೂ ಈ ಸ್ಥಳದಲ್ಲಿರುವ ಬುದ್ಧನ ಬೃಹತ್ ಭವ್ಯ ಪ್ರತಿಮೆಯನ್ನು ನೋಡಬಹುದಾಗಿದೆ, ಈ ಪ್ರತಿಮೆಯು ಬೋಧಿ ಸರೋವರ ಬಳಿ ಇದೆ. * ಬೋಧ ಗಯಾ ಸ್ಥಳವು ಈಶಾನ್ಯ ಭಾರತದ ಬಿಹಾರ ರಾಜ್ಯದಲ್ಲಿರುವ ಒಂದು ಗ್ರಾಮವಾಗಿದೆ. ಪ್ರಮುಖ ಬೌದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ, ಹಾಗೂ ಇದು ಪ್ರಾಚೀನ ಇಟ್ಟಿಗೆ ಮಹಾಬೋಧಿ ದೇವಾಲಯ ಸಂಕೀರ್ಣದಿಂದ ಪ್ರಾಬಲ್ಯ ಹೊಂದಿದೆ, ಈ ಪವಿತ್ರ ಬೋಧಿ ವೃಕ್ಷದ ಕೆಳಗೆ ಸಾಕ್ಷಾತ ಬುದ್ಧನು ಜ್ಞಾನೋದಯವನ್ನು ಪಡೆದಿರುವ ಹಿನ್ನಲೆಯಿಂದಾಗಿ ಈ ಸ್ಥಳವನ್ನು ಗುರುತಿಸಲು ನಿರ್ಮಿಸಲಾಗಿದೆ. ಇದರ ಜೊತೆಗೆ ಕಮಲದ ಕೊಳ ಸೇರಿ '6' ಇನ್ನಿತರ ಪವಿತ್ರ ಸ್ಥಳಗಳು ಈ ಪ್ರದೇಶದಲ್ಲಿವೆ.